ದಿನದ ಅಪರಾಧಗಳ ಪಕ್ಷಿನೋಟ 18ನೇ ಅಕ್ಟೋಬರ್‌ 2019

– ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾಗೇಶ್‌ ಬಿನ್ ರಾಮಚಂದ್ರಪ್ಪ, ಮುತ್ತೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 16.10.2019 ರಂದು ಸಂಜೆ 6-30 ಗಂಟೆಯಲ್ಲಿ ಬೂದಿಕೋಟೆ ಅಂಬೇಡ್ಕರ್ ಕಾಲೋನಿ ನಡೆದುಕೊಂಡು ಹೋಗುತ್ತಿದ್ದಾಗ, ಎದುರುಗಡೆಯಿಂದ ಬಂದ ಟ್ರಾಕ್ಟರ್ ಸಂಖ್ಯೆ ಎ.ಪಿ21 ಎ.ಬಿ 1952 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ದೂರುದಾರರಿಗೆ ರಕ್ತಗಾಯವಾಗಿದ್ದು, ಆರೋಪಿಯು ವಾಹನವನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ವೈಜಯಂತಿಮಾಲ ಕೊಂ ಆನಂದ್‌, ೬ನೇ ಕ್ರಾಸ್, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರ ತಮ್ಮ ಎಂ.ಸುಬ್ರಮಣ್ಯ, 50 ವರ್ಷ ರವರು ದಿನಾಂಕ.21.07.2019 ರಂದು ಬೆಳಿಗ್ಗೆ 11-00 ಗಂಟೆಗೆ ಶೇವಿಂಗ್ ಮಾಡಿಕೊಂಡು ಬರುತ್ತೇನೆಂದು ಹೇಳಿ ಮನೆಯಿಂದ ಹೋದವನು ವಾಪಸ್ಸು ಬರದೆ ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *