ದಿನದ ಅಪರಾಧಗಳ ಪಕ್ಷಿನೋಟ 17ನೇ ಜೂನ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 16.06.2020 ರಂದು   ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ರಸ್ತೆಅಪಘಾತಗಳು : 01

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಸುಜಾತ ಕೊಂ ಶ್ರೀನಿವಾಸಪ್ಪ, ಗರುಡಕೆಂಪನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಗಂಡನಾದ ಶ್ರೀನಿವಾಸಪ್ಪ, 36 ವರ್ಷ ಮತ್ತು ಮಗ ಸತೀಶ್, 8 ವರ್ಷ ರವರು ದಿನಾಂಕ 14.06.2020 ರಂದು ಮಧ್ಯಾಹ್ನ 3.00 ಗಂಟೆಗೆ ಕೆ.ಎ-08-ಎಸ್-2440 ಪ್ಯಾಷನ್ ಪ್ರೋ  ದ್ವಿ ಚಕ್ರ ವಾಹನದಲ್ಲಿ ಗರುಡಕೆಂಪನಹಳ್ಳಿಯಿಂದ ಬಲಮಂದೆ ಹೋಗುವ ತಾರು ರಸ್ತೆಯಲ್ಲಿ ಹೋಗುತ್ತಿದ್ದಾಗ, ಎದುರುಗಡೆಯಿಂದ ಎ.ಪಿ-39-ಎ.ಜೆ-6165 ಟಿ.ವಿ.ಎಸ್ ಎಕ್ಸ್.ಎಲ್-100 ರ ಸವಾರನಾದ ಮುನಿರಾಜು ಬಿನ್ ತಿಮ್ಮರಾಯಪ್ಪ  ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀನಿವಾಸಪ್ಪ ರವರ ದ್ವಿ ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪ್ರಯುಕ್ತ ಶ್ರೀನಿವಾಸಪ್ಪ ರವರಿಗೆ ತೀವ್ರ ಸ್ವರೂಪದ  ರಕ್ತಗಾಯವಾಗಿರುತ್ತೆ.

 

– ಹಲ್ಲೆ: 02

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ 02 ಹಲ್ಲೆ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಅಮರೇಶ್‌ ಬಿನ್ ಸೀನಪ್ಪ, ಸಕರಸನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು  ಮತ್ತು ಅವರ ತಮ್ಮಂದಿರಾದ ಶ್ರೀನಾಥ ಮತ್ತು ಮುರುಗೇಶ್ ರವರು ದಿನಾಂಕ 16.06.2020 ರಂದು ಬೆಳಿಗ್ಗೆ  8.00 ಗಂಟೆಯಲ್ಲಿ ಅವರ ಜಮೀನಿನ ಬಳಿ ಹೋದಾಗ, ಆರೋಪಿಗಳಾದ ಪ್ರಕಾಶ್, ಬಸಪ್ಪ, ಮುನಿಸ್ವಾಮಪ್ಪ ರವರು ಜೆ.ಸಿ.ಬಿ ಯಿಂದ ದೂರುದಾರರ ಜಮೀನನ್ನು ಸದರ ಮಾಡುತ್ತಿದ್ದು ಕೇಳಲಾಗಿ, ಕಲ್ಲಿನಿಂದ ದೂರುದಾರರಿಗೆ ಮತ್ತು ಶ್ರೀನಾಥ ಹಾಗೂ ಮುರುಗೇಶ್ ರವರಿಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

ದೂರುದಾರರಾದ ಶ್ರೀ. ಪ್ರಕಶ್‌ ಬಿನ್ ಮುನಿಸ್ವಾಮಪ್ಪ, ಸಕರನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಜಮೀನಿನಲ್ಲಿ ದಿನಾಂಕ 16.06.2020 ರಂದು ಬೆಳಿಗ್ಗೆ 8.00 ಗಂಟೆಯಲ್ಲಿ ಹಸುಗಳ ಶೆಡ್ ನಿರ್ಮಿಸುತ್ತಿದ್ದಾಗ, ಆರೋಪಿ ಅಮರೇಶ್ ರವರು ಟ್ರಾಕ್ಟರನ್ನು ತಂದು ಸದರಿ ಜಾಗದಲ್ಲಿ ಸದರ ಮಾಡಲು ಬಂದಿದ್ದು,  ದೂರುದಾರರ ತಂದೆ ಮುನಿಸ್ವಾಮ್ಪ ರವರು ಅಮರೇಶ್ ರವರಿಗೆ ಕೇಳಲಾಗಿ, ಅಮರೇಶ್ ರವರು  ಟ್ರಾಕ್ಟರನ್ನು ಮುನಿಸ್ವಾಮಪ್ಪ ರವರ ಮೇಲೆ ಹತ್ತಿಸಿದ್ದು, ದೂರುದಾರರು ಕೇಳಲಾಗಿ ಆರೋಪಿಗಳಾದ ಅಮರೇಶ್, ಸೀನಪ್ಪ, ಶ್ರೀನಾಥ, ಮುರುಗೇಶ್ ಮತ್ತು ಮಣಿ @ ಮುನಿರತ್ನ ರವರು ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

Leave a Reply

Your email address will not be published. Required fields are marked *