ದಿನದ ಅಪರಾಧಗಳ ಪಕ್ಷಿನೋಟ 19ನೇ ಡಿಸೆಂಬರ್‌ 2019

 – ಕನ್ನ ಕಳುವು : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಮೋಹನ ಸವಿತ ಕುಮಾರಿ ಕೊಂ ದಯಾಳನ್, ನರಸಿಂಹ ಲೇಔಟ್‌, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ 17.12.2019 ರಂದು ಮದ್ಯಾಹ್ನ 12.30 ಗಂಟೆಗೆ ಮನೆಗೆ ಬೀಗ ಹಾಕಿಕೊಂಡು  ಮಕ್ಕಳಿಗೆ ಶಾಲೆಗೆ ಊಟವನ್ನು ತೆಗೆದುಕೊಂಡು ಹೋಗಿ ನಂತರ ಮದ್ಯಾಹ್ನ 2.30 ಗಂಟೆಗೆ ಮನೆಗೆ ಬಂದಿದ್ದು, ಮನೆಯ ಹಿಂಭಾಗದ ಗ್ರೀಲ್ಸ್ ಗೇಟ್ ಗೆ ಹಾಕಿದ್ದ ಬೀಗ ಮತ್ತು ಬಾಗಿಲ ಚಿಲಕ ಜಖಂ ಆಗಿದ್ದು, ಹಾಲ್ ನಲ್ಲಿ ಕಬೋರ್ಡ್ ಬಳಿ ಹೋಗಿ ನೋಡಲಾಗಿ ಕಬೋರ್ಡ್ ನಲ್ಲಿ  ಇಟ್ಟಿದ್ದಂತಹ 158 ಗ್ರಾಂಗಳ ಬಂಗಾರದ ಒಡವೆಗಳು ಬೆಲೆ 4,74,000/- ರೂ ಬಾಳುವುದನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಗೀತಾ ಕೊಂ ವೆಂಕಟೇಶಪ್ಪ, ಬೂದಿಕೋಟೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ  ಗಂಡನಾದ ವೆಂಕಟೆಶಪ್ಪ, 27 ವರ್ಷ ರವರು ಸುಮಾರು ಆರು ತಿಂಗಳ ಹಿಂದೆ ಅಂಗಡಿಗೆ ಹೋಗಿ ಬರುತ್ತೇನೆಂದು ಹೋಡದವನು ಮತ್ತೆ ವಾಪಸ್ಸು ಮನೆಗೆ ಬರದೆ ಕಾಣೆಯಾಗಿರುತ್ತಾನೆ.

– ಅಸ್ವಾಭಾವಿಕ ಮರಣ ಪ್ರಕರಣ : 02

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರವಿಕುಮಾರ್‌ ಬಿನ್ ಲಕ್ಷ್ಮೀನಾರಾಯಣ, ವಸಂತನಗರ, ಬೆಮೆಲ್ ನಗರ, ಕೆ.ಜಿ.ಎಫ್ ರವರ ಮಗನಾದ ನವೀನ್ .ಕೆ.ಆರ್, 17 ವರ್ಷ ರವರಿಗೆ ದೃಷ್ಟಿ ದೋಷ ಖಾಯಿಲೆಯಿಂದ ಓದಲು ಬರೆಯಲು ತೊಂದರೆಯಾಗಿದ್ದು, ಚಿಕಿತ್ಸೆಕೊಡಿಸಿದರೂ ಗುಣವಾಗದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ.18-12-2019 ರಂದು ಬೆಳಿಗ್ಗೆ 09-15 ಗಂಟೆಯಿಂದ ಸಂಜೆ 5-00 ಗಂಟೆ ಮದ್ಯೆ ಬೆಡ್ ರೂಮಿನಲ್ಲಿ ಅಳವಡಿಸಿದ್ದ ಫ್ಯಾನ್ ಗೆ ವೇಲ್ ನಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕಣರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಂಜುಂಡಪ್ಪ ಬಿನ್ ಸಿದ್ದಪ್ಪ, ಮದಿನಾಯಕನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗನಾದ ವೆಂಕಟೇಶಪ್ಪ, 48 ವರ್ಷ ರವರು  ದಿನಾಂಕ:16.12.2019 ರಂದು ರಾತ್ರಿ  9-00 ಗಂಟೆ ಯಲ್ಲಿ ನೀರು ಕಾಯಿಸಲು ಬಚ್ಚಲು ಮನೆಯಲ್ಲಿದ್ದ ಸೀಮೆಎಣ್ಣೆ ಕ್ಯಾನಿನಿಂದ ಒಲೆಗೆ ಹಾಕಿ ಬೆಂಕಿ ಅಂಟಿಸಿ ಒಲೆ ಮುಂದೆ ಕುಳಿತು ನೀರುಕಾಯಿಸುತ್ತಿದ್ದಾಗ,  ಗೋಡೆಯ ಮೇಲಿದ್ದ ಸೀಮೆಎಣ್ಣೆ ಕ್ಯಾನ್ ಆಕಸ್ಮಿಕವಾಗಿ  ವೆಂಕಟೇಶಪ್ಪನ ಮೇಲೆ ಬಿದ್ದು ಕ್ಯಾನಿನಿಂದ ಸೀಮೆಎಣ್ಣೆ ಆತನ ಮೈಮೇಲೆ ಚೆಲ್ಲಿದಾಗ, ಒಲೆಯಿಂದ ಬೆಂಕಿ ಜ್ವಾಲೆ ಆತನಿಗೆ ಅಂಟಿಕೊಂಡಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, 18.12.2019 ರಂದು ಬೆಳಗಿನ ಜಾವ 3-30 ಗಂಟೆಯಲ್ಲಿ ವೆಂಟೇಶಪ್ಪನಿಗೆ ಆಗಿದ್ದ ಸುಟ್ಟಗಾಯಗಳ ದೆಸೆಯಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.

 

Leave a Reply

Your email address will not be published. Required fields are marked *