ದಿನದ ಅಪರಾಧಗಳ ಪಕ್ಷಿನೋಟ 17 ನೇ ಮಾರ್ಚ್‌ 2019

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ: 16.03.2019 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಅಕ್ರಮ ಮದ್ಯ ಮಾರಾಟ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 16.03.2019 ರಂದು ಬೆಳಿಗ್ಗೆ 11.45 ಗಂಟೆಗೆ ಮಾವಹಳ್ಳಿ ಗ್ರಾಮದ ವೆಂಕಟೇಶ್ ಬಿನ್ ತಿಮ್ಮಯ್ಯ ರವರು ಯಾವುದೇ ಪರವಾನಗಿ ಇಲ್ಲದೆ ಮನೆಯ ಹಿಂಭಾಗ ಮದ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದವರ ಮೇಲೆ ಪಿ.ಎಸ್.ಐ ಶ್ರೀ. ಮುರಳಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ,  1) Haywards Cheers Whisky 180 ml ನ 02 ಪಾಕೇಟ್ ಗಳು ಮತ್ತು  2) Highway Fine Whisky 180 ml ನ 02 ಪಾಕೇಟ್ ಗಳನ್ನು ಮತ್ತು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತೆ.

Leave a Reply

Your email address will not be published. Required fields are marked *