ದಿನದ ಅಪರಾಧಗಳ ಪಕ್ಷಿನೋಟ 18ನೇ ಸೆಪ್ಟೆಂಬರ್ 2020

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 17.09.2020 ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

ಮೋಸ/ವಂಚನೆ : ೦1

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಮೋಸಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಶಿರ್ಲೆ ಇವೆಂಜಲೇನ್ ಜಾನ್ ಕೊಂ ದಿನೇಶ್ ಬಾಬು, ಗೌತಮ್‌ ನಗರ, ಕೆ.ಜಿ.ಎಫ್ ರವರು ದಿನಾಂಕ:01.09.2020 ರಂದು ಎಸ್.ಬಿ.ಐ ಬ್ಯಾಂಕ್ ಖಾತೆಯಿಂದ  5000/- ರೂಪಾಯಿಗಳನ್ನು ಗೂಗಲ್ ಪೇ ಮೂಲಕ ತನ್ನ ಗಂಡ ದಿನೇಶ್ ಬಾಬು ರವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದು, ಸದರಿ ವರ್ಗಾವಣೆ ಸಕ್ಸಸ್ ಆಗದೇ ಇದ್ದುದರಿಂದ ಗೂಗಲ್ ಪೇ ಕಸ್ಟಮರ್ ಕೇರ್ ಗೆ ಸಂಪರ್ಕಿಸಿದಾಗ ಅದರಲ್ಲಿ ಮೊ.ನಂ.09832867796 ಪತ್ತೆಯಾಗಿದ್ದು, ಆ ನಂಬರಿಗೆ ಸಂಪರ್ಕಿಸಲಾಗಿ, ಯಾರೋ ಒಬ್ಬ ಅನಾಮಧೇಯ ವ್ಯಕ್ತಿಯು ಮಾತನಾಡಿ ದೂರುದಾರರ ಬ್ಯಾಂಕ್ ಖಾತೆಯ ವಿವರಗಳನ್ನು ಮತ್ತು UPI ಪಿನ್ ನಂಬರನ್ನು ಪಡೆದುಕೊಂಡು ದೂರುದಾರರ ಬ್ಯಾಂಕ್ ಖಾತೆಯಿಂದ 50,985/- ರೂಪಾಯಿಗಳನ್ನು ವರ್ಗಾವಣೆ ಮಾಡಿಕೊಂಡು ಮೋಸ ಮಾಡಿರುತ್ತಾರೆ.

ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟರಾಮಪ್ಪ ಬಿನ್ ಚಿಕ್ಕ ಎಲ್ಲಪ್ಪ, ಗುಲ್ಲಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 17.09.2020 ರಂದು ಮದ್ಯಾಹ್ನ 12.45 ಗಂಟೆಯಲ್ಲಿ ದ್ವಿಚಕ್ರ ವಾಹನ ಪ್ಯಾಷನ್ ಪ್ರೋ ಸಂಖ್ಯೆ ಕೆಎ-08-ಕ್ಯೂ-7403 ನ್ನು ಚಲಾಯಿಸಿಕೊಂಡು ದೇಶಿಹಳ್ಳಿ ರಸ್ತೆ ಕಡೆಯಿಂದ ಬಂಗಾರಪೇಟೆಯ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ಮುಂಭಾಗದಲ್ಲಿ ಚಲಾಯಿಸಿಕೊಂಡು ಬರುತ್ತಿದ್ದಾಗ, ಕೆಜಿಎಫ್ ಕಡೆಯಿಂದ ಕಾರ್ ಸಂಖ್ಯೆ ಕೆಎ-25-ಎನ್-5710 ನ್ನು ಅದರ ಚಾಲಕನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಪರಿಣಾಮ, ದೂರುದಾರರಿಗೆ ರಕ್ತಗಾಯಗಳಾಗಿರುತ್ತದೆ.

ದೊಂಬಿ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಲೋಮಿ ಬಿನ್ ಚಿನ್ನಪ್ಪ, ಬಿ.ಎಂ. ರಸ್ತೆ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರ ಪಕ್ಕದ ಮನೆಯ ವಾಸಿಯಾದ  ವೇಲಾಂಗಣಿ ಮತ್ತು ಅವರ ಮಗ ರಾಬಿನ್ ರವರು ಮನೆ ಮದ್ಯೆದಲ್ಲಿರುವ ಜಾಗದಲ್ಲಿ ಕಾರ್ ಶೆಡ್ ಅನ್ನು ದಿನಾಂಕ 17.09.2020 ರಂದು ಬೆಳಗ್ಗೆ ಕಟ್ಟಿ, ಪೈಪನ್ನು  ದೂರುದಾರರ  ಮನೆಯ ಕಡೆ ಇಟ್ಟಿದ್ದು, ಮದ್ಯಾಹ್ನ 3.30 ಗಂಟೆಯಲ್ಲಿ  ದೂರುದಾರರು ಕೇಳಿದಕ್ಕೆ, ವೇಲಾಂಗಣಿ ಮತ್ತು ರಾಬಿನ್ ರವರು ಕೆಟ್ಟ ಮಾತುಗಳಿಂದ ಬೈದಿದ್ದು, ರಾಬಿನ್, ಬ್ರೀಟೋ, ಪ್ರಾನ್ಸೀಸ್  ಬೆನಿಟೋ, ವೇಲಾಂಗಣಿ ಪ್ರಾನ್ಸಿಸ್ ಪವಿನ್  ಮತ್ತು ಪ್ರಾನ್ಸಿಸ್ ಕೆವಿನ್ ರವರು ಗುಂಪು ಕಟ್ಟಿಕೊಂಡು,  ಕೈಗಳಲ್ಲಿ ಬ್ಯಾಟ್  ಅನ್ನು  ಹಿಡಿದುಕೊಂಡು ದೂರುದಾರರ ಬಳಿ ಬಂದು ದೂರುದಾರರ  ತಮ್ಮ ಸಂಪತ್ @ ಜೆಪ್ರಿ ರವರು ಬಂದು, “ಏಕೇ ಈ ರೀತಿ ಗುಂಪು ಕಟ್ಟಿಕೊಂಡು ನಮ್ಮ ಅಣ್ಣನ ಮೇಲೆ ಗಲಾಟೆ ಮಾಡುತ್ತೀದ್ದಿರ” ಎಂದು ಕೇಳಿದ್ದಕ್ಕೆ, ಬ್ಯಾಟ್ ನಿಂದ  ಸಂಪತ್ @ ಜೆಪ್ರಿ ಮತ್ತು ದೂರುದಾರರಿಗೆ ಹೊಡೆದು ರಕ್ತಗಾಯಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

 

ಇತರೆ01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಿದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ-17-09-2020 ಮದ್ಯಾಹ್ನ 12:00 ಗಂಟೆಯಲ್ಲಿ ಕೆ,ಜಿ,ಎಫ್ –ಬೇತಮಂಗಲ ಮುಖ್ಯ ರಸ್ತೆಯ ಬದಿಯಲ್ಲಿರುವ, ಹಳೇ ಗಾರ್ಮೆಂಟ್ಸ್ ಬಳಿ ಸಾರ್ವಜನಿಕರು ಸಂಚರಿಸುವ ಸ್ಥಳದಲ್ಲಿ ಕಮ್ಮಸಂದ್ರ ಗ್ರಾಮದ ವಾಸಿಗಳಾದ ಆಂಜಪ್ಪ ಮತ್ತು ಮನೀ ರವರು ಮದ್ಯಪಾನ ಸೇವನೆ ಮಾಡುತ್ತಿದ್ದು, ಅವರನ್ನು ಹಿಡಿದು ಸ್ಥಳದಲ್ಲಿದ್ದ 1) 02 ORIGINAL CHOICE WHISKY 90 ML. ನ ಖಾಲಿ  TETRA  ಪ್ಯಾಕೇಟ್ ಗಳು  2) 02 ಪ್ಲಾಸ್ಟಿಕ್  ಗ್ಲಾಸ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುರುಗೇಶ್ ಬಿನ್ ನಾರಾಯಣಪ್ಪ, ಅರಿಮಾನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು  ರವರ ತಂದೆ ನಾರಾಯಣಪ್ಪ, 60 ವರ್ಷ ರವರು  ಬ್ಯಾಂಕ್ ಸಾಲವನ್ನು ತೀರಿಸಲು ಸಾದ್ಯವಾಗದೆ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:16.09.2020 ಬೆಳಿಗ್ಗೆ 10.00 ಗಂಟೆಯಿಂದ ದಿನಾಂಕ:17.09.2020 ರಂದು ಬೆಳಿಗ್ಗೆ 7.00 ಗಂಟೆಯ ಮಧ್ಯೆ ಸಾಕರಸನ ಹಳ್ಳಿ ಗ್ರಾಮದ ಬಸಪ್ಪರವರ ಜಮೀನಿನಲ್ಲಿರುವ ಹುಣಸೆ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *