ದಿನದ ಅಪರಾಧಗಳ ಪಕ್ಷಿನೋಟ 17ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 16.03.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ಕನ್ನಕಳುವು : 01

ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವುಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 16.03.2020 ರಂದು ಬೆಳಿಗ್ಗೆ ಸುಮಾರು 10.45 ಗಂಟೆಯ ಸಮಯದಲ್ಲಿ ಈ ಕೇಸಿನ ಪಿರ್ಯಾದಿದಾರರು ರತ್ನಮ್ಮ ಕೋಂ ಗೋಪಾಲ, ದಾಸೇಗೌಡನೂರು, ಕಾಮಸಮುದ್ರ ರವರು ತಮ್ಮ ಮನೆಗೆ ಬೀಗ ಹಾಕದೇ ಕುರಿಗಳನ್ನು ಮೇಯಿಸಲು ಕೆರೆಯ ಬಳಿ ಹೋಗಿ ಬೆಳಿಗ್ಗೆ 11.45 ಗಂಟೆಗೆ ಮನೆನೆ ವಾಪಸ್ ಬಂದು ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಬಿರುವಿನ ಲಾಕರನ್ನು ಮಚ್ಚಿನಿಂದ ಹೊಡೆದು ಬಿರುವುದಿನಲ್ಲಿದ್ದ 1).ಬೆಳ್ಳಿಯ ಕಾಲುಚೈನು 2 ಜೊತೆ ಸುಮಾರು 297 ಗ್ರಾಂ, ಬೆಲೆ ಸುಮಾರು 11.900/- ರೂಗಳು, 2). 8 ಗ್ರಾಂ ಚಿನ್ನದ ಒಲೆ ಬೆಲೆ ಸುಮಾರು 24.000/- ರೂಗಳು, 3).4 ಗ್ರಾಂ ಚಿನ್ನದ ಮಾಟಿ, ಬೆಲೆ ಸುಮಾರು 12.000/- ರೂ, 4).10 ಗ್ರಾಂ ಚಿನ್ನದ ಹ್ಯಾಂಗಲ್ಸ್ ಬೆಲೆ ಸುಮಾರು 30.000/- ರೂಗಳು ಹಾಗೂ ಮನೆಯ ಮತ್ತೊಂದು ಕೊಠಡಿಯಲ್ಲಿದ್ದ ಕಬ್ಬಿಣದ ಪೆಟ್ಟಿಗೆಯಲ್ಲಿದ್ದ ನಗದು ಹಣ 5500/- ರೂಗಳು ಒಟ್ಟು 83.400/- ರೂಗಳಷ್ಟು ಬೆಲೆ ಬಾಳುವಂತಹ ಆಭರಣಗಳನ್ನು & ನಗದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

 ರಸ್ತೆ ಅಪಘಾತಗಳು :03

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ: 15-03-2020 ರಂದು ರಾತ್ರಿ ಸುಮಾರು 7-30 ಗಂಟೆಗೆ ಈ ಕೇಸಿನ ದೂರುದಾರರಾದ ಶ್ರೀಮತಿ ಜಯಮ್ಮ ಕೋಂ ಶ್ರೀನಿವಾಸರೆಡ್ಡಿ ವಾಸ: ದೊಡ್ಡೂರು ಗ್ರಾಮ ರವರು ಬ್ಯಾಟರಾಯನಹಳ್ಳಿ- ದೊಡ್ಡೂರು ಗ್ರಾಮದ ಥಾರು ರಸ್ತೆಯ ಎಡಬದಿಯಲ್ಲಿ ಆಟೋದಿಂದ ಇಳಿದುಕೊಂಡು ಬಲಬದಿಯಲ್ಲಿರುವ ಅವರ ಮನೆಗೆ ಹೋಗಲು ರಸ್ತೆ ದಾಟುತ್ತಿದ್ದಾಗ, ಬ್ಯಾಟರಾಯನಸ್ವಾಮಿ ಬೆಟ್ಟದ ಕಡೆಯಿಂದ ದೊಡ್ಡೂರು ಗ್ರಾಮದ ಕಡೆ ಹೋಗಲು ವಿನಯ್ ಬಿನ್ ನಾಗಭೂಷನ್ ವಾಸ: ದೊಡ್ಡೂರು ಗ್ರಾಮ ಎಂಬುವನು TVS APACHE RTR ದ್ವಿಚಕ್ರ ವಾಹನ ಸಂಖ್ಯೆ KA-01 EM 1567 ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರಿಗೆ ಡಿಕ್ಕಿ ಪಡಿಸಿದ ಪರಿಣಾಮ ದೂರುದಾರರು ರಸ್ತೆಯ ಮೇಲೆ ಬಿದ್ದಾಗ ಆಕೆಯ ಎಡಕಾಲಿನ ಮೊಣಕಾಲಿನ ಕೆಳಗೆ ರಕ್ತಗಾಯ, ಹಣೆಯ ಬಲಗಡೆ, ಬಲಕೆನ್ನೆಯ ಮೇಲೆ, ಬಲಕಾಲಿನ ಹೆಬ್ಬೆರಳು ಮತ್ತು ಪಕ್ಕದ ಬೆರಳುಗಳಿಗೆ ತರಚಿದ ಗಾಯಗಳು, ತಲೆಯ ಬಲಭಾಗ ಮತ್ತು ಬಲಭುಜದ ಬಳಿ ಮೂಕಗಾಯಗಳಾಗಿರುತ್ತೆ. ಅಪಘಾತಪಡಿಸಿದ ದ್ವಿಚಕ್ರ ವಾಹನ ಸವಾರ ವಾಹನವನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿರುತ್ತಾನೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ 02 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿರುತ್ತದೆ.

ದೂರುದಾರರಾದ ಶ್ರೀ. ಸೋಮಶೇಖರ್‌ ಬಿನ್ ಸೀತಪ್ಪ, ರಾಮಕೃಷ್ಣಹೆಗ್ಡೆ ಕಾಲೊನಿ, ಬಂಗಾರಪೇಟೆ ರವರು ದಿನಾಂಕ: 15.03.2020 ರಂದು ಸಂಜೆ 4-00 ಗಂಟೆಗೆ  ತನ್ನ ಮಗ ಭರತ್ ಗೌಡ, 8 ವರ್ಷ  ರವರೊಂದಿಗೆ ದೊಡ್ರಹಳ್ಳಿಗೆ ಹೋಗಲು ದ್ವಿಚಕ್ರ ವಾಹನ Hero Honda Splender ಸಂಖ್ಯೆ ಕೆ.ಎ 07 ಆರ್ 180 ರಲ್ಲಿ ಕಾರಹಳ್ಳಿ ಮಾರ್ಗವಾಗಿ ಹೋಗುತ್ತಿರುವಾಗ, ಎದುರಿಗೆ ಕಾವರನಹಳ್ಳಿ ಕಡೆಯಿಂದ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ-07 ಇ.ಎ-7652 ನ್ನು ಅತಿವೇಗ ಮತ್ತು ಆಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರು ಚಲಾಯಿಸುತ್ತಿದ್ದ ವಾಹನಕ್ಕೆ ಮುಂಭಾಗ ಡಿಕ್ಕಿ ಹೊಡೆದ ಪ್ರಯುಕ್ತ, ದೂರುದಾರರಿಗೆ ಮತ್ತು ದೂರುದಾರರ ಮಗ ಭರತ್ ಗೌಡ ರವರಿಗೆ ಗಾಯಗಳಾಗಿರುತ್ತದೆ.

ದೂರುದಾರರಾದ ಶ್ರೀಮತಿ ಕಾಂತಮ್ಮ ಕೊಂ ನಾಗರಾಜ, ಮಂಚಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 15.03.2020 ರಂದು ಮದ್ಯಾಹ್ನ 3.10 ಗಂಟೆಯಲ್ಲಿ ಬಂಗಾರಪೇಟೆಯಿಂದ ಆಟೋರಿಕ್ಷಾ ಸಂಖ್ಯೆ ಕೆಎ-03-ಬಿ-7297 ರಲ್ಲಿ ರಾಮಾಪುರ ಗೇಟ್ ತಿರುವಿನ ಬಳಿ  ಹೋಗುತ್ತಿದ್ದಾಗ, ಟೇಕಲ್ ಕಡೆಯಿಂದ ಟಾಟಾಸುಮೋ ವಾಹನ ಸಂಖ್ಯೆ ಕೆಎ-05-ಡಿ-0926ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಆಟೋಗೆ ಡಿಕ್ಕಿಪಡಿಸಿದ ಪರಿಣಾಮ, ಆಟೋ ಚಾಲಕನಾದ ಶಬ್ಬೀರ್ ಪಾಷ ರವರಿಗೆ ಮತ್ತು ಆಟೋವಿನಲ್ಲಿ ಕುಳಿತಿದ್ದ ದೂರುದಾರರಿಗೆ ರಕ್ತಗಾಯಗಳಾಗಿರುತ್ತದೆ.

– ಇತರೆ : 01

ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ.16.03.2020 ರಂದು ಮದ್ಯಾಹ್ನ 1.00 ಗಂಟೆಯಲ್ಲಿ ಸುಬ್ರಮಣಿರೆಡ್ಡಿ ಬಿನ್ ನಾಗಿರೆಡ್ಡಿ ರವರು ನೀಲಗಿರಿಹಳ್ಳಿ ಗ್ರಾಮದಲ್ಲಿ ತನ್ನ ಅಂಗಡಿಯ ಮುಂಬಾಗದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಕಲ್ಪಿಸಿರುತ್ತಾರೆ ಆದ್ದರಿಂದ ಈತನ ವಿರುದ್ದ ಪ್ರಕರಣ ದಾಖಲಿಸಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಯಾಸ್ಮೀನ್‌ ಕೊಂ ಇರ್ಷಾದ್‌ ಬಾಷಾ, ಸೋಮೇಶ್ವರ ಬ್ಲಾಕ್‌, ಉರಿಗಾಂಪೇಟೆ, ಕೆ.ಜಿ.ಎಫ್ ರವರ ಗಂಡ ಇರ್ಷಾದ್‌ ಬಾಷಾ, 35 ವರ್ಷ ರವರು ದಿನಾಂಕ. 15.03.2020 ರಂದು ಬೆಳಿಗ್ಗೆ 7.00 ಗಂಟೆಗೆ ಅಂಗಡಿಗೆ ಹೋಗುವುದಾಗಿ ಹೇಳಿ ಹೋದವರು ಮನೆಗೆ ವಾಪಸ್ ಬಾರದೇ ಕಾಣೆಯಾಗಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶಾಮಾ ಬೇಗಂ, ಎನ್.ಟಿ ಬ್ಲಾಕ್, ಚಾಂಪಿಯನ್‌ರೀಫ್ಸ್‌, ಕೆ.ಜಿ.ಎಫ್ ರವರ ತಮ್ಮ ಥಾಮಸ್, 45 ವರ್ಷ ಎಂಬುವರು ಮೂಳೆ ಕ್ಯಾನ್ಸರ್ ಖಾಯಿಲೆ ಇದ್ದು,  ವಾಸಿಯಾಗುವುದಿಲ್ಲವೆಂದು ಮನಗಂಡು ಜೀವನದಲ್ಲಿ ಜಿಗುಪ್ಸೆಹೊಂದಿ ದಿನಾಂಕ:15.03.2020 ರಂದು ಸಂಜೆ 7.00 ಗಂಟೆಯಿಂದ ಈ ದಿನ ದಿನಾಂಕ:16.03.2020 ರಂದು ಬೆಳಿಗ್ಗೆ 7.00 ಗಂಟೆಯ ಮಧ್ಯೆ ಉರಿಗಾಂ ಎನ್.ಟಿ ಬ್ಲಾಕಿನ 2 ನೇ ಡಿವಿಷನ್ ನಲ್ಲಿರುವ ದೂರುದಾರರ ಮನೆಯ ಮುಂಭಾಗದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠ ಶಾಲೆ ಪಕ್ಕದಲ್ಲಿರುವ ಮರಕ್ಕೆ ಪಂಚೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ.

Leave a Reply

Your email address will not be published. Required fields are marked *