ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 18.04.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಇತರೆ : 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕೋವಿಡ್-19 ಸೋಂಕು ಖಾಯಿಲೆ ಒಬ್ಬರಿಗೊಬ್ಬರಿಗೆ ದೇಶಾದ್ಯಂತ ಹರಡುತ್ತಿರುವ ಪ್ರಯುಕ್ತ ಮಾನ್ಯ ಕರ್ನಾಟಕ ಸರ್ಕಾರವು ತುರ್ತು ಘೋಷಣೆ ಮಾಡಿ (ಲಾಕ್ ಡೌನ್) ದಿನಾಂಕ:25.03.2020 ರಿಂದ 03.05.2020 ರವರೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿಸಿ ಹಾಗೂ ಜನರ ಓಡಾಟವನ್ನು ನಿಯಂತ್ರಿಸಲು ಆದೇಶವಾಗಿರುತ್ತದೆ. ನಂತರ ರಾಜ್ಯ ಸರ್ಕಾರವು ಸಾರ್ವಜನಿಕರ ಅವಶ್ಯಕತೆಗೆ ಬೇಕಾದ ಹಾಲು, ತರಕಾರಿ ದಿನಸಿ ಪದಾರ್ಥಗಳನ್ನು ಮೆಡಿಕಲ್ ಸ್ಟೋರ್ ಗಳನ್ನು ತೆಗೆಯಲು ಅನುಮತಿ ನೀಡಿರುತ್ತದೆ. ರಾಜ್ಯಾದ್ಯಂತ ಕಲಂ 144 ಸಿ,ಆರ್,ಪಿ,ಸಿ ಅಡಿ ನಿಷೇದಾಜ್ಞೆ ಜಾರಿಯಲ್ಲಿರುತ್ತದೆ ಹೀಗಿರುವಾಗ ದಿನಾಂಕ: 18.04.2020 ರಂದು ಸಂಜೆ 17-15 ಗಂಟೆಯಲ್ಲಿ ಶ್ರೀ. ನವೀನ್, ಪಿಎಸ್ಐ, ಬೇತಮಂಗಲ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಯವರು ಕ್ಯಾಸಂಬಳ್ಳಿ ಮುಖ್ಯ ರಸ್ತೆಯಲ್ಲಿ ಗಸ್ತು ಮಾಡುತ್ತಿದ್ದಾಗ ಮಸೀದಿ ಮುಂಬಾಗದಲ್ಲಿ ರಸ್ತೆ ಬದಿಯಲ್ಲಿ ಆರೋಪಿ ಉಪೇಂದ್ರ, ಹನುಮಂತನಗರ, ಬೇತಮಂಗಲ ರವರು ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ (ಲಾಕ್ಡೌನ್) ತನ್ನ ವಾಸದ ಮನೆಯ ಮುಂದೆ ಒಂದು ತಳ್ಳುವ ಗಾಡಿಯ ಮೇಲೆ ಅತಿ ಹೆಚ್ಚು ಲಾಭ ಗಳಿಸುವ ಉದ್ದೇಶದಿಂದ ಗೋಬಿ ಮಂಜೂರಿ ಹಾಕಿ ಯಾವುದೇ ರೀತಿಯ ಸ್ವಚ್ಚತೆಯನ್ನು ಕಾಪಾಡಿಕೊಳ್ಳದೇ, ಇವರು ನಿಯಮವನ್ನು ಉಲ್ಲಂಘನೆ ಮಾಡಿ ವ್ಯಾಪಾರ ಮಾಡುತ್ತಿದ್ದು, ಸದರಿ ಆರೋಪಿಯನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿರುತ್ತಾರೆ.
– ಅಕ್ರಮ ಮದ್ಯ ಮಾರಾಟ : 01
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಆರೋಪಿಗಳಾದ 1.ಯಲ್ಲಪ್ಪ ಬಿನ್ ಚಿನ್ನಪ್ಪಯ್ಯಪ್ಪ, 2.ಮುನಿರಾಜು ಬಿನ್ ಚಿನ್ನಪ್ಪಯ್ಯಪ್ಪ, 3.ರಘುಪತಿ ಬಿನ್ ಲೇಟ್ ತಿಮ್ಮಪ್ಪ, 4. ರಾಮಪ್ಪ ಬಿನ್ ಮುತ್ತಪ್ಪ, 5. ಬೆಲ್ಲು ಬಿನ್ ಮನ್ನೋಜಿರಾವ್, ಎಲ್ಲರ ವಾಸ ಕದರಿನತ್ತ ಗ್ರಾಮ ರವರು ಕದರಿನತ್ತ ಗ್ರಾಮದ ಹೊಳೆಯ ಪಕ್ಕದಲ್ಲಿರುವ ಶಿವಾಜಿರಾವ್ ರವರ ಜಮೀನಿನ ಬಳಿ 2 ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಂ ಗಳಲ್ಲಿ ಸುಮಾರು 120 ಲೀಟರ್ ಬೆಲ್ಲದ ಕೊಳೆಯನ್ನು ಸಂಗ್ರಹಿಸಿ ಕಳ್ಳಭಟ್ಟಿ ಸಾರಾಯಿ ತಯಾರು ಮಾಡಲು ಸಿದ್ದತೆ ಮಾಡಿಕೊಂಡಿರುವುದಾಗಿ ಶ್ರೀ.ದಯನಂದ, ಪಿಎಸ್ಐ, ಕಾಮಸಮುದ್ರಂ ಪೊಲೀಸ್ ಠಾಣೆಯಯವರು ಬಂದ ಖಚಿತವಾದ ಮಾಹಿತಿ ಮೇರೆಗೆ ಸಿಬ್ಬಂದಿಯೊಂದಿಗೆ ಈ ದಿನ ದಿನಾಂಕ 18.04.2020 ರಂದು ಬೆಳಿಗ್ಗೆ 8.30 ಗಂಟೆಯಿಂದ 9.30 ಗಂಟೆಯವರೆಗೆ ದಾಳಿ ಮಾಡಿದ್ದು . ಆ-1 ಯಲ್ಲಪ್ಪ, ಆ-2 ಮುನಿರಾಜು ರವರು ಸಿಕ್ಕಿದ್ದು ಉಳಿದ 3 ಜನ ಆರೋಪಿಗಳು ತಪ್ಪಿಸಿಕೊಂಡು ಓಡಿ ಹೋಗಿದ್ದು ಆರೋಪಿಗಳು ಸರ್ಕಾರ ಹಾಗೂ ಕೋಲಾರ ಜಿಲ್ಲಾಧಿಕಾರಿಯವರ ಕೋವೀಡ್-19 ಮಾರಕ ಖಾಯಿಲೆ ಸಂಬಂದ ವಿಧಿಸಿದ್ದ ನಿಷೇದಾಜ್ಞೆಯನ್ನು ಉಲ್ಲಂಘನೆ ಮಾಡಿ ಕಳ್ಳಭಟ್ಟಿ ಸಾರಾಯಿ ತಯಾರು ಮಾಡಿ ಮಾರಾಟ ಮಾಡಲು ಪ್ರಯತ್ನಿಸಿರುತ್ತಾರೆಂದು ಸದರಿ ಆಸಾಮಿಗಳ ವಿರುದ್ದ ಮುಂದಿನ ಕ್ರಮ ಜರುಗಿಸಿರುತ್ತಾರೆ.