ದಿನದ ಅಪರಾಧಗಳ ಪಕ್ಷಿನೋಟ 17 ನೇ ಜನವರಿ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 16.01.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

ಇತರೆ01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಜೀತ ಪದ್ದತಿ ನಿರ್ಮೂಲನೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ದಯಾನಂದ್, ತಹಶೀಲ್ದಾರ್‌, ಬಂಗಾರಪೇಟೆ ತಾಲ್ಲೂಕು ರವರು ನೀಡಿದ ದೂರಿನಲ್ಲಿ, ಬೂದಿಕೋಟೆ ಹೋಬಳಿ ದೊಡ್ಡಪೊನ್ನಾಂಡಹಳ್ಳಿ ಗ್ರಾಮದ ವಾಸಿಗಳಾದ ಶ್ರೀ.ಕೃಷ್ಣಪ್ಪ ಬಿನ್ ಬ್ಯಾಟಪ್ಪ ಮತ್ತು ಶ್ರೀಮತಿ ರುಕ್ಕಮ್ಮ ಕೋಂ ಕೃಷ್ಣಪ್ಪ ಎಂಬುವರು ಸುಮಾರು 25 ವರ್ಷಗಳಿಂದ ಹುದುಕುಳ ಗ್ರಾಮದ ಸರ್ವೆ ನಂ 241 ರಲ್ಲಿ 3-04 ಗುಂಟೆ ಜಮೀನಿನ ಮಾಲೀಕರಾದ ಮೃತ್ಯುಂಜಯ ಬಿನ್ ಸಿದ್ದಗಂಗಮ್ಮ ರವರ ಜಮೀನಿನಲ್ಲಿ ತೋಟ ನೋಡಿಕೊಳ್ಳಲು ಸುಮಾರು 10*10 ಅಡಿಗಳ ವಿಸ್ತೀರ್ಣದ ಗುಡಿಸಲಿನಲ್ಲಿದ್ದು, ಇವರಿಗೆ ಮಾಸಿಕವಾಗಿ ಕನಿಷ್ಠ ವೇತನಕ್ಕೆ ತಕ್ಕಂತೆ ಸಂಬಳ ನೀಡುತ್ತಿಲ್ಲವಾದ್ದರಿಂದ ಸದರಿಯವರನ್ನು ಜೀತದಾಳುಗಳನ್ನಾಗಿ ಪರಿಗಣಿಸಿ, ಸದರಿಯವರನ್ನು ಜೀತದಾಳುಗಳಾಗಿ ನೇಮಿಸಿಕೊಂಡಿದ್ದ ಜಮೀನಿನ ಮಾಲೀಕರಾದ ಮೃತ್ಯುಂಜಯ ರವರ ವಿರುದ್ದ ಕಾನೂನು ರೀತ್ಯಾ ಕ್ರಮ ಜರುಗಿಸಲು ನೀಡಿದ ದೂರು.

Leave a Reply

Your email address will not be published. Required fields are marked *