ದಿನದ ಅಪರಾಧಗಳ ಪಕ್ಷಿನೋಟ 18ನೇ ಮಾರ್ಚ್‌ 2021

 ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 17.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಅಬಕಾರಿ ಕಾಯ್ದೆ : 03

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 09.02.2021 ರಂದು ಬೆಳಿಗ್ಗೆ 12-15 ಗಂಟೆಯಲ್ಲಿ ಆರೋಪಿಯಾದ ರಾಘವೇಂದ್ರ ಬಿನ್ ವೆಂಕಟೇಶಪ್ಪ ರವರು ಠಾಣಾ ಸರಹದ್ದಿನ ಕಾವರನಹಳ್ಳಿ ಗ್ರಾಮದ ತನ್ನ ಮನೆಯ ಹಿಂಬಾಗ ಯಾವುದೇ ಅನುಮತಿಯಿಲ್ಲದೇ ಸಾರ್ವಜನಿಕರ ಮಧ್ಯಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಈ ಕೇಸಿನ ಪಿರ್ಯಾದಿ ಶ್ರೀ. ಜಗದೀಶ್ ರೆಡ್ಡಿ, ಪಿಎಸ್‌ಐ ಬಂಗಾರಪೇಟೆ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ, ಆರೋಪಿ ಮತ್ತು ಸ್ಥಳದಲ್ಲಿದ್ದ ಮಧ್ಯವಿರುವ 02 ಪಾಕೇಟ್‌ಗಳು ಮತ್ತು ಇತರೆ ವಸ್ತುಗಳನ್ನು ವಶಪಡಿಸಿಕೊಂಡು, ಕಾನೂನು ರೀತ್ಯಾ ಕ್ರಮ ಜರುಗಿಸಿರುತ್ತದೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ 2 ಪ್ರಕರಣಗಳು ದಾಖಲಾಗಿರುತ್ತದೆ.

ದಿನಾಂಕ 17.03.2021 ರಂದು   ಸಂಜೆ 7.30 ಗಂಟೆಯಲ್ಲಿ ಆಂಡ್ರಸನ್ಪೇಟೆ ಪೊಲೀಸ್ ಠಾಣಾ ಸರಹದ್ದು ಬಾಣಗೆರೆ ಗ್ರಾಮದ ಬಳಿ ಈ ಕೇಸಿನ ದೂರುದಾರರು ಶ್ರೀಮತಿ ರಾಜೇಶ್ವರಿ, ಪಿಎಸ್‌ಐ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ರವರು ಮತ್ತು ಸಿಬ್ಬಂದಿಯವರು ಹೋದಾಗ, ಆರೋಪಿ ಶ್ರೀಮತಿ ಮುನಿರತ್ನಮ್ಮ ಕೋಂ ವೆಂಕಟರಾಮ, ಬಾಣಗೆರೆ ಗ್ರಾಮ ರವರು ಮನೆಯ  ಹತ್ತಿರ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದು, ಸ್ಥಳದಲ್ಲಿದ್ದ ಮಧ್ಯದ ಪಾಕೇಟ್‌ಗಳನ್ನು ಅಮಾನತ್ತುಪಡಿಸಿಕೊಂಡು, ಆರೋಪಿ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಿರುತ್ತದೆ.

ಈ ಕೇಸಿನ ದೂರುದಾರರು ಶ್ರೀಮತಿ ರಾಜೇಶ್ವರಿ, ಪಿಎಸ್‌ಐ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ರವರು ಮತ್ತು ಸಿಬ್ಬಂದಿಯವರು ದಿನಾಂಕ  17.03.2021 ರಂದು ಸಂಜೆ 17.30 ಗಂಟೆಗೆ ಠಾಣಾ ಸರಹದ್ದು, ಮಸ್ಕಂ ಎ ಬ್ಲಾಕ್, ಕಡೆ ಗಸ್ತು ಮಾಡುತ್ತಿದ್ದಾಗ, ಆರೋಪಿ ಶ್ರೀಮತಿ ಕವಿತಾ ಕೋಂ ಸೈಮನ್‌ರಾಜ್,  ಮಸ್ಕಂ- ಎ ಬ್ಲಾಕ್ ವಾಸಿ ತನ್ನ ಮನೆಯ ಹತ್ತಿರ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಆರೋಪಿಗಳಾದ ಇಲಿಯಾಸ್ ಬಿನ್ ವಿಲ್ಲಿ ಮತ್ತು ಪ್ರಭು ಬಿನ್ ಪಾತೀರಾಜ್, ರವರುಗಳಿಗೆ ಮದ್ಯಪಾನ ಸೇವನೆ ಮಾಡಲು ಅನುವು ಮಾಡಿಕೊಟ್ಟಿದ್ದು, ಸದರಿ ಆರೋಪಿಗಳನ್ನು ಮತ್ತು ಮಧ್ಯದ ವಸ್ತಗಳನ್ನು ಪಂಚರ ಸಮಕ್ಷಮ ಪಂಚನಾಮೆ ಮೂಲಕ ಅಮಾನತ್ತುಪಡಿಸಿಕೊಂಡು ಆರೋಪಿಗಳ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಿರುತ್ತದೆ.

 ಎನ್‌.ಡಿ.ಪಿ.ಎಸ್‌  ಕಾಯ್ದೆ : 02

ಚಾಂಪಿಯನ್ ರೀಫ್ಸ್ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.17.03.2021 ರಂದು ಸಂಜೆ ಸುಮಾರು 15-30 ಗಂಟೆಯಲ್ಲಿ ಪಿರ್ಯಾದಿದಾರರಾದ ಶ್ರೀ.ತಬರೆ ಆಲಂ ಪಾಷ. ಸಿ.ಪಿ.ಐ, ಚಾಂಪಿಯನ್ ರೀಪ್ಸ್, ವೃತ್ತ ಮತ್ತು ಆವರ ಸಿಬ್ಬಂದಿಯೊಂದಿಗೆ ಎಸ್.ಟಿ ಬ್ಲಾಕ್ ಸೈನೆಡ್ ಗುಡ್ಡದ ಬಳಿ ಆರೋಪಿಯಾದ ದಿಲೀಪ್ ಕುಮಾರ್ ಬಿನ್ ದಿವಾಕರ್‍, ಎಸ್.ಟಿ ಬ್ಲಾಕ್, ಚಾಂಪಿಯನ್‌ ರೀಪ್ಸ್  ಎಂಬುವನ್ನು ಒಂದು ಪ್ಲಾಸ್ಟಿಕ್ ಕವರ್ ನಲ್ಲಿ 304 ಗ್ರಾಂ ಗಾಂಜಾ ಮಾದಕ ವಸ್ತುವನ್ನು ಇಟ್ಟಿಕೊಂಡಿದ್ದು, ಪಂಚರ ಸಮಕ್ಷಮ ಅಮಾನತು ಪಡಿಸಿಕೊಂಡು ಆರೋಪಿ ವಿರುದ್ದ ಕ್ರಮ ಜರುಗಿಸಿರುತ್ತದೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 17.03.2021  ಸಂಜೆ ಸುಮಾರು 7.00  ಗಂಟೆಗೆ  ಪಿರ್ಯಾದಿದಾರರಾದ ಶ್ರೀ ಸೂರ್ಯ ಪ್ರಕಾಶ್, ಪಿ.ಐ,. ಸಿ.ಇ.ಎನ್.  ಕ್ರೈಂ  ಪೊಲೀಸ್  ಠಾಣೆ   ರವರು ತಮ್ಮ ಸಿಬ್ಬಂದಿಯೊಂದಿಗೆ ಮಸ್ಕಂ ಬಳಿಯಿರುವ ಕೆ.ಇ.ಬಿ ಸಬ್ ಸ್ಟೇಷನ್ ಹಾಗೂ ಸುಸೈಪಾಳ್ಯಂ ಮದ್ಯದಲ್ಲಿರುವ ಖಾಲಿ ಜಾಗದಲ್ಲಿ ಆರೋಪಿ ಎಡ್ವೀನ್ ಎಳಿಲ್ @ ಎಡ್ವೀನ್ ಬಿನ್ ಲಾವಿ @ ಉತ್ತರಿಯನಾದನ್, 31  ವರ್ಷ, ಮಸ್ಕಂ ಬಿ-ಬ್ಲಾಕ್, ಸುಸೈಪಾಳ್ಯಂ, ಆಂಡ್ರಸನ್ ಪೇಟೆ ರವರು ಒಂದು ಬ್ಯಾಗಿನಲ್ಲಿ 01 ಕೆ.ಜಿ 465  ಗ್ರಾಂ ತೂಕವಿರುವ ಗಾಂಜ ಮಾದಕ ವಸ್ತುವನ್ನು ಇಟ್ಟುಕೊಂಡಿದ್ದು, ಸದರಿ ಆರೋಪಿಯನ್ನು ಮಾಲು ಸಮೇತ ಪಂಚನಾಮೆಯೊಂದಿಗೆ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಗೆ ಬಂದು ಹಾಜರು ಪಡಿಸಿದ್ದರ ಮೇರೆಗೆ ಆರೋಪಿ ವಿರುದ್ದ  ಕ್ರಮ ಜರುಗಿಸಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿ ರೂಪಾ, ಬಲಗಿರಿ ಗ್ರಾಮ ರವರ ಗಂಡ ಅಶ್ವಥ್, ೩೫ ವರ್ಷ ರವರಿಗೆ ಮದ್ಯಪಾನ ಸೇವನೆ ಮಾಡುವ ಅಭ್ಯಾಸವಿದ್ದು, ಪಿರ್ಯಾದಿದಾರರು ಮದ್ಯಪಾನ ಸೇವನೆ ಮಾಡಿದರೆ ಹೆಂಡತಿ ಮಕ್ಕಳನ್ನು ಹೇಗೆ ಪೋಷಣೆ ಮಾಡುತ್ತಿಯಾ ಎಂದು ಬುದ್ದಿವಾದ ಹೇಳಿದ್ದು, ತನ್ನ ಗಂಡ ಮದ್ಯದ ಅಮಲಿನಲ್ಲಿ ದಿನಾಂಕ.17.03.2021 ರಂದು ಬೆಳಿಗ್ಗೆ 8.00 ಗಂಟೆಯಿಂದ 11.30ಗಂಟೆಯ ಮದ್ಯೆ ತನ್ನ ವಾಸದ ಮನೆಯ ಹಾಲ್ ನಲ್ಲಿ ಕಬ್ಬಿಣದ ಕಂಬಿಗೆ ಒಂದು ವೇಲ್ ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ

Leave a Reply

Your email address will not be published. Required fields are marked *