ದಿನದ ಅಪರಾಧಗಳ ಪಕ್ಷಿನೋಟ 17ನೇ ಫೆಬ್ರವರಿ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:16.02.2020 ರಂದು  ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಹಲ್ಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಆದಿಶೇಷನಾಯ್ಡು ಬಿನ್ ಲಕ್ಷ್ಮಯ್ಯನಾಯ್ಡು, ಕಣ್ಣರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರಿಗೂ ಮತ್ತು ಅವರ ಗ್ರಾಮದ ಮಂಜುನಾಥ ರವರಿಗೆ ಜಮೀನು ತಕರಾರಿದ್ದು, ಸದರಿ ಜಮೀನಿನಲ್ಲಿ ದಿನಾಂಕ:15.02.2020 ರಂದು ಸಂಜೆ 6-00 ಗಂಟೆಯಲ್ಲಿ ಮಂಜುನಾಥ ಮತ್ತು ಸೋಲಾರ್ ಕಂಪನಿಯಲ್ಲಿ ಸೂಪರ್ ವೈಸರ್ ಗಳಾದ ಗೋವಿಂದಪ್ಪ ಮತ್ತು ಕಿರಣ್‌  ರವರು ಸೋಲಾರ್ ಪ್ಲೇಟ್ಸ್ ಇಳಿಸಲು ಬಂದಾಗ, ದೂರುದಾರರು ಕೇಳಿದ್ದಕ್ಕೆ ಮಂಜುನಾಥ ರವರು ಕೆಟ್ಟ ಮಾತುಗಳಿಂದ ಬೈದು, ಕಬ್ಬಿಣದ ರಾಡಿನಿಂದ  ಹೊಡೆದು ನೋವುಂಟು ಮಾಡಿರುತ್ತಾನೆ. ಗೋವಿಂದಪ್ಪ, ಗೋವಿಂದಪ್ಪನ ಮಗ ಹಾಗೂ ಕಿರಣ್‌  ರವರು  ಕೈಗಳಿಂದ ಹೊಡೆದು ಪ್ರಾಣ ಬೆದರಿಕೆ ಹಾಕಿರುತ್ತಾರೆ.

 

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ದೂರುದಾರರಾದ ಶ್ರೀ. ರಾಜಣ್ಣ ಬಿನ್ ಕೃಷ್ಣಪ್ಪ, ಸಂಗನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ  ಮಗನಾದ ಅಶೋಕ್  ಕುಮಾರ್. ಆರ್, 22 ವರ್ಷ  ರವರು  ರವರು ದಿನಾಂಕ 13.02.2020 ರಂದು  ಬೆಳಿಗ್ಗೆ 7.30  ಗಂಟೆಗೆ  ಕೋಲಾರದ  ಬೈರೇಗೌಡ  ಇಂಜಿನಿಯರ್   ಕಾಲೇಜಿನಲ್ಲಿ ಉದ್ಯೋಗ ಮೇಳಕ್ಕೆ   ಹೋಗಿ-ಬರುತ್ತೇನೆಂದು ಮನೆಯಲ್ಲಿ  ಹೇಳಿ  ಹೋದವರು  ಮನೆಗೆ  ಬಾರದೆ ಕಾಣೆಯಾಗಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಧನದೇವಿ, ಬೌರಿಲಾಲ್‌ಪೇಟೆ, ಕೆ.ಜಿ.ಎಫ್‌ ರವರ ಗಂಡ ಸಂದೀಪ್, 35 ವರ್ಷ ರವರು ಜಾಂಡಿಸ್ ಖಾಯಿಲೆ ವಾಸಿಯಾಗಲಿಲ್ಲವೆಂಬ ಕಾರಣಕ್ಕೆ ಅತಿಯಾದ ಮದ್ಯಪಾನ ವ್ಯಸನದ ಹವ್ಯಾಸವನ್ನು ಬೆಳೆಸಿಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 15.02.2020 ರಂದು ರಾತ್ರಿ ಮನೆಯ ಮೇಲ್ಚಾವಣಿಗೆ ಅಳವಡಿಸಿದ್ದ ಕಬ್ಬಿಣದ ಹುಕ್ ಗೆ ಓಣಿ ಬಟ್ಟೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *