ದಿನದ ಅಪರಾಧಗಳ ಪಕ್ಷಿನೋಟ 18ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 17.03.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ರಸ್ತೆ ಅಪಘಾತಗಳು : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೃಷ್ಣಮೂರ್ತಿ ಬಿನ್ ರಾಮಪ್ಪ, ಚಂಬರಸನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ: 15.03.2020 ರಂದು ಸಂಜೆ 6.30 ಗಂಟೆಯಲ್ಲಿ ಕೆಂಪಾಪುರದ ಬಾರ್ ಮುಂಭಾಗ ರಸ್ತೆಯ ಎಡ ಭಾಗದಲ್ಲಿ ನಡೆದುಕೊಂಡು ಬರುತ್ತಿದ್ದಾಗ, ಎದುರುಗಡೆಯಿಂದ ಬರುತ್ತಿದ್ದ ದ್ವಿಚಕ್ರ ವಾಹನ ಸಂಖ್ಯೆ ಎಪಿ39 ಎಯು 0875 ರ ಚಾಲಕ ಮಾರುತಿ ಕುಮಾರ್ ಬಿನ್ ಮುನಿವೆಂಕಟಪ್ಪ ವಾಸ ಪಂತನಹಳ್ಳಿ ಗ್ರಾಮ ಎಂಬುವರು ವಾಹನವನ್ನು ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರಿಗೆ ಡಿಕ್ಕಿಪಡಿಸಿದ್ದರಿಂದ ರಕ್ತಗಾಯಗಳಾಗಿರುತ್ತದೆ.

 

– ಇತರೆ : 02

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 17.03.2020 ರಂದು ಬೆಳಿಗ್ಗೆ 9.00 ಗಂಟೆಗೆ ಪಹಮಿದುನ್ನಿಸ ಎ.ಎಸ್.ಐ ಮತ್ತು ಶ್ರೀ ಕೃಷ್ಣಮೂರ್ತಿ ಕೆ.ಆರ್, ಸಿ.ಹೆಚ್.ಸಿ  ರವರು ಉರಿಗಾಂಪೇಟೆಯ ಫಿಶ್ಲೈನ್ನಲ್ಲಿ ಗಸ್ತು ಮಾಡುತ್ತಿದ್ದಾಗ ರಾಜಾತಿ ಕೋಂ ಲೇಟ್ ವಿಶ್ವನಾಥ್ ಎಂಬುವರು ಮನೆಯ ಮುಂಭಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಲು ಅವಕಾಶಮಾಡಿಕೊಟ್ಟಿದ್ದು, ಸ್ಥಳದಲ್ಲಿದ್ದ 1..ಎರಡು ಪ್ಲಾಸ್ಟಿಕ್ ಗ್ಲಾಸ್ಗಳು 2. No.1 Highway  DELUXE WHISKY ಯ 90 ಎಂ.ಎಲ್ ನ 5 ಟೆಟ್ರಾ ಪ್ಯಾಕೆಟ್ ಗಳನ್ನು  ಅಮಾನತ್ತುಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 17.03.2020 ರಂದು ರಾತ್ರಿ  7.15 ಗಂಟೆಯಲ್ಲಿ ಪಿ.ಎಸ್.ಐ. ಜಗದೀಶ್‌ ರೆಡ್ಡಿ ರವರು ಹಾಗೂ ಹೆಚ್.ಸಿ 111, ಪಿಸಿ 159, 299 ರವರೊಂದಿಗೆ ಗಸ್ತುಮಾಡುತ್ತಿದ್ದಾಗ, ಹುಲಿಬೆಲೆ ಗ್ರಾಮದ ವಾಸಿಯಾದ ಹನುಮಂತಪ್ಪ ರವರು  ಮನೆಯ ಹಿಂಭಾಗದಲ್ಲಿ ಯಾವುದೇ ಅನುಮತಿಯಿಲ್ಲದೇ ಸಾರ್ವಜನಿಕರ ಮಧ್ಯಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದು, ಸ್ಥಳದಲ್ಲಿದ್ದ, 1) ಅರ್ದಂಬರ್ದ ಮಧ್ಯವಿರುವ Haywards Cheers Whisky 90 ml ನ 04 ಪಾಕೇಟ್ ಗಳು, ಖಾಲಿಯಾಗಿರುವ Haywards Cheers Whisky 90 ml ನ 05 ಪಾಕೇಟ್ ಗಳು, ಖಾಲಿಯಾಗಿರುವ 04 ನೀರಿನ ಪಾಕೆಟ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ರತ್ನಮ್ಮ, ಮಂಚಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಗಂಡ ವೆಂಕಟೇಶಪ್ಪ, 60 ವರ್ಷ ರವರಿಗೆ ಅಸ್ತಮಾ ಖಾಯಿಲೆಯಿದ್ದು, ಚಿಕಿತ್ಸೆ ಪಡಿಸಿದರು ಗುಣಮುಖವಾಗದೇ ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿ:17.03.2020 ರಂದು ಬೆಳಗ್ಗೆ  11.30 ಗಂಟೆಯಲ್ಲಿ ಅವರ ಜಮೀನಿನಲ್ಲಿರುವ ಮರಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *