ದಿನದ ಅಪರಾಧಗಳ ಪಕ್ಷಿನೋಟ 19ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:18.02.2020 ರಂದು   ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಅಕ್ರಮ ಮದ್ಯ ಮಾರಾಟ : 02

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದವನ ಮೇಲೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 18.02.2020 ರಂದು ಶ್ರೀಮತಿ ವರಲಕ್ಷ್ಮಮ್ಮ ಮ.ಎ.ಎಸ್.ಐ ಮತ್ತು ಪಿ.ಸಿ 227 ಶ್ರೀ ರಾಜನ್ ರವರುಗಳು ಚಾಂಪಿಯನ್ ರೀಫ್ಸ್ ಸರಹದ್ದಿನಲ್ಲಿ ಗಸ್ತು ಮಾಡುತ್ತಿರುವಾಗ  ಸಿ ಬ್ಲಾಕ್ ನಲ್ಲಿ ಮದ್ಯಾಹ್ನ 13-20 ಗಂಟೆಯಲ್ಲಿ ಪ್ರಭು, ಸಿ ಬ್ಲಾಕ್, ಚಾಂಪಿಯನ್‌ರೀಫ್ಸ್‌ ರವರು ಯಲ್ಲಮ್ಮ ದೇವಸ್ಥಾನದ ಹತ್ತಿರ ಕುಳಿತು ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದವನ ವಿರುದ್ದ ಪ್ರಕರಣ ದಾಖಲಿಸಿರುತ್ತಾರೆ.

ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ಶ್ರೀ.ರಮೇಶ್, ಸಿ.ಹೆಚ್.ಸಿ ಮತ್ತು ಶ್ರೀ.ಮಂಜುನಾಥ, ಸಿ.ಪಿ.ಸಿ-95 ರವರು ದಿನಾಂಕ 18.02.2020 ರಂದು ಬೆಳಿಗ್ಗೆ 11.30 ಗಂಟೆಯಲ್ಲಿ ಕಾಮಸಮುದ್ರ ಪೊಲೀಸ್ ಠಾಣಾ ಸರಹದ್ದಿನ ಮುದುಗುಳಿ ಗ್ರಾಮದಲ್ಲಿ ಗಸ್ತಿನಲ್ಲಿದ್ದಾಗ, ಮುನಿಯಪ್ಪ ಬಿನ್ ಗಂಗಪ್ಪ, 80 ವರ್ಷ ರವರು ಮನೆಯ ಮುಂಬಾಗದಲ್ಲಿ ಮೂರು ಜನರಿಗೆ ಸಾರ್ವಜನಿಕ ರಸ್ತೆಯಲ್ಲಿ ಕುಳಿತುಕೊಂಡು  ಮದ್ಯ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿರುವವರ ವಿರುದ್ದ ಪ್ರಕರಣ ದಾಖಲಿಸಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಸುಜಾತ ಕೊಂ ಸೂರ್ಯ, ಸಂಜಯ್‌ಗಾಂಧಿನಗರ, ಕೆ.ಜಿ.ಎಫ್ ರವರ ಗಂಡನಾದ ಸೂರ್ಯ, 28 ವರ್ಷ, ರವರು ದಿನಾಂಕ 13.02.2020 ರಂದು ಬೆಳಗ್ಗೆ 6.00 ಗಂಟೆಗೆ ಮನೆಯಿಂದ ಹೋದವರು ಮತ್ತು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *