ದಿನದ ಅಪರಾಧಗಳ ಪಕ್ಷಿನೋಟ 17ನೇ ಡಿಸೆಂಬರ್‍ 2017

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 16.12.2017 ರಂದು ಬೆಳಿಗ್ಗೆ 10.00 ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 ಕೊಲೆ : ಇಲ್ಲ

ಕೊಲೆ  ಪ್ರಯತ್ನ : ಇಲ್ಲ

ಡಕಾಯತಿ : ಇಲ್ಲ

ಸುಲಿಗೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣಸ್ವಾಮಿ ಬಿನ್  ಮುನಿಸ್ವಾಮಿ, ಹುಣಸನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು  ದಿನ್ನಕೊತ್ತೂರು ಗ್ರಾಮದ ಬಳಿ ಇರುವ ಜಮೀನಿನ ಬಳಿ ದಿನಾಂಕ: 14/12/2017 ರಂದು ಬೆಳಿಗ್ಗೆ ಹೋಗಿ, ನಂತರ  9.45 ಗಂಟೆಯಲ್ಲಿ ತನ್ನ ದ್ವಿಚಕ್ರ ವಾಹನದಲ್ಲಿ ಮೋನಿಕಾ ಎಸ್ಟೇಟ್ ಬಳಿ ಬರುತ್ತಿದ್ದಾಗ, ಯಾವುದೋ ಒಂದು ಕಾರು ಹಿಂಬದಿಯಿಂದ ಬಂದು ದೂರುದಾರರ ದ್ವಿಚಕ್ರ ವಾಹನಕ್ಕೆ ತಾಕಿಸಿದ್ದರಿಂದ ದೂರುದಾರರು ಕೆಳಗೆ ಬಿದ್ದಿದ್ದು, ಕಾರಿನಲ್ಲಿದ್ದ 4 ಜನರು (ಮುಖಕ್ಕೆ ಮಂಕಿಕ್ಯಾಪ್ ಹಾಕಿಕೊಂಡಿದ್ದವರು) ದೂರುದಾರರನ್ನು ಕಾರಿನೊಳಗೆ ಎಳೆದುಕೊಂಡು ಅಪಹರಿಸಿ, ಚಾಕು ಮತ್ತು ದೊಣ್ಣೆಯನ್ನು ತೋರಿಸಿ ಬೆದರಿಕೆ ಹಾಕಿ, ಕಾರನ್ನು ಕಾಮಸಮುದ್ರಂ ಮಾರ್ಗವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ದೂರುದಾರರ ಕತ್ತಿನಲ್ಲಿದ್ದ  ಬಂಗಾರದ ಚೈನು –  80 ಗ್ರಾಂ, ಬಂಗಾರದ ಬ್ರಾಸ್ ಲೈಟ್ – 35 ಗ್ರಾಂ, ಆರು ಬಂಗಾರದ ಉಂಗುರಗಳು –  55 ಗ್ರಾಂ,  ರೆಡ್ಮಿ ಎಂ.ಐ. ಮೊಬೈಲ್ ಹಾಗೂ ನಗದು ಹಣ 3,000/- ರೂ ಒಟ್ಟು ಬೆಲೆ ಸುಮಾರು 4,20,000/- ರೂ ಬಾಳತಕ್ಕದ್ದನ್ನು ಕಿತ್ತುಕೊಂಡು, ಭೀಮಗಾನಹಳ್ಳಿಯಿಂದ ಮುಂದೆ ಸುಮಾರು 2 ಕಿ.ಮೀ ದೂರದಲ್ಲಿ ದೂರುದಾರರನ್ನು ಕೆಳಗೆ ತಳ್ಳಿ, ಪೊಲೀಸರಿಗೆ ದೂರು ನೀಡಿದರೆ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿ ಹೊರಟು ಹೋಗಿರುತ್ತಾರೆ.

ಕನ್ನ ಕಳುವು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರವಿಚಂದ್ರನ್ ಬಿನ್ ಪೆರುಮಾಳ್, ವಸಂತ್ ನಗರ, ಬೆಮೆಲ್ ನಗರ, ಕೆ.ಜಿ.ಎಫ್ ರವರು ಆಂಡ್ರಸನ್ ಪೇಟೆಯ ಇಂಡಸ್ಟ್ರೀಯಲ್ ಏರಿಯಾದಲ್ಲಿ ಪುಷ್ಪಕ್ ಇಂಡಸ್ಟ್ರೀಸ್ ಎಂಬ ಹೆಸರಿನಲ್ಲಿ ವೆಲ್ಡಿಂಗ್ & ಎಲೆಕ್ಟ್ರೋಡ್ ಮ್ಯಾನು ಪ್ಯಾಕ್ಚರಿಂಗ್ ಪ್ಯಾಕ್ಟರೀಯನ್ನು ನಡೆಸಿ, ನಷ್ಟ ಬರುತ್ತಿದ್ದರಿಂದ 2015 ನೇ ಸಾಲಿನ ಡಿಸೆಂಬರ್ ನಲ್ಲಿ ಪ್ಯಾಕ್ಟರೀಯನ್ನು ಮುಚ್ಚಿದ್ದು,  ದಿನಾಂಕ 29-11-2017 ರಂದು ರಾತ್ರಿ 10.00 ಗಂಟೆಯಿಂದ ದಿನಾಂಕ 11-12-2017 ರಂದು ಮಧ್ಯಾಹ್ನ  3.30 ಗಂಟೆಗೆ ಮಧ್ಯೆ ಯಾರೋ ಕಳ್ಳರು ಪ್ಯಾಕ್ಟರೀಯ ಕಿಟಕಿಯ ಕಬ್ಬಿಣದ ಗ್ರಿಲ್ ಗಳನ್ನು ಮುರಿದು ಒಳಗೆ ಹೋಗಿ ಬೆಸ್ಕಾಂ ಮೀಟರ್, ಕರೆಂಟ್ ಟ್ರಾನ್ಸ್ ಫಾರ್ಮರ್ ಹಾಗೂ ಇತರೆ ಕಬ್ಬಿಣದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಸಾಧಾರಣ ಕಳ್ಳತನ : ಇಲ್ಲ

– ರಸ್ತೆ ಅಪಘಾತಗಳು :‍ ಇಲ್ಲ

ಮೋಸ/ವಂಚನೆ ಪ್ರಕರಣಗಳು : ಇಲ್ಲ

– ದೊಂಬಿ : ಇಲ್ಲ

– ಜೂಜಾಟ ಕಾಯ್ದೆ : ಇಲ್ಲ

ಅಪಹರಣ : ಇಲ್ಲ

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಆರ್‍.ಕೆ. ಪ್ರಿಯಾಂಕ ಕೋಂ ಶ್ರೀನಾಥ್, ಮುನೇಶ್ವರ ನಗರ, ಬೆಂಗಳೂರು ರವರಿಗೆ ದಿನಾಂಕ:05-12-2016 ರಂದು ಓರಿಯಂಟಲ್ ಲೈನಿನ ವಾಸಿ ಶ್ರೀನಾಥ್ ಬಿನ್ ಮುನಿಸ್ವಾಮಿ ಎಂಬಾತನ ಜೊತೆ ಮದುವೆಯಾಗಿದ್ದು, ಮದುವೆ ಕಾಲದಲ್ಲಿ ವರದಕ್ಷಿಣೆಯಾಗಿ ವರನಿಗೆ 50 ಗ್ರಾಂ ಮತ್ತು ವಧುವಿಗೆ 250 ಗ್ರಾಂ ಚಿನ್ನದ ಒಡವೆ, ಗೃಹ ಬಳಕೆ ವಸ್ತುಗಳು, ಮೋಟಾರ್ ಸೈಕಲ್ ಮತ್ತು ನಗದು ಹಣ 3,00,000/- ರೂ ಕೊಟ್ಟು ಉಳಿದ 2,00,000/-ರೂ ಮದುವೆಯ ನಂತರ ಕೊಡುವುದಾಗಿ ತಿಳಿಸಿದ್ದು, ಮದುವೆಯಾದ 01 ತಿಂಗಳ ನಂತರ ಗಂಡ ಶ್ರೀನಾಥ್ ರಜೆ ಮುಗಿಸಿ ಆರ್ಮಿ ಕೆಲಸಕ್ಕೆ ಹೋದ ಮೇಲೆ, ಗಂಡನ ಮನೆಯಲ್ಲಿ ಆರೋಪಿಗಳಾದ ಆರ್ಪುದಂ, ಮಿತ್ರಾ, ನಟರಾಜ್, ಚಿತ್ರಾ, ಗೋಪಿ, ರಘುನಾಥ್ ಮತ್ತು ಸಂಗೀತಾ ರವರು ತವರಿನಿಂದ ಕೊಡಬೇಕಾದ ವರದಕ್ಷಿಣೆಯ ಬಾಕಿ ಹಣ 2,00,000/- ರೂ ತರುವಂತೆ ಒತ್ತಾಯಿಸಿ ಕೆಟ್ಟಮಾತುಗಳಿಂದ ಬೈದು ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದು, ನಂತರ ದೂರುದಾರರು ಗಂಡ ಕೆಲಸ ಮಾಡುತ್ತಿದ್ದ ಗುಜರಾತ್ ನ ವಡೋದರ ಎಂಬಲ್ಲಿಗೆ ಹೋದಾಗ ಅಲ್ಲಿಯೂ ಸಹ ಗಂಡ ಶ್ರೀನಾಥ್ ವರದಕ್ಷಿಣೆಯ ಬಾಕಿ ಹಣಕ್ಕಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುತ್ತಾರೆ.

– ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು : ಇಲ್ಲ

 ಹಲ್ಲೆ :   01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೃಷ್ಣಪ್ಪ ಬಿನ್ ವೆಂಕಟಪ್ಪ, ಪಾಪೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ಗಂಗಮ್ಮ ರವರನ್ನು ಆರೋಪಿ ಮುರಳಿ, ಕೊಲಮಸನಪಲ್ಲಿ, ಆಂದ್ರಪ್ರದೇಶ ಎಂಬರವರಿಗೆ ಮದುವೆ ಮಾಡಿಕೊಟ್ಟಿದ್ದು, ಅವರಿಗೆ 2 ಗಂಡು ಮಕ್ಕಳು ಇರುತ್ತಾರೆ. ದೂರುದಾರರ ಮಗಳು ಗರ್ಭವತಿಯಾಗಿದ್ದರಿಂದ 2 ತಿಂಗಳ ಹಿಂದೆ ಮನೆಗೆ ಕರೆದುಕೊಂಡು ಬಂದಿದ್ದು, ದಿನಾಂಕ-15-12-2017 ರಂದು ಮದ್ಯಾನ  2.00 ಗಂಟೆಗೆ ಆರೋಪಿ ಮುರಳಿ  ದೂರುದಾರರ ಮನೆಗೆ ಹೋಗಿ  ಗಂಗಮ್ಮಳೊಂದಿಗೆ ಸಂಸಾರದ ವಿಚಾರದಲ್ಲಿ ಗಲಾಟೆ ಮಾಡಿಕೊಂಡು, 2 ವರ್ಷದ ಮಗುವನ್ನು ಎತ್ತಿಕೊಂಡು ಅವರ ಊರಿಗೆ ಹೋಗುತ್ತಿದ್ದಾಗ, ದೂರುದಾರರು ಮತ್ತು ಗಂಗಮ್ಮ ಚಿಕ್ಕ ಹುಡಗನನ್ನು ತೆಗೆದು ಕೊಂಡು ಹೋಗಬೇಡ  ಎಂದು ಹೇಳಿದ್ದಕ್ಕೆ, ಆರೋಪಿ ಜಗಳ ಮಾಡಿ, ಕೆಟ್ಟಮಾತುಗಳಿಂದ ಬೈದು, ಕೈಗಳಿಂದ ಮತ್ತು  ದೊಣ್ಣೆಯಿಂದ ದೂರುದಾರರಿಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.

ಅಕ್ರಮ ಮದ್ಯ ಮಾರಾಟ : ಇಲ್ಲ

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  ಇಲ್ಲ

ಅಸ್ವಾಭಾವಿಕ ಮರಣ :  ಇಲ್ಲ

– ಇತರೆ : ಇಲ್ಲ

Leave a Reply

Your email address will not be published. Required fields are marked *