ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 17.01.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಅಸ್ವಾಭಾವಿಕ ಮರಣ ಪ್ರಕರಣ : 01
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶ್ರೀನಿವಾಸಗೌಡ ಬಿನ್ ಕದಿರೆಪ್ಪ, ಪಂದ್ಯಾಲಮೊಡಗು ಗ್ರಾಮ, ಕುಪ್ಪಂ ತಾಲ್ಲೂಕು, ಆಂದ್ರಪ್ರದೇಶ ರವರ ದೊಡ್ಡಪ್ಪನ ಮಗನಾದ ಜಿ.ಸಂಪಂಗಿಗೌಡ @ಸಂಪಂಗಿ ಬಿನ್ ಸಿ.ಲಕ್ಷ್ಮಪ್ಪಗೌಡ, 58 ವರ್ಷ ರವರಿಗೆ ಮದ್ಯ ಸೇವನೆ ಮಾಡುವ ಅಭ್ಯಾಸವಿದ್ದು, ದಿನಾಂಕ 17.01.2021 ರಂದು ಬೆಳಿಗ್ಗೆ 8.15 ಗಂಟೆಯಲ್ಲಿ ರಾಜಪೇಟೆ ರಸ್ತೆಯಲ್ಲಿರುವ ರಾಜಾ ವೈನ್ಸ್ ಅಂಗಡಿಯ ದಕ್ಷಿಣ ದಿಕ್ಕಿಗಿರುವ ಗೋಡೆಯ ಬಳಿ ಕುಳಿತು ಮೃತಪಟ್ಟಿರುತ್ತಾರೆ.