ದಿನದ ಅಪರಾಧಗಳ ಪಕ್ಷಿನೋಟ 17ನೇ ಡಿಸೆಂಬರ್‌ 2019

– ರಸ್ತೆಅಪಘಾತಗಳು : 02

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಯಲ್ಲಪ್ಪ ಬಿನ್ ಮುನಿಸ್ವಾಮಿ, ಲಕ್ಕೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 14.12.2019 ರಂದು ಸಂಜೆ 6.30 ಗಂಟೆಯಲ್ಲಿ ಲಕ್ಕೇನಹಳ್ಳಿ ಗ್ರಾಮಕ್ಕೆ ಹೋಗಲು ಕೆರೆಯ ಬಳಿ  ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಲಕ್ಕೇನಹಳ್ಳಿ ಗ್ರಾಮದ  ವಾಸಿ ಪಾರ್ಥಸಾರಥಿ ರವರು  KA-07-EA-2124 PASSION PRO ದ್ವಿ ಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂಬದಿಯಿಂದ ದೂರುದಾರರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ದೂರುದಾರರು ಕೆಳಗೆ ಬಿದ್ದು ರಕ್ತಗಾಯವಾಗಿರುತ್ತೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾಗರಾಜ್‌ ಬಿನ್ ಮುನಿಯಪ್ಪ, ತುಮಟಗೆರೆ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ತಾಯಿಯಾದ ಶ್ರೀಮತಿ ರತ್ನಮ್ಮ, 50 ವರ್ಷ, ಸೌಮ್ಯ ಉಕ್ಕುಂದ ಗ್ರಾಮ, ಸುಶೀಲ ಬೂದಿಕೋಟೆ, ಸುಧಾರಾಣಿ, ಹಿರೇಕರಪನಹಳ್ಳಿ ಮತ್ತು ರಾಣಿ ಬೂದಿಕೋಟೆ ರವರುಗಳು ಬಂಗಾರಪೇಟೆಯಿಂದ ಬೂದಿಕೋಟೆಗೆ ಹೋಗಲು ಆಟೋ ಸಂಖ್ಯೆ ಕೆಎ-07-ಎ-0346 ವಾಹನದಲ್ಲಿ ದಿನಾಂಕ 16.12.2019 ರಂದು ಸಂಜೆ  6.15 ಗಂಟೆಯಲ್ಲಿ ಬಂಗಾರಪೇಟೆ-ಬೂದಿಕೋಟೆ ಮುಖ್ಯ ಥಾರ್ ರಸ್ತೆಯಲ್ಲಿರುವ ಹನುಮಂತಪುರ ಗೇಟ್ ಸಮೀಪ ಹೋಗುತ್ತಿದ್ದಾಗ, ಆಟೋವಿನ ಚಾಲಕನಾದ ಶ್ರೀರಾಮ ಎಂಬುವರು ಆಟೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿದ್ದರಿಂದ, ಆಟೋ ಆಯತಪ್ಪಿ ರಸ್ತೆಯ ಬಲಭಾಗಕ್ಕೆ ಉರುಳಿ ಬಿದ್ದಿದ್ದರಿಂದ ಆಟೋವಿನಲ್ಲಿದ್ದ ರತ್ನಮ್ಮ ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಮೃತಪಟ್ಟಿರುತ್ತಾರೆ. ಆಟೋವಿನಲ್ಲಿದ್ದ ಇತರರಿಗೂ ಸಹ ರಕ್ತಗಾಯಗಳಾಗಿರುತ್ತದೆ.

 

– ಅಸ್ವಾಭಾವಿಕಮರಣಪ್ರಕರಣ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಶ್ರೀನಿವಾಸ, ಸಿ.ಹೆಚ್.ಸಿ 15, ಬಂಗಾರಪೇಟೆ ಪೊಲೀಸ್ ಠಾಣೆ ರವರು ನೀಡಿದ ದೂರಿನಲ್ಲಿ, ಸುಮಾರು 40 ರಿಂದ 45 ವರ್ಷ ವಯಸ್ಸುಳ್ಳ ಯಾರೋ ಒಬ್ಬ ಅನಾಮಧೇಯ ಗಂಡಸು ಈಗ್ಗೆ ಸುಮಾರು ಒಂದು ತಿಂಗಳಿನಿಂದ ಬಂಗಾರಪೇಟೆ ಪಟ್ಟಣದ ಅಂಗಡಿಗಳ ಬಳಿ ಬಿಕ್ಷೆಯನ್ನು ಬೇಡಿಕೊಂಡು ಇರುತ್ತಿದ್ದು, ಈತನು ಯಾವುದೋ ಖಾಯಿಲೆಯಿಂದ  ಬಳಲಿ ದಿನಾಂಕ 15.12.2019 ರಂದು ರಾತ್ರಿಯಿಂದ 16.12.2019 ರ ಮದ್ಯಾಹ್ನ 1.00 ಗಂಟೆ ಮದ್ಯೆ ಗಾಂಧಿನಗರದಲ್ಲಿ  ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *