ದಿನದ ಅಪರಾಧಗಳ ಪಕ್ಷಿನೋಟ 17ನೇ ಫೆಬ್ರವರಿ 2021

ಕೆ.ಜಿ.ಎಫ್. ಪೊಲೀಸ್ಜಿಲ್ಲೆಯ ವಿವಿಧ ಪೊಲೀಸ್ಠಾಣೆಗಳಲ್ಲಿ ದಿನಾಂಕ 16.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಸೈಬರ್‍ ಆಪರಾಧಗಳು : 02

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಸೈಬರ್‍ ಕಾಯ್ದೆ ಅಡಿಯಲ್ಲಿ ೨ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿ ನರೇಂದ್ರ ೬ನೇ ಕ್ರಾಸ್, ರಾಬರ್ಟ್‌ಸನ್‌ಪೇಟೆ ರವರು ಆನ್ ಲೈನ್ ನಲ್ಲಿ TEN EXCH.COM ಎಂಬ ಗೇಮಿಂಗ್ ವೆಬ್ ಸೈಟ್ ಪತ್ತೆಯಾಗಿದ್ದು, ಅದರಲ್ಲಿ ಹುಡುಕಿದಾಗ ಮೊಬೈಲ್ ನಂ.9986933176, 889264189 ಮತ್ತು 8867475176 ಪತ್ತೆಯಾಗಿದ್ದು, ಸದರಿ ಮೊಬೈಲ್ ಫೋನುಗಳಿಗೆ ಸಂಪರ್ಕಿಸಿದಾಗ ಆರೋಪಿಯು ತಾನು ಇಂತಿಯಾಜ್ ಪಾಷಾ ಎಂದು ಪರಿಚಯ ಮಾಡಿಕೊಂಡು, ತಾನು TEN EXCH.COM ಮಾಲೀಕರೆಂದು ಪರಿಚಯ ಮಾಡಿಕೊಂಡು, ತನ್ನ ವೆಬ್ ಸೈಟ್ ನಲ್ಲಿ ಹಣವನ್ನು ಹಾಕಿದರೆ ಹೆಚ್ಚಿನ ಹಣವನ್ನು ಗಳಿಸಬಹುದೆಂದು ನಂಬಿಸಿ ಪಿರ್ಯಾದಿದಾರರ ಬ್ಯಾಂಕ್ ಖಾತೆಗಳಿಂದ ಆರೋಪಿಯು ನೀಡಿರುವ ಬ್ಯಾಂಕ್ ಖಾತೆಗಳಿಗೆ ದಿನಾಂಕ.31.03.2020 ರಿಂದ 2020 ನೇ ಸಾಲಿನ ನವೆಂಬರ್ ಮಾಹೆಯ ವರೆಗೆ ವರ್ಗಾವಣೆ/ಜಮೆ ಮಾಡಿಸಿಕೊಂಡು ಪಿರ್ಯಾದಿದಾರರಿಗೆ ನೀಡಿದ್ದ USER NAME & ಪಾಸ್ ವರ್ಡ್ ಬ್ಲಾಕ್ ಮಾಡಿ ಪಿರ್ಯಾದಿದಾರರಿಗೆ ಹಣವನ್ನು ವಾಪಸ್ಸು ಮಾಡದೇ ಮೋಸ ಮಾಡಿರುತ್ತಾರೆ.

ಈ ಕೇಸಿನ ಪಿರ್ಯಾದಿ ಕಿರಣ್, ೨ನೇ ಟೈಪ್, ಬೆಮಲ್ ನಗರ, ಕೆ.ಜಿ.ಎಫ್ ರವರಿಗೆ ಫೇಸ್ ಬುಕ್ ನಲ್ಲಿ ಮೈಸೂರಿನ ಮಂಜುನಾಥಪುರಂ ವಾಸಿಯಾದ ರೂಪಾಬಾಯಿ ಎಂಬುವರು ಪರಿಚಯವಾಗಿದ್ದು, ರೂಪಾಬಾಯಿ ರವರು ಫೇಸ್ ಬುಕ್ ನಲ್ಲಿ ಮತ್ತು ವಾಟ್ಸ ಆಪ್ ನಲ್ಲಿ ಚಾಟ್ ಮಾಡಿಕೊಂಡಿದ್ದು, ಆಸಮಯದಲ್ಲಿ ಆರೋಪಿ ರೂಪಾಬಾಯಿ ರವರು ನಗ್ನವಾಗಿ ಪಿರ್ಯಾದಿಯೊಂದಿಗೆ ಚಾಟ್ ಮಾಡಿ ಪಿರ್ಯಾದಿದಾರರಿಗೆ ತನಗೆ ಹಣದ ಅವಶ್ಯಕತೆ ಇದೆ ಎಂದು ಹೇಳಿ ಪಿರ್ಯಾದಿದಾರರನ್ನು ನಂಬಿಸಿ, ಪಿರ್ಯಾದಿದಾರರ ಎಸ್.ಬಿ.ಐ ಬ್ಯಾಂಕ್ ಖಾತೆಯಿಂದ ರೂಪಾಬಾಯಿ ರವರ ಸಿಂಡಿಕೇಟ್ ಬ್ಯಾಂಕ್ಗೆ 17,21,137/- ರೂಪಾಯಿಗಳು, ಗಣೇಷ್ ರಾವ್ ರವರ ಬ್ಯಾಂಕ್ ಖಾತೆಗೆ 1,43,000/- ರೂಪಾಯಿಗಳು ಹಾಗೂ ಶೋಭ ಎಂಬುವರ ಬ್ಯಾಂಕ್ ಖಾತೆ ನಂ.17012600002419 ಗೆ 2,47,000/- ರೂಪಾಯಿಗಳು ಸೇರಿ  ಒಟ್ಟು 21,12,337/- ರೂಪಾಯಿಗಳು, ದಿನಾಂಕ: 26.03.2019 ರಿಂದ 15.06.2020 ರ ವರೆಗೆ  ವರ್ಗಾವಣೆ ಮಾಡಿಸಿಕೊಂಡಿದ್ದು, ಪಿರ್ಯಾದಿದಾರರು ನೀಡಿರುವ ಹಣವನ್ನು ವಾಪಸ್ಸು ನೀಡಲು ಕೇಳಿದರೆ, ಪಿರ್ಯಾದಿದಾರರೊಂದಿಗೆ ಚಾಟ್ ಮಾಡಿರುವ ಅಶ್ಲೀಲ ಸಂದೇಶಗಳನ್ನು ಮತ್ತು ವಿಡಿಯೋ ಹಾಗೂ ಭಾವಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿ ಪಿರ್ಯಾದಿದಾರರಿಂದ ಪಡೆದುಕೊಂಡಿರುವ ಹಣವನ್ನು ವಾಪಸ್ಸು ನೀಡದೇ ಮೋಸ ಮಾಡಿರುತ್ತಾರೆ.

Leave a Reply

Your email address will not be published. Required fields are marked *