ದಿನದ ಅಪರಾಧಗಳ ಪಕ್ಷಿನೋಟ 18ನೇ ಏಪ್ರಿಲ್‌ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 17.04.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 17.04.2020 ರಂದು ಬೆಳಿಗ್ಗೆ 6.00 ಗಂಟೆ ಸಮಯದಲ್ಲಿ ಈ ಕೇಸಿನ ಪಿರ್ಯಾದಿದಾರರು ಶ್ರೀ. ವೆಂಕಟಾಚಲಪತಿ, ಪೊಲೀಸ್ ಕಾನ್ಸ್‌ಟೇಬಲ್, ಮಾರಿಕುಪ್ಪಂ ಪೊಲೀಸ್ ಠಾಣೆ ಯವರು ಅಲ್ಲಿಕಡೈ ಮುಖ್ಯ ರಸ್ತೆಯಲ್ಲಿ ಗಸ್ತಿನಲ್ಲಿದ್ದಾಗ ೩ ಜನ ಆರೋಪಿಗಳಾದ ವೇಲು, ಮದನ್, ಖಾದರ್‍, ಮಲ್ಲನೂರು ಗ್ರಾಮ, ಕುಪ್ಪಂ, ಆಂದ್ರಪ್ರದೇಶ ರವರುಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಆರೋಪಿಗಳು ನಡೆದುಕೊಂಡು ಬರುತ್ತಿದ್ದವರನ್ನು ಈ ಕಡೆ ಬರಲು ಕಾರಣವನ್ನು ಕೇಳಲಾಗಿ ಸಮಂಜಸವಾದ ಉತ್ತರ ನೀಡದ ಪ್ರಯುಕ್ತ ಇವರುಗಳು ಕರ್ನಾಟಕ ರಾಜ್ಯ ಸರ್ಕಾರ ಮತ್ತು ಕೋಲಾರ ಜಿಲ್ಲಾಧಿಕಾರಿಗಳ ಕೋವಿಡ್-19 ರ ಸಂಬಂಧ ಪ್ರಾಣಕ್ಕೆ ಅಪಾಯಕಾರಿ ರೋಗ ಸೋಂಕನ್ನು ಒಬ್ಬರಿಂದ ಮತ್ತೂಬ್ಬರಿಗೆ ಹರಡುವ ಸಂಭವವಿದ್ದರು ನಿರ್ಲಕ್ಷ್ಯ ಮಾಡಿ ರೋಗ ನಿರೋಧಕ ನಿರ್ಬಂಧನದ ನಿಯಮವನ್ನು ಉಲ್ಲಂಘನೆ ಮಾಡಿ ನಿಷೇಧಾಜ್ಞೆ ಜಾರಿ ಇದ್ದರೂ ಸಹಾ ಸದರಿ ಆಸಾಮಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ನಿಷೇದಾಜ್ಞೆಯ ಆದೇಶವನ್ನು ಉಲ್ಲಂಘನೆ ಮಾಡಿರುತ್ತಾರೆಂದು ದೂರು.

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಲಾಕ್‌ಡೌನ್‌ ಉಲ್ಲಂಘನೆ ಮಾಡಿರುವವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 17.04.2020 ರಂದು ಶ್ರೀ. ವೆಂಕಟರಾಮಪ್ಪ, ಸಿಪಿಐ, ಚಾಂಪಿಯನ್ ರೀಫ್ಸ್ ವೃತ್ತ ರವರು ರಾತ್ರಿ ಗಸ್ತಿನಲ್ಲಿದ್ದಾಗ, ರಾತ್ರಿ 4.00 ಗಂಟೆಯಲ್ಲಿ ಕೆಂಪಾಪುರ ಗ್ರಾಮದ ಕಚ್ಚಾ ರಸ್ತೆಯಲ್ಲಿ AP03-X-4905 ಟಾಟಾ ಏಸ್ ವಾಹನಲ್ಲಿ  1. ಕೆ.ವೇಲು ಬಿನ್ ಕ್ರಿಷ್ಣನ್, 2. ಮಧನ್ ಬಿನ್ ಕುಪ್ಪನ್, 3. ಖಾದರ್ ಬಿನ್ ಅಬ್ದುಲ್, ಎಲ್ಲರೂ ವಾಸ. ರೈಲ್ವೇ ಸ್ಟೇಷನ್‌ ಹತ್ತಿರ, ಕುಪ್ಪಂ, ಆಂದ್ರಪ್ರದೇಶ ರವರು ಯಾವುದೇ ಪರವಾನಗಿ ಇಲ್ಲದೇ 150 ಬೀಡಿ ಬಂಡಲ್‌‌ ಗಳನ್ನು ಅಂತರ್ ರಾಜ್ಯ ವಾಹನ  ಸಂಚಾರ ನಿರ್ಬಂದನ ಆದೇಶವನ್ನು ಉಲ್ಲಂಘನೆ ಮಾಡಿ ಕೆ.ಜಿ.ಎಫ್ ಗೆ ಸರಬರಾಜು ಮಾಡುತ್ತಿದ್ದರಿಂದ ಮೂರು ಜನ ಆರೋಪಿಗಳು, ಟಾಟಾ ಏಸ್ ವಾಹನವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಲಾಕ್‌ಡೌನ್‌ ಉಲ್ಲಂಘನೆ ಮಾಡಿದವರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 16.04.2020 ರಂದು ಸಂಜೆ 4.30 ಗಂಟೆಯಲ್ಲಿ ದೂರುದಾರರಾದ ಶ್ರೀ. ನವೀನ್‌, ಪಿ.ಎಸ್.ಐ, ಬೇತಮಂಗಲ ಪೊಲೀಸ್ ಠಾಣೆ ರವರು ಗಸ್ತಿನಲ್ಲಿದ್ದಾಗ,  ಬಡಮಾಕನಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ  ಕೃಷ್ಣಪ್ಪ ಬಿನ್ ಬೀರಪ್ಪ ಎಂಬುವರು  ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಶಿವ ಹೋಟೆಲ್ ಮುಂದೆ ಒಂದು ಕಡಪ ಕಲ್ಲಿನ ಜಗುಲಿಯ ಮೇಲೆ ಟೀ ವ್ಯಾಪಾರ ಮಾಡುತ್ತಿದ್ದು, ಆತನನ್ನು ಮತ್ತು ಟೀ ಪ್ಲಾಸ್ಕ್, 35 ಪೇಪರ್ ಗ್ಲಾಸ್ ಗಳನ್ನು ವಶಪಡಿಸಿಕೊಂಡು  ಪ್ರಕರಣ ದಾಖಲಿಸಿರುತ್ತಾರೆ.

– ಅಕ್ರಮ ಮದ್ಯ ಮಾರಾಟ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 17.04.2020 ರಂದು ಮಧ್ಯಾಹ್ನ 2.00 ಗಂಟೆಗೆ ಆರೋಪಿಗಳಾದ 1.ಸೋಮೋಜಿರಾವ್ ಬಿನ್ ಲೇಟ್ ಲಕ್ಷ್ಮೋಜಿರಾವ್, 2 ಲಕ್ಷ್ಮೋಜಿರಾವ್ ಬಿನ್ ಸೋಮೋಜಿರಾವ್, ವಾಸ ಕದರಿನತ್ತ ಗ್ರಾಮ ರವರು ಅವರ ಜಮೀನಿನ ಬಳಿ ಇರುವ ಹಸುಗಳ ಶೆಡ್ ಹಿಂಭಾಗ  ಕೆಂಪು ಬಕೇಟ್ ನಲ್ಲಿ ಬೆಲ್ಲದ ಕೊಳೆ ಸುಮಾರು 30 ಲೀಟರ್, ಬಿಳಿ ಚಕ್ಕೆ, ಸುಮಾರು 2 ಕೆ.ಜಿ.,  ಕರಿಚಕ್ಕೆಯ ಚೂರುಗಳು ಸುಮಾರು ¼  ಕೆ.ಜಿ, ಸುಮಾರು 20 ಲೀಟರ್ ಸಾಮಾರ್ಥ್ಯದ ಒಂದು ಮಡಿಕೆ, ಸುಮಾರು 20 ಲೀಟರ್ ಸಾಮಾರ್ಥ್ಯದ ಒಂದು ಕ್ಯಾನನ್ನು ಬಳಸಿಕೊಂಡು ಕಳ್ಳಭಟ್ಟಿ ಸಾರಾಯಿ ತಯಾರು ಮಾಡಲು ಸಿದ್ದಪಡಿಸಿಕೊಂಡಿದ್ದು, ಶ್ರೀ. ದಯಾನಂದ್‌, ಪಿ.ಎಸ್.ಐ, ಕಾಮಸಮುದ್ರಂ ಪೊಲೀಸ್ ಠಾಣೆ ರವರು ಸಿಬ್ಬಂದಿಯೊಂದಿಗೆ ದಾಳಿ ಮಾಡಿ, ಆರೋಪಿ ಸೋಮೋಜಿರಾವ್‌ ಮತ್ತು ಮಾಲನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

Leave a Reply

Your email address will not be published. Required fields are marked *