ದಿನದ ಅಪರಾಧಗಳ ಪಕ್ಷಿನೋಟ 17ನೇ ಮಾರ್ಚ್ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 16.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಅಬಕಾರಿ ಕಾಯ್ದೆ : 02

ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ 02 ಪ್ರಕರಣಗಳು ದಾಖಲಾಗಿರುತ್ತದೆ.

ದಿನಾಂಕ 16.03.2021 ರಂದು ಮದ್ಯಾಹ್ನ 2.00 ಗಂಟೆಯಲ್ಲಿ ಹೆನ್ರೀಸ್‍ ಡ್ರಾಮಾ ಹಾಲ್‍ ಬಳಿ ಸಾರ್ವಜನಿಕ ಸ್ಥಳದಲ್ಲಿ  ಗೋಪಿ @ ಗೋಪಿನಾಥ್‍, ಹೆನ್ರೀಸ್‍ ಲೈನ್, ಕೆ.ಜಿ.ಎಫ್ ರವರು  ಮದ್ಯಪಾನ ಮಾಡುತ್ತಿದ್ದವನನ್ನು ರಾಜೇಂದ್ರ ಆರ್, ಸಿ.ಹಚ್.ಸಿ  & ಸಿ.ಹಚ್.ಸಿ  ಪ್ರಸನ್ನನಾಯ್ಡು ರವರು ಹಿಡಿದು ಸ್ಥಳದಲ್ಲಿದ್ದ ORIGINAL CHOICE 90 ML 1 POCKET ಅರ್ದ ಖಾಲಿ, ORIGINAL CHOICE 90 ML 2 POCKET, 2 ನೀರಿನ ಪಾಕೆಟ್‍ಗಳು  ಮತ್ತು ಒಂದು ಪ್ಲಾಸ್ಟೀಕ್‍ ಲೋಟವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

ದಿನಾಂಕ:16.03.2021 ರಂದು ಸಂಜೆ 5.00 ಗಂಟೆಯಲ್ಲಿ ಹೆನ್ರೀಸ್ 3 ನೇ ಮ್ಯಾಷನರಿ ಬ್ಲಾಕಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ರವಿಕುಮಾರ್ ಬಿನ್ ಪುರುಷೋತ್ತಮ್,  ಹೆನ್ರೀಸ್‍ ಲೈನ್, ಕೆ.ಜಿ.ಎಫ್ ಮದ್ಯಪಾನ ಸೇವನೆ ಮಾಡುತ್ತಿದ್ದವನನ್ನು ಪಿ.ಎಸ್.ಐ ಶ್ರೀ. ಸೋಮಶೇಖರ್‌ ಮತ್ತು ಸಿಬ್ಬಂದಿ ಹಿಡಿದು, ಸ್ಥಳದಲ್ಲಿದ್ದ HIGHWARDS WHISKEY 90 ML 1 POCKET ಅರ್ದ ಖಾಲಿ, HIGHWARDS WHISKEY 90 ML 1 POCKET ಖಾಲಿಯಾಗಿದ್ದು, 2 ನೀರಿನ ಪಾಕೆಟ್‍ ಗಳನ್ನು  ಮತ್ತು ಒಂದು ಪ್ಲಾಸ್ಟೀಕ್ ಲೋಟವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

– ಜೂಜಾಟ ಕಾಯ್ದೆ : 02

ಸಿ.ಇ.ಎನ್. ಅಪರಾಧ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ 02 ಪ್ರಕರಣಗಳು ದಾಖಲಾಗಿರುತ್ತದೆ.

ದಿನಾಂಕ.16.03.2021 ರಂದು ಬೆಳಿಗ್ಗೆ 10.00 ಗಂಟೆಯಲ್ಲಿ ಸಿ ರಹೀಂ ಕಾಂಪೌಂಡ್ ಮಜೀದ್ ರಸ್ತೆಯಲ್ಲಿರುವ ಸೈಯದ್ ಮುನಾಫ್ ರವರ ಮನೆಗೆ ಹೊಂದಿಕೊಂಡಿರುವ ಶಾಫ್ ಮುಂಬಾಗದ ಸಾರ್ವಜನಿಕ ಸ್ಥಳದಲ್ಲಿ ಬಂಗಾರಪೇಟೆ ಸಿ ರಹೀಂ ಕಾಂಪೌಂಡ್ ವಾಸಿಯಾದ ಇಮ್ರಾನ್ ಪಾಷ ಎಂಬುವರು ಮಟ್ಕ ಜೂಜಾಟವನ್ನು ನಡೆಸುತ್ತಿದ್ದವನ ಮೇಲೆ ಪಿ.ಐ. ಶ್ರೀ. ಸೂರ್ಯಪ್ರಕಾಶ್ ಮತ್ತು ಸಿಬ್ಬಂದಿ ದಾಳಿ ಮಾಡಿ  1,600/- ರೂ ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ದಿನಾಂಕ.16.03.2021 ರಂದು ಬೆಳಿಗ್ಗೆ 9.45 ಗಂಟೆಯಲ್ಲಿ ಎಂ.ಎಂ (ಹಳೇ ಮಟನ್ ಮಾರ್ಕೆಟ್) ರಸ್ತೆಯಲ್ಲಿರುವ ವಿನೋದ್ ಕುಮಾರ್  ರವರ ಬಿಲ್ಡಿಂಗ್ ಗೆ ಹೊಂದಿಕೊಂಡಂತೆ ಇರುವ ಟೈಲರ್ ಅಂಗಡಿ ಮುಂಬಾಗದ ಸಾರ್ವಜನಿಕ ಸ್ಥಳದಲ್ಲಿ ಬಂಗಾರಪೇಟೆ ಕುಪ್ಪಸ್ವಾಮಿ ಲೇಔಟ್ ವಾಸಿಯಾದ ಶ್ರೀನಿವಾಸ್ ಎಂಬುವರು ಮಟ್ಕ ಜೂಜಾಟವನ್ನು ನಡೆಸುತ್ತಿದ್ದವನ ಮೇಲೆ ಪಿ.ಐ. ಶ್ರೀ. ಸೂರ್ಯಪ್ರಕಾಶ್ ಮತ್ತು ಸಿಬ್ಬಂದಿ ದಾಳಿ ಮಾಡಿ  950/- ರೂ ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ಇತರೆ01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಎಸ್.ಸಿ./ಎಸ್.ಟಿ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟೇಶಪ್ಪ ಬಿನ್ ವೆಂಕಟಪ್ಪ, ಕಾವರನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ಮನೆಯಲ್ಲಿ ಐದು ಕೋಳಿಗಳನ್ನು ಮೇಯಿಸುತ್ತಿದ್ದು, ಆ ಪೈಕಿ ಎರಡು ಕೋಳಿಗಳು ದಿನಾಂಕ 15.03.2021 ರಂದು ಸಂಜೆ ಮನೆಗೆ ಬಂದಿದ್ದು, ಮೂರು ಕೋಳಿಗಳು ಮನೆಗೆ ಬಂದಿರುವುದಿಲ್ಲ. ಅದಕ್ಕೆ ದೂರುದಾರರು ದಿನಾಂಕ 15.03.2021 ರಂದು ಸಂಜೆ 5.30 ಗಂಟೆಯಲ್ಲಿ ಮನೆಯ ಮುಂದೆ ಕುಳಿತುಕೊಂಡು ಕೋಳಿಗಳು ಮನೆಗೆ ಬಂದಿಲ್ಲ, ಎಂದು ಬೈಯ್ಯುತ್ತಿದ್ದು, ರಾತ್ರಿ 8.00 ಗಂಟೆಯಲ್ಲಿ ನಾಗೇಂದ್ರಬಾಬು, ಕಾವರನಹಳ್ಳಿ ಗ್ರಾಮದ ವಾಸಿ ರವರು ದೂರುದರರ ಮನೆಯ ಬಳಿ ಬಂದು, ಕೆಟ್ಟಮಾತುಗಳಿಂದ ಬೈದು, ಜಾತಿ ನಿಂದನೆ ಮಾಡಿ, ದೊಣ್ಣೆಯಿಂದ ಹೊಡೆದು ಗಾಯಪಡಿಸಿರುತ್ತಾರೆ.

ಅಸ್ವಾಭಾವಿಕ ಮರಣ ಪ್ರಕರಣ :  01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದರರಾದ ಶ್ರೀ. ರಾಮಮೂರ್ತಿ ಬಿನ್ ಶ್ರೀನಿವಾಸ್, ಕಸ್ತೂರಿನಗರ, ವಿ.ಕೋಟ, ಆಂದ್ರಪ್ರದೇಶ ರವರ ಅಣ್ಣನಾದ ವೆಂಕಟೇಶ್, 40  ವರ್ಷ, ಬೀರನಕುಪ್ಪ ಗ್ರಾಮ ರವರ ಇಬ್ಬರು ಹೆಂಡತಿಯರಿಗೂ ಮಕ್ಕಳಾಗದೇ ಇದ್ದ ವಿಚಾರದಲ್ಲಿ ಮನನೊಂದು ದಿನಾಂಕ:-15.03.2021 ರಂದು ಸಂಜೆ 6:00 ಗಂಟೆಯಲ್ಲಿ ಪೊಟ್ಟೆಪಲ್ಲಿ ಬಳಿ  ಇರುವ ಆಂಜನೇಯ ದೇವಸ್ಥಾನದ ಬಳಿ ಇರುವ ತಂಗುದಾಣದ ಹಿಂಭಾಗದಲ್ಲಿ ವೆಂಕಟೇಶ್‌ ರವರು ಯಾವುದೋ ವಿಷ ಸೇವನೆ ಮಾಡಿದ್ದು, ಚಿಕಿತ್ಸೆಗೆ ಕೋಲಾರದ ಎಸ್.ಎನ್.ಆರ್ ಆಸ್ವತ್ರೆಯಲ್ಲಿ ದಾಖಲಿಸಿದ್ದು,  ದಿನಾಂಕ:-16.03.2021 ರಂದು ಬೆಳಿಗ್ಗೆ 5:00 ಗಂಟೆಯಲ್ಲಿ ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರದ ಆರ್.ಎಲ್ ಜಾಲಪ್ಪ ಆಸ್ವತ್ರೆಗೆ ಸಾಗಿಸುವಾಗ  ವೆಂಕಟೇಶ್ ರವರು ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *