ದಿನದ ಅಪರಾಧಗಳ ಪಕ್ಷಿನೋಟ 17ನೇ ನವೆಂಬರ್‌ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 16.11.2018 ರಂದು  ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು. 

– ರಸ್ತೆ ಅಪಘಾತಗಳು :‍ 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ.  ವೆಂಕಟರಾಮಪ್ಪ ಬಿನ್ ಮುನಿಸ್ವಾಮಿ, ಮಿಟ್ಟಮಾಲಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ  ಹೆಂಡತಿ ನಾರಾಯಣಮ್ಮ, 63 ವರ್ಷ ರವರು ದಿನಾಂಕ 09.11.2018 ರಂದು ಸಂಜೆ  5.40 ಗಂಟೆಯಲ್ಲಿ ಮಗಳಾದ ಸೌಮ್ಯ ರವರ ಜೊತೆಯಲ್ಲಿ ಬಂಗಾರಪೇಟೆಯಿಂದ ಬಸ್‌ನಲ್ಲಿ ಹೋಗಿ, ಭಾವರಹಳ್ಳಿ ಗೇಟ್ ಬಳಿ ಬಸ್ ಇಳಿದು ನಾರಾಯಣಮ್ಮ ರವರು ರಸ್ತೆ ದಾಟುತ್ತಿದ್ದಾಗ ಕೋಲಾರ ಕಡೆಯಿಂದ ಬಂಗಾರಪೇಟೆ ಕಡೆಗೆ ಬರುತ್ತಿದ್ದ ಕಾರ್ ಸಂಖ್ಯೆ ಕೆಎ-42-ಎಂ-1927 ರ ವಾಹನದ ಚಾಲಕ ಕಾರ್‌ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ನಾರಾಯಣಮ್ಮ ರವರಿಗೆ ಡಿಕ್ಕಿ ಹೊಡೆದ ಪರಿಣಾಮ, ನಾರಾಯಣಮ್ಮ ರವರಿಗೆ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ  ದಾಖಲಿಸಿದ್ದು, ದಿನಾಂಕ 15.11.2018 ರಂದು ಮದ್ಯಾಹ್ನ 3.00 ಗಂಟೆಗೆ ಚಿಕಿತ್ಸೆ ಫಲಕಾಗಿಯಾಗದೇ ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *