ದಿನದ ಅಪರಾಧಗಳ ಪಕ್ಷಿನೋಟ 19ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 18.03.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಸಾಧಾರಣ ಕಳ್ಳತನ : 02

       ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 18-03-2020 ರಂದು ಬೆಳಿಗ್ಗೆ 10-30 ಗಂಟೆಗೆ ಬಂಗಾರಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ರವರಾದ ಜಗದೀಶ್ ರೆಡ್ಡಿ ಮತ್ತು ಸಿಬ್ಬಂದಿ ರವರೊಂದಿಗೆ ಠಾಣಾ ಸರಹದ್ದಿನ ಬೂದಿಕೋಟೆ ವೃತ್ತದ ಬಳಿ ಐ.ಎಂ.ವಿ ಕೇಸುಗಳನ್ನು ದಾಖಲು ಮಾಡುತ್ತಿದ್ದಾಗ ಆರೋಪಿ ಮನೋಜ್  ಬಿನ್ ರಾಜು, ಬೌರಿಲಾಲ್‌ಪೇಟೆ, ರಾಬರ್ಟ್‌‌ಸನ್‌ಪೇಟೆ ರವರು ನಂಬರ್ ಪ್ಲೇಟ್ ಇಲ್ಲದ ಡಿಯೋ ದ್ವಿಚಕ್ರ ವಾಹನದ ದಾಖಲಾತಿಗಳನ್ನು ಕೇಳಲಾಗಿ ಸರಿಯಾದ ಸಮಂಜಸ ಉತ್ತರ ನೀಡದೆ ದಾಖಲಾತಿಗಳು ಇಲ್ಲವೆಂತ ತಡಬಡಿಸುತ್ತಿದ್ದನ್ನು ಕಂಡು ದ್ವಿಚಕ್ರ ವಾಹನವನ್ನು ಕಳ್ಳತನ ಮಾಡಿ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದರಿಂದ ಠಾಣೆಗೆ ಬಂದು ಕ್ರಮ ಜರುಗಿಸಿರುತ್ತಾರೆ.

     ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಣ ಕಳ್ಳತನವಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ.18.03.2020 ರಂದು ಈ ಕೇಸಿನ ದೂರುದಾರರಾದ ಮುರುಗದಾಸ, ನೆಹರು ಪಾರ್ಕ್, ಗಣೇಶಪುರಂ, ರಾಬರ್ಟ್‌‌ಸನ್‌ಪೇಟೆ ರವರು ರಾಬರ್ಟ್‌‌ಸನ್‌ಪೇಟೆಯ ಕರೂರ್ ವೈಶ್ಯ ಬ್ಯಾಂಕ್ ನಿಂದ ರೂ. 3,30,000/- ರನ್ನು ತೆಗೆದುಕೊಂಡು ಕಾಟನ್ ಬ್ಯಾಗ್ ನಲ್ಲಿ ಹಾಕಿಕೊಂಡು ಬ್ಯಾಂಕಿನಿಂದ ಹೊರಗೆ ಬಂದು, ತನ್ನ ದ್ವಿಚಕ್ರ ವಾಹನದ ಡಿಕ್ಕಿನಲ್ಲಿ ಇಟ್ಟು ಭೀಗ ಹಾಕಿಕೊಂಡು, ಪುನಃ ತನ್ನ ಹೆಂಡತಿಗೆ ಬೇರೆಯವರು 20,000/- ರೂ ಎಸ್.ಬಿ.ಎಂ ಬ್ಯಾಂಕ್ ಚೆಕ್ ಅನ್ನು ಕೊಟ್ಟಿದ್ದು, ಅದನ್ನು ಡ್ರಾ ಮಾಡಿಕೊಂಡು ಬರಲು ತಿಳಿಸಿದ್ದರಿಂದ ಮೇರೆಗೆ ದೂರುದಾರರು ಎಸ್.ಬಿ.ಎಂ ಬ್ಯಾಂಕಿಗೆ ಹೋಗಿ 20,000/- ರೂ ಡ್ರಾ ಮಾಡಿಕೊಂಡು ವಾಪಸ್ಸು ಬಂದು ಆ ಹಣವನ್ನು ಸಹ ತನ್ನ ದ್ವಿಚಕ್ರ ವಾಹನದ ಡಿಕ್ಕಿನಲ್ಲಿ ಇಟ್ಟಿಕೊಂಡು ಅಲ್ಲಿಂದ 2-50 ಗಂಟೆಗೆ ಪಿಚ್ಚರ್ಡ್ ರಸ್ತೆಯ ವಾಜಪೇಯಿ ಸರ್ಕಲ್ ನಲ್ಲಿರುವ ವೆಂಕಟೇಶ್ವರ ಪ್ರಾವಿಜನ್ ಸ್ಟೋರ್ ಹತ್ತಿರ ಹೋಗಿ, ಅಂಗಡಿ ಮುಂದೆ ದ್ವಿಚಕ್ರ ವಾಹನ ನಿಲ್ಲಿಸಿ, ಅಂಗಡಿಯೊಳಗೆ ಹೋಗಿ ಮನೆಗೆ ಬೇಕಾಗಿದ್ದ ದಿನಸಿಗಳನ್ನು ತೆಗೆದುಕೊಂಡು ಪಿರ್ಯಾದಿ ದ್ವಿಚಕ್ರ ವಾಹನ ಬಳಿ ಬಂದು ನೋಡಲಾಗಿ ಯಾರೋ ಕಳ್ಳರು ದ್ವಿಚಕ್ರ ವಾಹನದ ಡಿಕ್ಕಿಯ ಮೇಲಿನ ಶೀಟನ್ನು ಎಳೆದು ಅಗಲಿಸಿ ಡಿಕ್ಕಿಯಲ್ಲಿದ್ದ ಒಟ್ಟು 3,50,000/- ರೂ ಹಣವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ.

– ರಸ್ತೆ ಅಪಘಾತಗಳು : 01

      ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ. 07.03.2020 ರಂದು ಮಧ್ಯಾಹ್ನ 1.00 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿ ಸುರೇಶ್ ಕುಮಾರ್‌, ಎಂ-ಬ್ಲಾಕ್‌, ಚಾಂಪಿಯನ್‌ ರೀಪ್ಸ್ ಕೆ.ಜಿ.ಎಫ್ ರವರ ತಮ್ಮ ವಿಷ್ಣುಕುಮಾರ್, ೩೦ ವರ್ಷ ರವರು ತನ್ನ ದ್ವಿಚಕ್ರವಾಹನವನ್ನು ಬಸ್ ನಿಲ್ದಾಣದಲ್ಲಿರುವ ನಂದಿನಿ ಹೋಟೆಲ್ ನ ಮುಂದೆ ನಿಲ್ಲಿಸುತ್ತಿರುವಾಗ ಎದುರಿಗೆ ಕುವೆಂಪು ಬಸ್ ನಿಲ್ದಾಣದಿಂದ ಕೆ.ಎಸ್.ಆರ್.ಟಿ.ಸಿ ಬಸ್ ಸಂಖ್ಯೆ ಕೆಎ-07-ಎಫ್-1426 ರನ್ನು ಅದರ ಚಾಲಕನಾದ ರಾಜೇಂದ್ರ ಕುಮಾರ್ ರವರು ಅತೀವೇಗ ಮತ್ತು ಅಜಾರುಕತೆಯಿಂದ ಚಲಾಯಿಸಿಕೊಂಡು ಬಂದು ವಿಷ್ಣುಕುಮಾರ್ ರವರ ದ್ವಿಚಕ್ರವಾಹನ ಸಂ. ಕೆಎ-08-ಎಕ್ಸ್-1497 ರಕ್ಕೆ ಡಿಕ್ಕಿಪಡಿಸಿದ ಪರಿಣಾಮ ವಿಷ್ಣುಕುಮಾರ್ ರವರ ಎಡಗಾಲಿನ ಪಾದವು ಬಸ್ಸಿನ ಮುಂಭಾಗದ ಎಡಚಕ್ರದ ಮಡ್ಗಾರ್ಢ್ ಗೆ ಸಿಲುಕಿ ಪಾದ ಅರ್ಧಕ್ಕೆ ಸಿಳಿ ರಕ್ತ ಗಾಯವಾಗಿದ್ದು ಈ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಕಾದಿದ್ದು ಯಾರೂ ರಾಜಿಗೆ ಬರದ ಕಾರಣ ಠಾಣೆಗೆ ತಡವಾಗಿ ಬಂದು ಅಪಘಾತಪಡಿಸಿದ ದೂರು ನೀಡಿರುತ್ತಾರೆ.

 

 

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

     ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ-13-03-2020 ರಂದು ಸಂಜೆ 6.30 ಗಂಟೆಯಲ್ಲಿ ಈ ಕೇಸಿನ ದೂರುದಾರರಾದ ಯುವರಾಣಿ, ಪೋತರಾಜನಹಳ್ಳಿ, ಬೇತಮಂಗಲ ರವರ ಗಂಡ ಶ್ರವಣಕುಮಾರ್‍, ೩೨ ವರ್ಷ ರವರು ಬೇತಮಂಗಲದಲ್ಲಿ ಕೆಲಸ ಇದೆ ಹೋಗಿ ಬರುತ್ತೇನೆ ಅಂತ ಹೇಳಿ ಮನೆಯಿಂದ ಹೋದವರು ಮತ್ತೆ  ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *