– ರಸ್ತೆ ಅಪಘಾತಗಳು : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟೇಶ್ ಬಿನ್ ಪಾಪಣ್ಣ, ಕಾಮಸಮುದ್ರಂ ಪೊಲೀಸ್ ಕ್ವಾಟ್ರಸ್, ಕಾಮಸಮುದ್ರಂ ರವರು ದಿನಾಂಕ 16.12.2019 ರಂದು ಸಂಜೆ 6.00 ಗಂಟೆಯಲ್ಲಿ ದ್ವಿಚಕ್ರ ವಾಹನ ಸಂಖ್ಯೆ. KA08 L343 ರಲ್ಲಿ ದಿನ್ನಕೊತ್ತೂರು ಕಡೆಯಿಂದ ಬಂಗಾರಪೇಟೆಗೆ ಬರುತ್ತಿರುವಾಗ, ಬಂಗಾರಪೇಟೆ ಕಡೆಯಿಂದ ಬರುತ್ತಿದ್ದ ಟ್ರಾಕ್ಟರ್ ನ ಹಿಂಬದಿಯಿಂದ ದ್ವಿಚಕ್ರ ವಾಹನ ಸಂಖ್ಯೆ.KA-01 EZ-8988 ರ ಸವಾರ ಅತಿವೇಗ ಮತ್ತು ಅಜಾಗರೂಕತೆಯಿಂದ ಟ್ರಾಕ್ಟರ್ನ್ನು ಒವರ್ ಟೇಕ್ ಮಾಡಿಕೊಂಡು ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪ್ರಯುಕ್ತ, ದೂರುದಾರರಿಗೆ ರಕ್ತಗಾಯಗಳಾಗಿರುತ್ತದೆ.
– ಹಲ್ಲೆ : 02
ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಈಶ್ವರ ರಾವ್ ಬಿನ್ ಶಿವಾಜಿ ರಾವ್, ಡಿ. ಪಿ ಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮನೆಯ ಬಳಿ ದಿನಾಂಕ 16.12.2019 ರಂದು ರಾತ್ರಿ 10.00 ಗಂಟೆಯಲ್ಲಿ ಬಾಬುರಾವ್ ರವರು ಬಂದು ಹೆಂಡತಿ ಮಕ್ಕಳನ್ನು ತನ್ನ ಜೊತೆ ಕಳುಹಿಸಿ ಎಂದು ಕೇಳಿದ್ದು, ದೂರುದಾರರು ಈ ಸಮಯದಲ್ಲಿ ಕಳುಹಿಸುವುದಿಲ್ಲ ನಾಳೆ ಬೆಳಿಗ್ಗೆ ಕರೆದುಕೊಂಡು ಹೋಗಿ ಎಂದಿದ್ದಕ್ಕೆ, ಬಾಬು ರಾವ್ ದೌರ್ಜನ್ಯಮಾಡಿ ಒಂದು ಬೇವಿನ ದೊಣ್ಣೆಯಿಂದ ದೂರುದಾರರ ತಲೆಗೆ ಹೊಡೆದಿದ್ದು, ಜಗಳ ಬಿಡಿಸಲು ಬಂದು ಮಾಲುಬಾಯಿ ರವರಿಗೆ ಸಹ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾನೆ.
ಚಾಂಪಿಯನ್ರೀಫ್ಸ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿಕ್ರಮ್ ಬಿನ್ ಜಗದೀಶ್, ಎಫ್ ಬ್ಲಾಕ್, ಚಾಂಪಿಯನ್ರೀಫ್ಸ್, ಕೆ.ಜಿ.ಎಫ್ ರವರ ಮನೆಯ ಬಳಿ ದಿನಾಂಕ 17.12.2019 ರಂದು ರಾತ್ರಿ 8-00 ಗಂಟೆಯಲ್ಲಿ ಸುನೋಜ್, ರಾಜು, ವದಡು ಅಪ್ಪು ಮತ್ತಿತರರು ಬಂದು ಹಳೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡು ಜಗಳ ಕಾದು, ದೂರುದಾರರಿಗೆ ಚಾಕುವಿನಿಂದ ಹೊಡೆದು ರಕ್ತಗಾಯಪಡಿಸಿದ್ದು, ದೂರುದಾರರ ಸ್ನೇಹಿತ ನಾಗರಾಜ್ ರವರಿಗೆ ಸುನೊಜ್ ಮತ್ತು ಅವನ ಸ್ನೇಹಿತ ರಾಜು ಚಾಕುವಿನಿಂದ ಹೊಡೆದು ರಕ್ತ ಗಾಯ ಪಡಿಸಿದ್ದು, ಶ್ರೀಕಂಠ ಮತ್ತು ಸುಧಾಕರ್ ರವರಿಗೆ ಸುನೊಜ್ ಮತ್ತು ಅವನ ಸ್ನೇಹಿತರು ಕೈಗಳಿಂದ ಹೊಡೆದಿರುತ್ತಾರೆ.
– ಮಹಿಳೆ ಮೇಲಿನ ದೌರ್ಜನ್ಯ ಪ್ರಕರಣಗಳು : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಯಶೋದಾ ಕೊಂ ಅಶೋಕ್, ಕಾಮಾಂಡಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು 17 ವರ್ಷಗಳ ಹಿಂದೆ ಅಶೋಕ್ ರವರೊಂದಿಗೆ ಮದುವೆಯಾಗಿದ್ದು, ಮದುವೆ ಕಾಲದಲ್ಲಿ ವರದಕ್ಷಿಣೆ ನೀಡಿದ್ದು, ಈಗ್ಗೆ 7 ವರ್ಷಗಳಿಂದ ದೂರುದಾರರಿಗೆ ಗಂಡ ಅಶೋಕ್ ಮತ್ತು ಮಾವ ನಾರಾಯಣಪ್ಪ ರವರು ದೂರುದಾರರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿ ಇನ್ನು ಹೆಚ್ಚಿನ ವರದಕ್ಷಿಣೆಯನ್ನು ತವರು ಮನೆಯಿಂದ ತರುವಂತೆ ಹಿಂಸೆ ನೀಡಿದ್ದು, ನಾರಾಯಣಪ್ಪ ರವರು ಅಶೋಕ್ ರವರಿಗೆ ಎರಡನೇ ಮದುವೆಯನ್ನು ಮಾಡಿಸಿರುತ್ತಾರೆ. ದಿನಾಂಕ 08.12.2019 ರಂದು ಸಂಜೆ 5-00 ಗಂಟೆಯಲ್ಲಿ ಅಶೋಕ್ ಮತ್ತು ನಾರಾಯಣಪ್ಪ ರವರು ದೂರುದಾರರ ಮತ್ತು ಮಕ್ಕಳ ಮೇಲೆ ಗಲಾಟೆ ಮಾಡಿ ಮನೆಯನ್ನು ಬಿಟ್ಟು ಹೋಗುವಂತೆ ಹೇಳಿ, ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.