–ರಸ್ತೆ ಅಪಘಾತಗಳು : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 15.06.2019 ರಂದು ಮದ್ಯಾಹ್ನ ಸುಮಾರು 1.30 ಗಂಟೆಯಲ್ಲಿ ಈ ಕೇಸಿನ ಪಿರ್ಯಾದಿದಾರರು ನವೀನ್, ಅನಿಗಾನಹಳ್ಳಿ ಗ್ರಾಮ ರವರು ತನ್ನ ಬಜಾಜ್ ಪಲ್ಸರ್ ದ್ವಿಚಕ್ರ ವಾಹನದಲ್ಲಿ ಹುದುಕುಳ ಗೇಟ್ ಬಳಿಯಿರುವ ಸರ್ಕಾರಿ ಶಾಲೆಯ ಬಳಿ ರಸ್ತೆಯಲ್ಲಿ ಹೋಗುತ್ತಿದ್ದಾಗ, ಎದುರುಗಡೆಯಿಂದ ಅಂದರೆ ಕೋಲಾರ ಕಡೆಯಿಂದ ಬಂಗಾರಪೇಟೆ ಕಡೆಗೆ ಬರಲು ಲಾರಿ ಸಂಖ್ಯೆ ಕೆಎ-06-ಬಿ-1782 ನ್ನು ಅದರ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ದೂರುದಾರರ ದ್ವಿಚಕ್ರ ವಾಹನಕ್ಕೆ ಎದುರಾಗಿ ಡಿಕ್ಕಿ ಹೊಡೆದ ಪರಿಣಾಮ, ದೂರುದಾರರ ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದಾಗ ಬಲಗಾಲಿಗೆ ರಕ್ತಗಾಯ, ಸೊಂಟದ ಬಲಭಾಗಕ್ಕೆ, ಎಡಕಣ್ಣು ಬಳಿ ಊತಗಾಯಗಳಾಗಿರುತ್ತದೆ. ಲಾರಿಯ ಚಾಲಕ ಅಪಘಾತಪಡಿಸಿ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ.
–ಇತರೆ : 01
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ಪಿರ್ಯಾದಿ ಶ್ರೀಮತಿ ಆಶಾ ದೇವುಡಾ ಬಿನ್ ದಿಲೀಪ್ ದೇವುಡಾ, ಬಜಾರ್ ಸ್ಟ್ರೀಟ್ ಆಂಡ್ರಸನ್ಪೇಟೆ ರವರ ಮೈದುನನಾದ ಚೇತನ್ ಪ್ರಕಾಶ್@ಅನೀಲ್ ಕುಮಾರ್ ದೇವುಡಾ ರವರು ಈ ಕೇಸಿನ ಆರೋಪಿಗಳಾದ (1) ಗೌತಮ್ ಮೂಥಾ, (2) ದೀರಜ್ ಗಾಧಿಯಾ ಮತ್ತು (3)ರಮೇಶ್ ಬಾಟೀಯಾ, ಅಂಡ್ರರ್ಸಪೇಟೆ ವಾಸಿಗಳ ಬಳಿ ಹಣಕಾಸಿನ ಸೌಲಭ್ಯ ಪಡೆದು ಅಂಡ್ರರ್ಸಪೇಟೆ ಬಜಾರ್ ಸ್ಟ್ರೀಟ್ ನಲ್ಲಿ ಜವರಿಲಾಲ್ ದೇವುಡಾ ಪಾನ್ ಬ್ರೋಕರ್ ಗಿರಿವಿ ಅಂಗಡಿ ಸಡೆಸುತ್ತಿದ್ದು ಈಗ್ಗೆ 01 ವರ್ಷದಿಂದ ಚೇತನ್ ಪ್ರಕಾಶ್ ದೇವುಡಾ ರವರಿಗೆ ಆರೋಪಿಗಳು ವ್ಯಾಪಾರದಲ್ಲಿ ಏರುಪೇರು ಮಾಡಿದ್ದರಿಂದ ಚೇತನ್ ಪ್ರಕಾಶ್@ಅನೀಲ್ ಕುಮಾರ್ ದೇವುಡಾ ರವರಿಗೆ ಗ್ರಾಹಕರಿಗೆ ಉತ್ತರ ನೀಡಲು ಆಗದೇ, ಹಾಗೂ ಆರೋಪಿ ಗೌತಮ್ ಮೂಥಾ ರವರು 1 ತಿಂಗಳ ಹಿಂದೆ ಚೇತನ್ ಪ್ರಕಾಶ್ ರವರ ಬಳಿ “ನನಗೂ ನಿನಗೂ ಯಾವುದೇ ಸಂಬಂಧವಿಲ್ಲ. ವ್ಯವಹಾರದಲ್ಲಿ ಯಾವುದೇ ಸಂಬಂಧವಿಲ್ಲ. ನೀನು ಕೊಟ್ಟ ಚಿನ್ನವನ್ನು ಕರಗಿಸಿದ್ದೇನೆಂದು ಹೇಳಿದ್ದು, ನಂತರ ಆರೋಪಿ ರಮೇಶ್ ಬಾಟೀಯಾ ಚೇತನ್ ಪ್ರಕಾಶ್ ರವರ ಮನೆಯ ಬಳಿ ಹೋಗಿ, ಆತನನ್ನು ಕುರಿತು “ನೀನು ಪ್ರಪಂಚದಲ್ಲಿ ಇರುವುದಕ್ಕಿಂತ ಸತ್ತು ಹೋಗುವುದು ಒಳ್ಳೆಯದು, ಪ್ರಪಂಚದಲ್ಲಿ ಬದುಕಲು ಯೋಗ್ಯತೆ ಇಲ್ಲ ನಿನಗೆ, ಎಲ್ಲಾದರೂ ಹೋಗಿ ಸತ್ತು ಹೋಗೆಂದು ಹೇಳಿರುತ್ತಾನೆ. ಮತ್ತೊಬ್ಬ ಆರೋಪಿ ದೀರಜ್ ಗಾಧಿಯಾ ರವರು ಚೇತನ್ ಪ್ರಕಾಶ್ ರವರ ಅಂಗಡಿಯ ಅಸಲು ಪತ್ರಗಳನ್ನು ಪಡೆದುಕೊಂಡು ಅಂಗಡಿಯನ್ನು ಖಾಲಿ ಮಾಡೆಂದು ಒತ್ತಡ ತಂದಿರುತ್ತಾರೆ. ದಿನಾಂಕ.15.06.2019 ರಂದು ಸಂಜೆ 6-35 ಗಂಟೆಗೆ ಚೇತನ್ ಪ್ರಕಾಶ್@ಅನೀಲ್ ಕುಮಾರ್ ದೇವುಡಾ ರವರ ತನ್ನ ಮೊಬೈಲ್ ನಿಂದ ಆತನ ಅಂಗಡಿಯಲ್ಲಿ ಕೆಲಸ ಮಾಡುವ ಮಹೇಂದ್ರಕುಮಾರ್ ರವರ ಮೊಬೈಲ್ ಗೆ ಪೋನ್ ಮಾಡಿ, ಆರೋಪಿಗಳಾದ ಗೌತಮ್ ಮೂಥಾ, ದೀರಜ್ ಗಾಧಿಯಾ ಮತ್ತು ರಮೇಶ್ ಬಾಟೀಯಾ ರವರ ಒತ್ತಡ ಮತ್ತು ಪ್ರಚೋದನೆಯಿಂದ ನೊಂದು ರಾಬರ್ಟ್ಸನ್ಪೇಟೆ ಅಂಬೇಡ್ಕರ್ ಪಾರ್ಕ್ ನಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದರ ಮೇರೆಗೆ ದೂರುದಾರರು ಕೂಡಲೇ ಬಂದು ನೀಡಲಾಗಿ ಸಂಗತಿ ನಿಜವಾಗಿದ್ದು, ಕೂಡಲೇ ಚಿಕಿತ್ಸೆ ಸಲುವಾಗಿ ಕೆ.ಜಿ.ಎಫ್ ಸರ್ಕಾರಿ ಆಸ್ವತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕೋಲಾರದ ಜಾಲಪ್ಪ ಆಸ್ವತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದರ ಮೇರೆಗೆ ಅಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ಚೇತನ್ ಪ್ರಕಾಶ್@ಅನೀಲ್ ಕುಮಾರ್ ದೇವುಡಾರವರು ಮೃತಪಟ್ಟಿರುತ್ತಾರೆ.
–ಅಕ್ರಮ ಮದ್ಯ ಮಾರಾಟ : 02
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಅಬ್ಕಾರಿ ಕಾಯ್ದೆ ಅಡಿಯಲ್ಲಿ 2 ಪ್ರಕರಣಗಳು ದಾಖಲಾಗಿರುತ್ತದೆ.
ದಿನಾಂಕ 16.06.2019 ರಂದು ಮದ್ಯಾಹ್ನ 1.30 ಗಂಟೆಗೆ ಈ ಕೇಸಿನ ದೂರುದಾರರಾದ ಶ್ರೀನಿವಾಸ, ಹೆಡ್ಕಾನ್ಸ್ಟೇಬಲ್ ಆಂಡ್ರಸನ್ಪೇಟೆ ಪೊಲೀಸ್ ಠಾಣೆ ರವರು ಠಾಣಾ ಸರಹದ್ದು ನೀಲಗಿರಿಹಳ್ಳಿ ಗ್ರಾಮದ ಬಳಿ ಗಂಗಮ್ಮ ದೇವಸ್ಥಾನದ ಸಿಮೆಂಟ್ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಆರೋಪಿ ವೆಂಕಟಮುನಿ ಬಿನ್ ನಾರಾಯಣಪ್ಪ, ನೀಲಿಗಿರಿಹಳ್ಳಿ ಗ್ರಾಮ ವಾಸಿ ರವರು ಕಾನೂನು ಬಾಹಿರವಾಗಿ ಮದ್ಯಪಾನ ಮಾಡುತ್ತಿದ್ದು, ಸದರಿ ಆರೋಪಿ ಮತ್ತು ಮದ್ಯಪಾನ ಪಾಕೆಟ್ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಯಲ್ಲಿ ಹಾಜರುಪಡಿಸಿರುತ್ತಾರೆ.
ದಿನಾಂಕ 16-06-2019 ರಂದು ಬೆಳಿಗ್ಗೆ 11-00 ಗಂಟೆಗೆ ಈ ಕೇಸಿನ ದೂರುದಾರರಾದ ಗೋಪಿ, ಹೆಡ್ಕಾನ್ಸ್ಟೇಬಲ್ ಆಂಡ್ರಸನ್ಪೇಟೆ ಪೊಲೀಸ್ ಠಾಣೆ ರವರು ಠಾಣಾ ಸರಹದ್ದು ನೀಲಗಿರಿಹಳ್ಳಿ ಗ್ರಾಮದಲ್ಲಿರುವ ಆಂಡ್ರಸನ್ಪೇಟೆಯ ಪೊಲೀಸ್ ಹೊರ ಠಾಣೆಯ ಹಿಂಭಾಗ ಮುಳ್ಳುಪೊದೆಗಳ ಬಳಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಆರೋಪಿ ಕಿಟ್ಟಪ್ಪ ಬಿನ್ ವೆಂಕಟಪ್ಪ, ನೀಲಿಗಿರಿಹಳ್ಳಿ ಗ್ರಾಮ ರವರು ಮದ್ಯಸೇವನೆ ಮಾಡುತ್ತಿದ್ದು, ಸದರಿ ಆರೋಪಿ ಮತ್ತು ಮದ್ಯಪಾನ ಪಾಕೆಟ್ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಯಲ್ಲಿ ಹಾಜರುಪಡಿಸಿರುತ್ತಾರೆ.
–ಅಸ್ವಾಭಾವಿಕ ಮರಣ ಪ್ರಕರಣ : 01
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರು ಅಂಕಿತಾ, ಬಜಾರ್ ರಸ್ತೆ ಬಂಗಾರಪೇಟೆ ರವರು ಮನೆಯಲ್ಲಿ ತನ್ನ ಗಂಡ ಸ್ವರೂಪ, ಮಾವ ನಾಗಪ್ರಕಾಶ್, ಅತ್ತೆ ಶೋಭಾ ಹಾಗೂ ತಾತ ಸತ್ಯನಾರಾಯಣಶೆಟ್ಟಿ ರವರು ವಾಸವಾಗಿದ್ದು, ದಿನಾಂಕ 16.06.2019 ರಂದು ಬೆಳಗಿನ ಜಾವ ಸುಮಾರು 3.00 ಗಂಟೆಯಿಂದ 4.00 ಗಂಟೆ ಮದ್ಯೆ ಮನೆಯಲ್ಲಿ ಯಾವುದೋ ವಿದ್ಯುತ್ ಸಲಕರಣೆಗಳು ಒಂದಕ್ಕೊಂದು ಸ್ಪರ್ಷವಾಗಿ, ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು, ಮನೆಯಲ್ಲಿದ್ದ ಮರದ ಶೋಕೇಶ್, ಟಿವಿ, ಸೋಪಾಸೆಟ್ ಮತ್ತಿತರೆ ವಸ್ತುಗಳಿಗೆ ಬೆಂಕಿ ಹತ್ತಿಕೊಂಡು, ಮನೆಯೊಳಗೆ ಹಬೆ ಮತ್ತು ಹೊಗೆ ತುಂಬಿಕೊಂಡಿದ್ದರಿಂದ ದೂರುದಾರರ ಮಾವನಾದ ನಾಗಪ್ರಕಾಶ್ ರವರು ಮನೆಯ ಮುಖ್ಯ ದ್ವಾರದ ಬಳಿ ಹೋದಾಗ, ಹಬೆಯಿಂದ ಅಥವಾ ಹೊಗೆಯಿಂದ ಉಸಿರುಗಟ್ಟಿ, ಮೈಯಲ್ಲಾ ಸುಟ್ಟುಗಾಯಗಳಾಗಿ, ಚರ್ಮ ಕಿತ್ತುಹೋಗಿ ಕೆಂಪಾಗಿ ಮೃತಪಟ್ಟಿರುತ್ತಾರೆ. ದೂರುದಾರರ ಗಂಡ ಸ್ವರೂಪ, ಅತ್ತೆ ಶೋಭಾ ರವರಿಗೂ ಸಹ ಸುಟ್ಟುಗಾಯಗಳಾಗಿ, ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು, ದೂರು ನೀಡಿರುತ್ತಾರೆ.