ದಿನದ ಅಪರಾಧಗಳ ಪಕ್ಷಿನೋಟ 18 ನೇ ಡಿಸೆಂಬರ್‌ 2017 ಸಂಜೆ

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 17.12.2017 ರಂದು ಸಂಜೆ 5.00 ಗಂಟೆಯಿಂದ ದಿನಾಂಕ: 18.12.2017 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು :‍ 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ-17-10-2017 ರಂದು  ದೂರುದಾರರಾದ ಶ್ರೀ. ರವಿಚಂದ್ರ  ಬಿನ್‌ ರಾಮಪ್ಪ ಮೇಲಾಗಣಿ ಗ್ರಾಮ ರವರು ನೀಡಿದ ದೂರಿನಲ್ಲಿ ದಿನಾಂಕ-14.12.2017 ರಂದು ಗಾಯಾಳು ಶ್ರೀ ರವಿಚಂದ್ರ ರವರು  ಪೆರಸಲಕುಪ್ಪಂ ಗೆ ಹೋಗಲು ದ್ವಿ ಚಕ್ರ ವಾಹನ ಹಿರೋ ಹೋಂಡಾ ಸ್ಪೆಂಡರ್ KA-04-EJ-103 ರನ್ನು ತೆಗೆದುಕೊಂಡು ಅವರ ಗ್ರಾಮದ ವಾಸಿಯಾದ ರವೀಂದ್ರಪ್ಪ ರವರನ್ನು ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ಬೆಳಿಗ್ಗೆ 10.30 ಗಂಟೆಯಲ್ಲಿ ಬೇತಮಂಗಲ-ವಿ.ಕೋಟೆ ಮುಖ್ಯ ರಸ್ತೆಯ ಪೂಗಾನಹಳ್ಳಿ ರಸ್ತೆಯಲ್ಲಿ ಮುಂದೆ ಹೋಗುತ್ತಿದ್ದಾಗ ಎದರುಗಡೆಯಿಂದ ಅಪ್ಪಿ ಲಗೇಜ್ ಆಟೋ ಸಂಖ್ಯೆ- KA-08-8371 ರ ಚಾಲಕ ಸುಬ್ರಮಣಿ ಬಿನ್ ರಾಮಪ್ಪ, 25 ವರ್ಷ, ಬಲಜಿಗ ಜನಾಂಗ ವಾಸ- ಪೂಗಾನಹಳ್ಳಿ ಗ್ರಾಮ ರವರು ತನ್ನ ಆಟೋ ವನ್ನು ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಸಿಕೊಂಡು ಬಂದು ದೂರುದಾರರು ಚಲಾಯಿಸುತ್ತಿದ್ದ ದ್ವಿ ಚಕ್ರ ವಾಹನ ಮುಂದುಗಡೆ ಡಿಕ್ಕಿ ಹೊಡೆದ ಪ್ರಯುಕ್ತ ರಕ್ತ ಗಾಯಗಳಾಗಿರುತ್ತದೆ.

– ರಸ್ತೆ ಅಪಘಾತಗಳು :‍ 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 17.12.2017 ರಂದು ದೂರುದಾರರಾದ  ಶ್ರೀ. ಸಂತೋಷ್‌ ಪ್ರಭು ಬಿನ್‌ ರಾಮಚಂದ್ರ ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ  ದೂರುದಾರರ  ಇಂಡಿಕಾ DLS KA-03-MD-7340 ರಲ್ಲಿ ದೂರುದಾರರ ತಾಯಿ ಜಯಮ್ಮ ಮತ್ತು ರಾಧಿಕರವರು ಶ್ರೀನಿವಾಸಪುರಕ್ಕೆ ಹೋಗಲು ಬಂಗಾರಪೇಟೆ ಕೋಲಾರ ಮುಖ್ಯ ರಸ್ತೆಯ ಬೀರಂಡಹಳ್ಳಿ ಕುಪ್ಪನಹಳ್ಳಿ ಗೇಟ್ ಮಧ್ಯದಲ್ಲಿ ದೂರುದಾರರು ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಹಿಂದುಗಡೆಯಿಂದ ಆರೋಪಿ ಬಲೇರೋ ಗೂಡ್ಸ್ ವಾಹನ ಸಂಖ್ಯೆ KA -08-9175 ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ದೂರುದಾರರ ಕಾರಿನ ಹಿಂಬದಿಯಲ್ಲಿ ಡಿಕ್ಕಿ ಪಡೆಸಿದ ಪರಿಣಾಮ ಕಾರಿನ ಹಿಂಬದಿ ಸಂಪೂರ್ಣ ಜಖಂಗೊಂಡು ಹಿಂಬದಿಯಲ್ಲಿ ಕುಳಿತಿದ್ದ ದೂರುದಾರರ ತಾಯಿ ಜಯಮ್ಮರವರಿಗೆ ಮತ್ತು  ರಾಧಿಕರವರಿಗೆ ರಕ್ತ ಗಾಯಗಳಾಗಿರುತ್ತದೆ.

––ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಮಹಿಳೆ ಮೇಲೆ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 17.12.2017 ರಂದು  ದೂರುದಾರರಾದ ಶ್ರೀಮತಿ ಶಿಲ್ಪ ಕೋಂ ಕೃಷ್ಣ ಮೂರ್ತಿ, ಕೋಲಾರ ರವರು ನೀಡಿದ ದೂರಿನಲ್ಲಿ  ದೂರುದಾರರಾದ ಶ್ರೀಮತಿ. ಶಿಲ್ಪ ರವರಿಗೆ ಈಗ್ಗೆ 6 ವರ್ಷದ ಹಿಂದೆ ಕೋಲಾರದ ಚಿಕ್ಕ ಅಂಕಾಡ್ಲಹಳ್ಳಿ ಗ್ರಾಮದ ವಾಸಿ ಕೃಷ್ಣಮೂರ್ತಿ ಬಿನ್ ವೆಂಕಟೇಶ್ ಗೌಡ ರವರರೊಂದಿಗೆ ವಿವಾಹವಾಗಿದ್ದು  ಮೂರು ವರ್ಷಗಳು ಗಂಡ ದೂರುದಾರರನ್ನು ಚೆನ್ನಾಗಿ ನೋಡಿಕೊಂಡಿದ್ದು ಆನಂತರ ವಿನಾಕಾರಣ ಜಗಳ ತೆಗೆದು  2 ಲಕ್ಷ ರೂ ವರದಕ್ಷಿಣೆಯನ್ನು ತಂದು ಕೊಡುವಂತೆ  ಪ್ರತಿದಿನ ಹೊಡೆದು ಬೈಯ್ದು ದೈಹಿಕವಾಗಿ ಕಿರುಕುಳ ಮತ್ತು ಮಾನಸಿಕವಾಗಿ ಹಿಂಸೆ ನೀಡಿರುತ್ತಾರೆಂದು ದೂರು.

Leave a Reply

Your email address will not be published. Required fields are marked *