ದಿನದ ಅಪರಾಧಗಳ ಪಕ್ಷಿನೋಟ 17ನೇ ಸೆಪ್ಟೆಂಬರ್‌ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 16.09.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ಜೂಜಾಟ ಕಾಯ್ದೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಜೂಜಾಟ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:-16.09.2020 ರಂದು ಮದ್ಯಾಹ್ನ 12.00 ಗಂಟೆಯಲ್ಲಿ ಅನಂತರಾಮಾಪುರದ ಕೆರೆಯ ಅಂಗಳದಲ್ಲಿ ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದ ಕೆ.ಜಿ.ಎಫ್ ವಾಸಿಗಳಾದ ಶಿವಾ, ಶತಾಕತುಲ್ಲಾ, ಅನಂತರಾಮಾಪುರ ಗ್ರಾಮದ ವಾಸಿಗಳಾದ ಗಣೇಶ್, ರಾಜು ಮತ್ತು ಜಂಗಮಾನಹಳ್ಳಿ ಗ್ರಾಮದ ವಾಸಿ ಆನಂದ ರವರನ್ನು ಪಿ.ಎಸ್.ಐ ಶ್ರೀ. ನವೀನ್ ಮತ್ತು ಸಿಬ್ಬಂದಿಯವರು ಹಿಡಿದುಕೊಂಡು ಸ್ಥಳದಲ್ಲಿದ್ದ ಒಂದು ಹಳೇ ನ್ಯೂಸ್ ಪೇಪರ್ ಮತ್ತುದ 52 ಇಸ್ಪೇಟ್ ಎಲೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

 

ಇತರೆ01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡುತ್ತಿದ್ದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ:16.09.2020 ರಂದು ಸಂಜೆ 5-00 ಗಂಟೆಯಲ್ಲಿ ಕಮ್ಮಸಂದ್ರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಬಳಿ ಸಾರ್ವಜನಿಕರು ಸಂಚರಿಸುವ ರಸ್ತೆ ಬದಿಯಲ್ಲಿ ನಾಗಶೆಟ್ಟಿಹಳ್ಳಿ ಗ್ರಾಮದ ವಾಸಿಗಳಾದ ಗಿರೀಶ್ ಮತ್ತು ಕಿರಣ್ ರವರು ಮದ್ಯಸೇವನೆ ಮಾಡುತ್ತಿದ್ದು, ಸದರಿಯವರನ್ನು ಮತ್ತು ಸ್ಥಳದಲ್ಲಿದ್ದ 2 ಖಾಲಿ KINGFISHER ಬೀಯರ್ ಬಾಟಲುಗಳನ್ನು ಪಿ.ಎಸ್.ಐ ಶ್ರೀ. ನವೀನ್ ಮತ್ತು ಸಿಬ್ಬಂದಿಯವರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *