ದಿನದ ಅಪರಾಧಗಳ ಪಕ್ಷಿನೋಟ 18 ನೇ ನವೆಂಬರ್‌ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 17.11.2018 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 ಹಲ್ಲೆ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟಸ್ವಾಮಿ ಬಿನ್ ಸೀನಪ್ಪ, ಗರುಡಾದ್ರಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಬಳಿ ಮುದ್ದೆಗೌಡನಹಳ್ಳಿ ಗ್ರಾಮದ ವಾಸಿ ಶಿವಪ್ಪ ಬಿನ್ ಕೋದಂಡಪ್ಪ ಎಂಬುವವರು 1 ½ ತಿಂಗಳ ಹಿಂದೆ ಒಂದು ಚೆನಕೆ, ಗಡಾರಿ, ಮತ್ತು ಹುಳಿಯನ್ನು ತೆಗೆದುಕೊಂಡು ಹೋಗಿದ್ದು, ಹಲವಾರು ಬಾರಿ ವಸ್ತುಗಳನ್ನು ವಾಪಸ್‌ ಕೇಳಿದರೂ ಕೊಡದೇ ಇದ್ದು, ದಿನಾಂಕ 15.11.2018 ರಂದು ಮದ್ಯಾಹ್ನ 12.30 ಗಂಟೆಯಲ್ಲಿ ಶಿವಪ್ಪ ದೂರುದಾರರ ಗ್ರಾಮದ ಬಸ್ ನಿಲ್ದಾಣದಲ್ಲಿದ್ದಾಗ ದೂರುದಾರರು ಶಿವಪ್ಪ ರವರ ಬಳಿ ತನ್ನ ವಸ್ತುಗಳನ್ನು ವಾಪಸ್ ಕೇಳಿದಕ್ಕೆ ಶಿವಪ್ಪ ರವರು ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾನೆ.

-ಅಸ್ವಾಬಾವಿಕ ಮರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಸರಸಮ್ಮ, ಕದಿರೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಗಂಡ ಗೋಪಾಲಪ್ಪ, 70 ವರ್ಷ ರವರಿಗೆ ಒಂದು ವರ್ಷದಿಂದ ಅತಿಯಾಗಿ ಹೊಟ್ಟೇನೋವು ಬರುತ್ತಿದ್ದರಿಂದ ಚಿಕಿತ್ಸೆ ಪಡಿಸಿದರೂ ವಾಸಿಯಾಗದೇ ಇದ್ದು, ದಿನಾಂಕ 10.11.2018 ರಂದು ಗೋಪಾಲಪ್ಪ ರವರು ಹೊಟ್ಟೇನೋವಿನ ಬಾದೆ ತಾಳಲಾರದೇ ಸಂಜೆ 4.30 ಗಂಟೆಯಲ್ಲಿ ಮನೆಯಲ್ಲಿದ್ದ ಹುಳಗಳಿಗೆ ಸಿಂಪಡಿಸುವ ವಿಷದ ಔಷಧಿಯನ್ನು ಸೇವಿಸಿದ್ದು, ಚಿಕಿತ್ಸೆಗಾಗಿ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲಾಗಿದ್ದು, ದಿನಾಂಕ 16.11.2018 ರಂದು ರಾತ್ರಿ 11.50 ಗಂಟೆಗೆ ಗೋಪಾಲಪ್ಪ ರವರು ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *