ದಿನದ ಅಪರಾಧಗಳ ಪಕ್ಷಿನೋಟ 18ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:17.02.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ ಪ್ರಯತ್ನ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸಂತೋಷ್‌ ಕುಮಾರ್‌ ಬಿನ್ ನಾರಾಯಣಪ್ಪ, ವಿಜಯನಗರ, ಬಂಗಾರಪೇಟೆ ರವರು ದಿನಾಂಕ 17-02-2020 ರಂದು ಸಂಜೆ 7-30 ಗಂಟೆಯಲ್ಲಿ ಬಂಗಾರಪೇಟೆಯ ಗೌತಮನಗದ ಯಲ್ಲಮ್ಮ ದೇವಾಲಯದ ಹಿಂಭಾಗದ ರಸ್ತೆಯಲ್ಲಿರುವ ಚಿಕನ್ ಮಾರ್ಕೆಟ್ ರಸ್ತೆಯಲ್ಲಿ ಬರುತ್ತಿದ್ದಾಗ, ಅಲ್ಲಿ ನಿಂತಿದ್ದ ಶಬ್ಬೀರ್‌, ಅಪ್ಪಯ್ಯ ಮತ್ತು ಮಂಜು ರವರು  ದೂರುದಾರರ ದ್ವಿಚಕ್ರ ವಾಹನವನ್ನು ತಡೆದು ನಿಲ್ಲಿಸಿ, ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಹೊಡೆದು, ಕೆಳಗೆ ತಳ್ಳಿ ಚಾಕುಗಳಿಂದ ಹೊಟ್ಟೆಯ ಮೇಲೆ ಹೊಡೆದು ರಕ್ತಗಾಯ ಮಾಡಿರುತ್ತಾರೆ.

 

– ರಸ್ತೆ ಅಪಘಾತಗಳು : 02

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಮಚಂದ್ರ ಬಿನ್ ಪಾಪಣ್ಣ, ಚಿಂಚಾಡ್ಲಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ದಿನಾಂಕ.16.02.2020 ರಂದು ರಾತ್ರಿ 8.00 ಗಂಟೆಯಲ್ಲಿ ದ್ವಿಚಕ್ರ ವಾಹನ ಸಂಖ್ಯೆ:ಕೆ.ಎ08-ಯು0610 ಯನ್ನು ಚಲಾಯಿಸಿಕೊಂಡು ಗೀತಾ ರಸ್ತೆಯ 5 ನೇ ಕ್ರಾಸ್ ನ ಬಳಿ ಹೋಗುತ್ತಿದ್ದಾಗ ಹಿಂದೆಯಿಂದ RAY ZR ದ್ವಿಚಕ್ರ ವಾಹನ ಸಂಖ್ಯೆ:ಕೆ.ಎ08-ಎಕ್ಸ್ 8418 ಅನ್ನು ಅದರ ಚಾಲಕ ದೇವಾ ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಮಚಂದ್ರ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ರಾಮಚಂದ್ರ ವಾಹನ ಸಮೇತ ಕೆಳಗೆ  ಬಿದ್ದಾಗ, ರಕ್ತಗಾಯಗಳಾಗಿರುತ್ತದೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಜಾನ್ಸನ್‌ ಬಿನ್ ದೇವರೂಬನ್‌, ಇ.ಟಿ ಬ್ಲಾಕ್, ಉರಿಗಾಂ, ಕೆ.ಜಿ.ಎಫ್ ರವರು ದಿನಾಂಕ 16.02.2020 ರಂದು ರಾತ್ರಿ ಸುಮಾರು 10.45 ಗಂಟೆಯಲ್ಲಿ ಸ್ನೇಹಿತ ಸಂದೀಪ್ ಬಿನ್ ಕುಮಾರ್  ರವರನ್ನು ಹಿಂಬದಿಯಲ್ಲಿ ಕುಳ್ಳರಿಸಿಕೊಂಡು ಆಂಡ್ರಸನ್ ಪೇಟೆಯ ಗೋಣಮಾಕನಹಳ್ಳಿ ವೃತ್ತದ ಬಳಿ ತಿರುವಿನಲ್ಲಿ ಬರುತ್ತಿದ್ದಾಗ, ಕೆ.ಜಿ.ಎಫ್ ಆಂಡ್ರಸನ್ ಪೇಟೆ ಯಿಂದ ಕುಪ್ಪಂ ಕಡೆಗೆ ಈಚರ್ ವಾಹನ ಸಂಖ್ಯೆ ಎ.ಪಿ-03 ಟಿ.ಕೆ-4666 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ದ್ವಿ ಚಕ್ರ ವಾಹನಕ್ಕೆ ಬಲಗಡೆಯಿಂದ ಡಿಕ್ಕಿ ಪಡಿಸಿದ ಪ್ರಯುಕ್ತ ದೂರುದಾರರು ಮತ್ತು ಸಂದೀಪ್ ರವರುಗಳು ದ್ವಿ ಚಕ್ರ ವಾಹನ ಸಮೇತ ರಸ್ತೆಯ ಮೇಲೆ ಬಿದಿದ್ದು, ಇಬ್ಬರಿಗೂ ಗಾಯಗಳಾಗಿರುತ್ತದೆ.

– ದೊಂಬಿ : 03

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ 02 ದೊಂಬಿ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಮುಕ್ತಿಯಾರ್‌ ಅಹ್ಮದ್ ಬಿನ್ ಹೈದರ್‌, ಅಶೋಕ್‌ ನಗರ, ರಾಬರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರು ದಿನಾಂಕ 17.02.2020 ರಂದು ಸಂಜೆ 5.30 ಗಂಟೆಗೆ ತಮ್ಮ ಸಂಬಂಧಿಕರೊಂದಿಗೆ 1 ನೇ ಕ್ರಾಸ್ ನ ನೇಮಿಚಂದ್ ಇದ್ದ ಅಂಗಡಿಯ ಬಳಿ ಹೋಗಿ, ಕೆ.ಜಿ.ಎಫ್ ನ್ಯಾಯಾಲಯದಿಂದ ಹೊರಡಿಸಿರುವ ಆದೇಶವನ್ನು ಸದರಿ ನೇಮಿಚಂದ್ ರವರ ಮತ್ತು ಅವರ ಮಕ್ಕಳಿಗೆ ಹೇಳಿ ನ್ಯಾಯಾಲಯದಲ್ಲಿ ಕೇಸಿನ ತೀರ್ಪು ತಮ್ಮ ಪರವಾಗಿದ್ದು, ನೀವು ಅಂಗಡಿಯ ಸ್ವಾಧೀನಾನುಭವವನ್ನು ಬಿಟ್ಟುಕೊಡುವುದಾಗಿ ಹೇಳಿ, ಮೊದಲಿದ್ದ ಅಂಗಡಿಯ ಹೆಸರನ್ನು ಯಾಕೆ ಬದಲಾಯಿಸಿದ್ದು ಹಾಗೂ ಅಂಗಡಿಯ  ಬಾಡಿಗೆಯನ್ನು ಸಹ ಇದುವರೆಗೂ ಕೊಟ್ಟಿರುವುದಿಲ್ಲವೆಂದು  ಕೇಳಿದಾಗ ಅಂಗಡಿಯಲ್ಲಿದ್ದ ಪ್ರದೀಪ್, ಸಂದೀಪ್ ಮತ್ತು ಅಜೀತ್ ಕುಮಾರ್ ರವರು ದೂರುದಾರರೊಂದಿಗೆ ಗಲಾಟೆ ಮಾಡಿ,  ಪ್ರದೀಪ್, ಸಂದೀಪ್ ಮತ್ತು ಅಜಿತ್ ಕುಮಾರ್ ಹಾಗೂ ಇನ್ನು ಮೂರು ಜನರು ಸೇರಿ ಅಕ್ರಮ ಗುಂಪುಕಟ್ಟಿಕೊಂಡು ದೂರುದಾರರ ಮೇಲೆ ಗಲಾಟೆ ಮಾಡಿ ಕೈಗಳಿಂದ ಹೊಡೆದಿದ್ದು, ಸುತ್ತಿಗೆಯಿಂದ ದೂರುದಾರರ ಜೊತೆಯಿದ್ದ ಕಬೀರ್ ರವರಿಗೆ ಹೊಡೆದು ರಕ್ತಗಾಯಪಡಿಸಿದ್ದು, ಜಗಳ ಬಿಡಿಸಲು ಹೋದ ನಸ್ರುದ್ದಿನ್, ಕಬಾಲಿ ರವರಿಗೆ ಸಹ ಹೊಡೆದು ಕಾಲುಗಳಿಂದ ಒದ್ದು ಮೈನೋವುಂಟುಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

ದೂರುದಾರರಾದ ಶ್ರೀ. ಪ್ರದೀಪ್‌ ಬಿನ್ ಅಜಿತ್‌ ಕುಮಾರ್‌, ಬಿ.ಎಂ. ರಸ್ತೆ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರ ತಾತನಾದ ನೇಮಿಚಂದ್ ರವರು ಅಂಗಡಿಯನ್ನು ರಾಮಪ್ರಸಾದ್ ರವರಿಂದ ಖರೀದಿಸಿ ಅಗ್ರಿಮೆಂಟ್ ಮಾಡಿಕೊಂಡು 48 ವರ್ಷಗಳಿಂದ ಸ್ವಾಧೀನದಲ್ಲಿದ್ದು, ಜ್ಯುವೆಲ್ಲರಿ ಅಂಗಡಿ ಇಟ್ಟುಕೊಂಡಿರುತ್ತಾರೆ.  ದಿನಾಂಕ 17.02.2020 ರಂದು ಸಂಜೆ 5.30 ಗಂಟೆಯಲ್ಲಿ ದೂರುದಾರರು ಮತ್ತು ಅವರ ತಮ್ಮಂದಿರು ಅಂಗಡಿಯಲ್ಲಿದ್ದಾಗ, ಕಬೀರ್, ಮುಕ್ತಿಯಾರ್ ಅಹ್ಮದ್‌, ನಜೀರುದ್ದೀನ್ ಹಾಗೂ ಇತರೇ 5 ಜನರು ದೂರುದಾರರ ಅಂಗಡಿ ಮುಂದಿನ ರಸ್ತೆಯಲ್ಲಿ ನಿಂತುಕೊಂಡು ಅಂಗಡಿ ಖಾಲಿ ಮಾಡಲು ಹೇಳಿ, ದೂರುದಾರರೊಂದಿಗೆ ಜಗಳಕ್ಕೆ ಹೋಗಿ, ಕೈಗಳಿಂದ ಮತ್ತು ಚಾಕುವಿನಿಂದ ಹೊಡೆದು ರಕ್ತಗಾಯ ಪಡಿಸಿದ್ದು, ಜಗಳ ಬಿಡಿಸಲು ಬಂದ ಪ್ರಶಾಂತ್ ಮೆಹ್ತಾ ರವರಿಗೂ ಹೊಡೆದು, ಪ್ರಾಣಬೆದರಿಕೆ ಹಾಕಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೊಂಬಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಪ್ರದೀಪ್‌ ಬಿನ್ ಯಲ್ಲಪ್ಪ, ಮುಗಲಬೆಲೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮನೆಯ ಬಳಿ ದಿನಾಂಕ 16.02.2020 ರಂದು ರಾತ್ರಿ 9.45 ಗಂಟೆಯಲ್ಲಿ ಸತೀಶ್ ಎಂಬುವರು ಟ್ರಾಕ್ಟರ್ ನ್ನು ನಿಲ್ಲಿಸಿದ್ದು, ದೂರುದಾರರ ತಂದೆಯವರು ಕೇಳಿದಾಗ, ಟ್ರಾಕ್ಟರ್ ನ್ನು ಪಕ್ಕಕ್ಕೆ ನಿಲ್ಲಿಸಿದ್ದು, ಆಗ ರವಿ ಎಂಬುವರು ದೂರುದಾರರ ತಂದೆಯನ್ನು ಕುರಿತು ‘ಯಾಕೆ ಟ್ರಾಕ್ಟರ್ ಎತ್ತಿಸಿದ್ದೆಂದು ಗಲಾಟೆ ಮಾಡಿದ್ದು, ನಾಗರಾಜ್, ಸತೀಶ್, ಕಾವ್ಯ, ಮಂಜುಳ & ಯಲ್ಲಮ್ಮ ರವರುಗಳು ಹಳೆಯ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು, ಗಲಾಟೆ ಮಾಡುತ್ತಿದ್ದುದನ್ನು ದೂರುದಾರರು ಕಂಡು ಕೇಳಿದಕ್ಕೆ  ಕಬ್ಬಿಣದ ರಾಡ್, ಟ್ಯೂಬ್‌ ಲೈಟ್‌  ನಿಂದ ದೂರುದಾರರಿಗೆ ಹೊಡೆದು ಗಾಯಪಡಿಸಿರುತ್ತಾರೆ. ಜಗಳ ಬಿಡಿಸಲು ಬಂದ ದೂರುದಾರರ ತಾಯಿ ಸರೋಜಮ್ಮ ಹಾಗೂ ತಂಗಿ ರೂಪ ರವರಿಗೆ ಕೈಗಳಿಂದ ಹೊಡೆದು, ಕೆಟ್ಟ ಮಾತುಗಳಿಂದ ಬೈದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

 

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬೆಮೆಲ್‌ ನಗರ ಪೊಲೀಸ್ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಗೌರಿ ಲಕ್ಷ್ಮೀ ಕೊಂ ಶ್ರೀನಿವಾಸ, ಕತ್ತಿಹಳ್ಳಿ ಗ್ರಾಮ ರವರ ಮಗಳಾದ ಶ್ರೀಮತಿ ಪವಿತ್ರ, 24 ವರ್ಷ ರವರನ್ನು ತಮಿಳುನಾಡಿನ ತಿರತಣಿ ಬಳಿ ಇರುವ ಕೇಜಕಂಡಿಗ ಗ್ರಾಮದ ರಾಘವ ಎಂಬುವರಗೆ ಕೊಟ್ಟು ಮದುವೆ ಮಾಡಿದ್ದು, ದಿನಾಂಕ 05-02-2020 ರಂದು ಪವಿತ್ರ ಮತ್ತು ಆಕೆಯ 02 ನೇ ಮಗ ವರುಣ್ ರವರು ತವರು ಮನೆಗೆ ಬಂದಿದ್ದು, ದಿನಾಂಕ: 12-02-2020 ರಂದು ಸಂಜೆ 05-30 ಗಂಟೆಯಲ್ಲಿ  ಶ್ರೀಮತಿ ಪವಿತ್ರ ರವರು ವಸಂತನಗರದ ಕೆನರಬ್ಯಾಂಕ್ ಬಳಿ ಪಾನಿಪುರಿ ಅಂಗಡಿಗೆ ಹೋಗಿ  ಬರುವುದಾಗಿ ಮಗ ವರುಣ್ ನನ್ನು ಕರೆದುಕೊಂಡು ಹೋದವಳು ಮನೆಗೆ ವಾಪಸ್ ಬಾರದೆ ಕಾಣೆಯಾಗಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಮನ್‌ ಸ್ಟಾನ್‌ಡ್ಲಿ ಬಿನ್ ಜೇಮ್ಸ್‌‌ಪಾಲ್‌, ೨ನೇ ಬ್ಲಾಕ್, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರ ತಾಯಿ ಮೇರಿ ವಸಂತ, 57 ವರ್ಷ ರವರಿಗೆ 10 ವರ್ಷಗಳ ಹಿಂದೆ ಹೃದಯ ಶಸ್ತ್ರ ಚಿಕಿತ್ಸೆಯಾಗಿದ್ದು, ಸಕ್ಕರೆ ಖಾಯಿಲೆ, ರಕ್ತದ ಒತ್ತಡ ಖಾಯಿಲೆ ಸಹ ಇದ್ದು,  ದಿನಾಂಕ 16.02.2020 ರಂದು ಸಂಜೆ 4.45 ಗಂಟೆಯಲ್ಲಿ ದೂರುದಾರರು ಮನೆಗ ಬಂದು ನೋಡಲಾಗಿ ದೂರುದಾರರ ತಾಯಿಗೆ ಅಧಿಕ ರಕ್ತದ ಒತ್ತಡವಾಗಿ ಮದ್ಯಾಹ್ನ 3.30 ಗಂಟೆಯಿಂದ ಸಂಜೆ 4.45 ಗಂಟೆಗೆ ಮದ್ಯೆ ಹೆಚ್ಚಿನ ಮಾತ್ರೆಗಳನ್ನೋ ಅಥವಾ ಬೇರೆ ಯಾವುದೋ ವಿಷ ಪದಾರ್ಥವನ್ನೋ ಸೇವಿಸಿ ಒದ್ದಾಡುತ್ತಿದ್ದವರನ್ನು ರಾಬರ್ಟ್ಸನ್ಪೇಟೆ ಸಾರ್ವಜನಿಕ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು, ವೈದ್ಯರು ನು ಪರೀಕ್ಷಿಸಿ ಯಾವುದೋ ವಿಷ ಸೇವಿಸಿರುತ್ತಾರೆಂದು ಹೇಳಿ, ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಕಳುಹಿಸಿದ್ದು, ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ರಾತ್ರಿ 7.30 ಗಂಟೆಗೆ ತೆಗೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮಾರ್ಗ ಮದ್ಯೆದಲ್ಲಿಯೇ ಮೃತಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *