ದಿನದ ಅಪರಾಧಗಳ ಪಕ್ಷಿನೋಟ 17 ನೇ ಏಪ್ರಿಲ್‌ 2019

.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ  ದಿನಾಂಕ 16.04.2019   ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು : 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 15.04.2019 ರಂದು ರಾತ್ರಿ ಸುಮಾರು 10.00 ಗಂಟೆಯಲ್ಲಿ ಅರೋಪಿ ನಾರಾಯಣಸ್ವಾಮಿ ಬಿನ್ ವೆಂಕಟೇಶಪ್ಪ, ೨೨ ವರ್ಷ, ಕಾಲುವಳಹಳ್ಳಿ ಗ್ರಾಮ ಮಾರಿಕುಪ್ಪಂ ರವರು ತನ್ನ ದ್ವಿಚಕ್ರ ವಾಹನ ಸಂಖ್ಯೆ ಕೆಎ08.ಅರ್.5983 ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಕೊಡಿಗೇನಹಳ್ಳಿ ಗ್ರಾಮದ ಗೇಟ್ ಬಳಿ ಹೋಗುತ್ತಿದ್ದಾಗ ತನ್ನ ದ್ವಿಚಕ್ರ ವಾಹನಕ್ಕೆ ಅಡ್ಡ ಬಂದ ಜಿಂಕೆಗೆ ಅಪಘಾತ ಪಡಿಸಿದ್ದರಿಂದ ಜಿಂಕೆಯು ರಸ್ತೆಯ ಪಕ್ಕದಲ್ಲಿ ಮೃತ ಪಟ್ಟಿರುತ್ತದೆ ಎಂದು ಮಾರಿಕುಪ್ಪಂ ಪೊಲೀಸ್ ಠಾಣೆಯ ಎ.ಎಸ್‌.ಐ ರವರಾದ ಶ್ರೀ. ಕೋದಂಡಪಾಣಿ ರವರು ದೂರು ನೀಡಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಕಾಮಸಮುದ್ರ ಪೊಲೀಸ್‌ ಠಾಣೆಯಲ್ಲಿ  ಮಹಿಳೆ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ಈ ಕೇಸಿನ ದೂರುದಾರರು ಬಸಮ್ಮ ಮಿಟ್ಟಹಳ್ಳಿ ಗ್ರಾಮ ಕಾಮಸಮುದ್ರ ರವರು ದಿನಾಂಕ 14.04.2019 ರಂದು ಬೆಳಿಗ್ಗೆ 11.00 ಗಂಟೆಗೆ ದೂರುದಾರರು ಬಟ್ಟೆ ಹೊಗೆಯಲು ಗ್ರಾಮದ ನೀರಿನ ಟ್ಯಾಂಕ್ ಬಳಿ ಹೋಗಿ ಮತ್ತೆ ಮನೆಗೆ ಬಂದು ನೋಡಲಾಗಿ ದೂರುದಾರರ ಮಗಳಾದ ಕು. ವರಲಕ್ಷ್ಮಿ, ೧೯ ವರ್ಷ ರವರು  ಮನೆಯಲ್ಲಿ ಇಲ್ಲದೇ ಕಾಣೆಯಾಗಿರುತ್ತಾಳೆ.

 

Leave a Reply

Your email address will not be published. Required fields are marked *