ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 17.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಹಲ್ಲೆ : 01
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುನಿರಾಜು ಬಿನ್ ಮುನಿಸ್ವಾಮಪ್ಪ, ಬಲ್ಲಗೆರೆ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ 16.08.2020 ರಂದು ಸಂಜೆ 5.00 ಗಂಟೆಯಲ್ಲಿ ಹರಿ ಎಂಬುವರೊಂದಿಗೆ ಪೂಜಾರಹಳ್ಳಿ ಗ್ರಾಮದ ಬಳಿ ಇರುವ ಬ್ರಿಡ್ಜ್ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ, ಅಲ್ಲಿಗೆ ದ್ವಿ ಚಕ್ರ ವಾಹನದಲ್ಲಿ ಬಂದ ವಿಶ್ವನಾಥ್ ರವರು ಹರಿ ರವರೊಂದಿಗೆ ಜಗಳ ಮಾಡುತ್ತಿದ್ದು, ದೂರುದಾರರು ಜಗಳ ಬಿಡಿಸಲು ಹೋದಾಗ ವಿಶ್ವನಾಥ್ ರವರು ದೂರುದಾರರಿಗೆ ಕೆಟ್ಟ ಮಾತುಗಳಿಂದ ಬೈದು, ಕಾಲಿನಿಂದ ಒದ್ದು, ಕೈಗಳಿಂದ ಹೊಡೆದು, ಬಾಯಿಂದ ದೂರುದಾರರ ಬಲ ಗೈ ಕಿರು ಬೆರಳನ್ನು ಕಚ್ಚಿ, ಬೆನ್ನಿನ ಮೇಲೆ ಒದ್ದಿದಾಗ ದೂರುದಾರರು ಬ್ರಿಡ್ಜ್ ಮೇಲಿಂದ ಕೆಳಗೆ ಬಿದಿದ್ದು, ಮೇಲ್ಪಂಕ್ತಿಯ ಒಂದು ಹಲ್ಲು ಬಿದ್ದು ಹೋಗಿ, ಮತ್ತೊಂದು ಹಲ್ಲು ಅರ್ಧಕ್ಕೆ ಮುರಿದಿರುತ್ತೆ.
– ಇತರೆ : 01
ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಆಸಿಡ್ ಹಾಕಿರುವ ಸಂಬಂಧ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಸುಧಾ ಕೊಂ ಆನಂದನ್, ಅಬು ಬಜಾರ್ ಬ್ಲಾಕ್, ಮಾರಿಕುಪ್ಪಂ, ಕೆ.ಜಿ.ಎಫ್ ರವರು ದಿನಾಂಕ 17.08.2020 ರಂದು ಮದ್ಯಾಹ್ನ 12.30 ಗಂಟೆಯಲ್ಲಿ ಮನೆಯ ಬಾಗಿಲ ಬಳಿ ಕುಳಿತುಕೊಂಡಿದ್ದಾಗ, ಯಾರೋ ಒಬ್ಬ ಅಸಾಮಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ತಲೆಗೆ ಕ್ಯಾಪ್ ಹಾಕಿಕೊಂಡು ದೂರುದಾರರ ಹಿಂಭಾಗದಿಂದ ಬಂದು ದೂರುದಾರರ ಬೆನ್ನಿನ ಮೇಲೆ ಆಸಿಡ್ ಹಾಕಿ ಓಡಿ ಹೋಗಿರುತ್ತಾನೆ.
– ಅಸ್ವಾಭಾವಿಕ ಮರಣ ಪ್ರಕರಣ : 01
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ರೇಖಾ, ಗೌತಮ್ ನಗರ, ರಾಬರ್ಟ್ಸನ್ಪೇಟೆ, ಕೆ.ಜಿ.ಎಫ್ ರವರ ಗಂಡ ರವಿ ಬಿನ್ ಪೀಟರ್, 48 ವರ್ಷ ರವರಿಗೆ ಗ್ಯಾಸ್ಟ್ರಿಕ್ ಸಮಸ್ಯೆಯಿದ್ದು, ದಿನಾಂಕ.17.08.2020 ರಂದು ರಾತ್ರಿ 11-30 ಗಂಟೆಯಲ್ಲಿ ರವಿ ರವರಿಗೆ ಹೃದಯಾಘಾತವಾಗಿಯೋ ಅಥವಾ ಬೇರೆ ಖಾಯಿಲೆಗೆ ತುತ್ತಾಗಿ ಇದ್ದಕ್ಕಿದ್ದಂತೆ ವಾಂತಿ ಬರುವ ರೀತಿ ಆಗಿ, ಜ್ಞಾನ ತಪ್ಪಿ ನೆಲದ ಮೇಲೆ ಬಿದ್ದು ಮೃತಪಟ್ಟಿರುತ್ತಾರೆ.