ದಿನದ ಅಪರಾಧಗಳ ಪಕ್ಷಿನೋಟ 17 ನೇ ಸೆಪ್ಟೆಂಬರ್‌ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 16.09.2018 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. 

– ರಸ್ತೆ ಅಪಘಾತ ಪ್ರಕರಣ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ-14-09-2018 ರಂದು ದೂರುದಾರರಾದ ಶ್ರೀನಾರಾಯಣಸ್ವಾಮಿ, ೪೫ ವರ್ಷ, ಐಸಂದ್ರ ಮಿಟ್ಟೂರು, ಬೇತಮಂಗಲ ಹೋಬಳಿ ರವರ  ಮಗಳಾದ ಸಂಗೀತ ರವರೊಂದಿಗೆ ದ್ವಿಚಕ್ರ ವಾಹನ ಸಂಖ್ಯೆ TN-29-Y-7936 ರಲ್ಲಿ ಬೇತಮಂಗಲ- ಕೋಲಾರ ಮುಖ್ಯ ರಸ್ತೆಯ ನ್ಯೂಟೌನ್ ಬಳಿ ಇರುವ ಭಾರತ್ ಪೆಟ್ರೋಲ್ ಬಂಕ್ ಬಳಿ ಹೋಗುತ್ತಿದ್ದಾಗ ಕೋಲಾರ ರಸ್ತೆ ಕಡೆಯಿಂದ ಯಮಹಾ ದ್ವಿ ಚಕ್ರ ವಾಹನ ಸಂಖ್ಯೆ KA-51-AA-9489 ರ ಚಾಲಕ ತನ್ನ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರು ಚಲಾಯಿಸುತ್ತಿದ್ದ ದ್ವಿ ಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ದೂರುದಾರರು ಮತ್ತು ಆತನ ಮಗಳು ಸಂಗೀತ ರವರು ದ್ವಿ ಚಕ್ರ ವಾಹನ ಸಮೇತ ರಸ್ತೆಯಲ್ಲಿ ಬಿದ್ದು ರಕ್ತ ಗಾಯವಾಗಿರುತ್ತೆ.

 

– ಅಪಹರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಪಹರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಸುರೇಶ, ದೇಶಿಹಳ್ಳಿ ಬಂಗಾರಪೇಟೆ ವಾಸಿ ರವರ ೧೫ ವರ್ಷದ ಅಪ್ರಾಪ್ತೆ ಮಗಳು ದಿನಾಂಕ: 14.09.2018 ರಂದು ಬೆಳಗ್ಗೆ ಸುಮಾರು 9.00 ಗಂಟೆಯಲ್ಲಿ ವಿಶೇಷ ತರಗತಿಗಳು ಇರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದು, ಬೆಳಿಗ್ಗೆ ಸುಮಾರು 10.00 ಗಂಟೆಯಲ್ಲಿ ಆರೋಪಿಯಾದ ವೇಲಾಂಗಣಿ, ದೇಶಿಹಳ್ಳಿ ವಾಸಿ  ಎಂಬುವನು ಬಂಗಾರಪೇಟೆ ಬಸ್ ನಿಲ್ದಾಣದ ಸಮೀಪವಿರುವ ರೈಲ್ವೆ ಟಿಕೆಟ್ ಕೌಂಟರ್ ಹತ್ತಿರ ದೂರುದಾರರ ಮಗಳ ಕೈಯನ್ನು ಹಿಡಿದುಕೊಂಡು ಅಪಹರಿಸಿಕೊಂಡು ಹೋಗಿರುತ್ತಾರೆಂದು ದೂರು.

– ಹಲ್ಲೆ :  01

ಕಾಮಸಮುದ್ರ ಪೊಲೀಸ್  ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.    ಈ ಕೇಸಿನ ದೂರುದಾರರಾದ ಮುನಿವೆಂಕಟಪ್ಪ, ೬೭ ವರ್ಷ, ಕುಂದರಸನಹಳ್ಳಿ ಗ್ರಾಮ ರವರಿಗೂ ಮತ್ತು ಆರೋಪಿ-1 ಮುರಳಿಧರ ಬಿನ್ ಬಾಲಕೃಷ್ಣ, ಕುಂದರಸನಹಳ್ಳಿ ಗ್ರಾಮ ರವರಿಗೆ ಜಮೀನಿನ ವಿಚಾರದಲ್ಲಿ ಸಿವಿಲ್ ಕೇಸು ದಾಖಲಾಗಿ ಮನಸ್ತಾಪಗಳಿದ್ದು ಆಗಾಗ ಆರೋಪಿ ದೂರುದಾರರನ್ನು & ಅವರ ಕುಟುಂಬದವರ ಮೇಲೆ ಕೆಟ್ಟ ಮಾತುಗಳಿಂದ ಬೈಯುತ್ತ ಜಗಳ ಮಾಡುತ್ತಿದ್ದು, ದಿನಾಂಕ 15.09.2018 ರಂದು ಸಂಜೆ 6.00 ಗಂಟೆ ಸಮಯದಲ್ಲಿ ಆರೋಪಿ ಮುರಳಿಧರ ಮತ್ತು ರಾಕೇಂದ್ರ ಬಿನ್ ವೇಂಕಟೇಶಪ್ಪ ರವರು ದೂರುದಾರರನ್ನು  ಕುರಿತು ಸಿವಿಲ್ ಕೇಸು ವಾಪಸ್ ತೆಗೆದು ಕೊ ಎಂದು ಕೆಟ್ಟ ಮಾತುಗಳಿಂದ ಬೈದ್ದು, ಕೈಗಳಿಂದ ಹೊಡೆದು, ಕೇಸು ವಾಪಸ್ ತೆಗೆದುಕೊಳ್ಳದೇ ಇದ್ದರೆ ಪ್ರಾಣ ಸಹಿತ ಬಿಡುವುದಿಲ್ಲ ಎಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

– ಅಸ್ವಾಭಾವಿಕ ಮರಣ : 01

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:15.09.2018 ರಂದು ಸಂಜೆ ಸುಮಾರು 06-00 ಗಂಟೆ ಸಮಯದಲ್ಲಿ ಈ ಕೇಸಿನ ದೂರುದಾರರಾದ ರಾಜ ಬಿನ್ ಜಯಪಾಲ್, ಕತ್ತಿಹಳ್ಳಿ ಬಂಗಾರಪೇಟೆ ತಾಲ್ಲೂಕು ರವರ ಅಣ್ಣನಾದ ಪ್ರತಾಪ್ ೩೨ ವರ್ಷ  ರವರು ಮದ್ಯಸೇವನೆ ಮಾಡಿ, ಬೆಮೆಲ್ ಆಫೀಸರ್ಸ್ ಕ್ವಾಟ್ರಸ್ ನ ಮೈನ್ ಗೇಟ್ ನ ಗಾರ್ಡ್ ರೂಂ ಬಳಿ ಬಿದ್ದಿದ್ದು, ಆತನ ಬಾಯಿಯಲ್ಲಿ ನೊರೆ ಬಂದು, ಪ್ರಜ್ಞಾಹೀನನಾಗಿದ್ದು, ಅಂಬ್ಯುಲೆನ್ಸ್ ನಲ್ಲಿ ಚಿಕಿತ್ಸೆಗೆ ರಾಬರ್ಟ್‌‌ಸನ್‌ಪೇಟೆ ಜನರಲ್ ಆಸ್ಪತ್ರೆಗೆ ಕಳುಹಿಸಿದ್ದು, ಅಲ್ಲಿನ ವೈದ್ಯರು ರಾತ್ರಿ ಸುಮಾರು 08-00 ಗಂಟೆಗೆ ಪ್ರತಾಪ್ ನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ಪ್ರತಾಪ್‌ ರವರು ಮದ್ಯಸೇವನೆ ಮಾಡಿದ್ದರಿಂದಲೋ, ಹೃದಯಾಘಾತದಿಂದಲೋ, ಪಿಟ್ಸ್ ನಿಂದಲೋ ಅಥವಾ ಬೇರೆ ಯಾವುದೋ ಕಾರಣದಿಂದಲೋ ಮೃತಪಟ್ಟಿರುತ್ತಾನೆಂತ ದೂರು.

Leave a Reply

Your email address will not be published. Required fields are marked *