ದಿನದ ಅಪರಾಧಗಳ ಪಕ್ಷಿನೋಟ 18ನೇ ಫೆಬ್ರವರಿ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 17.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಇತರೆ01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ ಟಿ.ಎಸ್, ಅಭಿಯಂತರರು, ಬೆಸ್ಕಾಂ ಉಪವಿಭಾಗ, ಬಂಗಾರಪೇಟೆ ರವರು ಪವರ್ ಮೆನ್ ಗಳಾದ ಮಂಜುನಾಥ ಬಣಕರ್, ಶಿವಪ್ರಸಾದ್, ಬಸವರಾಜ್ ರಾಥೋಡ್ & ವೇಣುಕುಮಾರ್ ರವರೊಂದಿಗೆ ಅನಧಿಕೃತ ಪಂಪ್ ಸೆಟ್ ಗಳನ್ನು ಅಳವಡಿಸಿಕೊಂಡಿರುವ ಬಗ್ಗೆ ವಿದ್ಯುತ್ ಕಡಿತ ಮಾಡಲು ದಿನಾಂಕ 17.02.2021 ರಂದು ಗುಟ್ಟಹಳ್ಳಿ ಮಜರಾ ಗಾಂಧಿನಗರಕ್ಕೆ ಭೇಟಿ ನೀಡಿ ಮಂಜುನಾಥ ರವರು ಅನಧಿಕೃತವಾಗಿ ಅಳವಡಿಸಿಕೊಂಡಿದ್ದ ವಿಧ್ಯುತ್ ಸಂಪರ್ಕದ ವೈರ್ ನ್ನು ಕಡಿತಗೊಳಿಸಿ, ನಂತರ ಮದ್ಯಾಹ್ನ 3.30 ಗಂಟೆಯಲ್ಲಿ ದೊಡ್ಡಯಲುವಹಳ್ಳಿ ಗ್ರಾಮಕ್ಕೆ ಹೋಗಿ ಮತ್ತೊಂದು ಪಂಪ್ ಸೆಟ್ ನ್ನು ಪರಿಶೀಲಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಮಂಜುನಾಥ, ಕುಮಾರ್, ಮುನಿವೆಂಕಟಪ್ಪ ಮತ್ತು ನಾರಾಯಣಸ್ವಾಮಿ ರವರು ಕೆಟ್ಟ ಮಾತುಗಳಿಂದ ಬೈದು, ಕೈಯಿಂದ ಗುದ್ದಿ, ಇಲಾಖೆಯ ಓಮಿನಿ ಕಾರ್ ನ ಹಿಂಭಾಗದ ಗಾಜನ್ನು ಕಲ್ಲಿನಿಂದ ಹೊಡೆದು 3000-00 ರೂ ನಷ್ಟವನ್ನುಂಟು ಮಾಡಿ, ಪ್ರಾಣ ಬೆದರಿಕೆ ಹಾಕಿ ಸರ್ಕಾರಿ ಕರ್ತವ್ಯವನ್ನು ನಿರ್ವಹಿಸಲು ಅಡ್ಡಿಪಡಿಸಿರುತ್ತಾರೆ.

– ಸಾಧಾರಣ ಕಳ್ಳತನ : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕಮಲೇಶ್ ಬಿನ್ ಸುರೇಶ್‌ ಕುಮಾರ್‌, 2ನೇ ಕ್ರಾಸ್, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರು ಯಮಹಾ ಪ್ಯಾಸಿನೋ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ.08-ವಿ4789 ನ್ನು  ದಿನಾಂಕ.18.01.2021 ರಂದು ರಾತ್ರಿ 8-00 ಗಂಟೆಗೆ ಮನೆಯ ಮುಂದೆ ನಿಲ್ಲಿಸಿ ಬೀಗ ಹಾಕಿ ಮಲಗಿದ್ದು, ನಂತರ ದಿನಾಂಕ.19.01.2021 ರಂದು ಬೆಳಿಗ್ಗೆ 6-00 ಗಂಟೆಗೆ ನೋಡಿದಾಗ 30,000/- ರೂ ಬೆಲೆ ಬಾಳುವ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.

Leave a Reply

Your email address will not be published. Required fields are marked *