ದಿನದ ಅಪರಾಧಗಳ ಪಕ್ಷಿನೋಟ 16 ನೇ ಜುಲೈ 2017

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 15.07.2017  ರಂದು  ಸಂಜೆ 5.00  ಗಂಟೆಯಿಂದ ದಿನಾಂಕ: 16.07.2017  ರಂದು ಬೆಳಿಗ್ಗೆ 10.00  ಗಂಟೆಯವರೆಗೆ ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಬಾಬು ಬಿನ್ ವೆಂಕಟರಾಮಯ್ಯ, ಗಾಜಗ ಗ್ರಾಮ, ಬಂಗಾರಪೇಟೆ ರವರ ತಮ್ಮನಾದ ಪ್ರಕಾಶ್, 38 ವರ್ಷ ರವರು ಮಾನಸಿಕ ಅಸ್ವಸ್ಥರಾಗಿದ್ದು, ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದರಿಂದ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗೋಣವೆಂತ ದೂರುದಾರರು ದಿನಾಂಕ: 11.07.2017 ರಂದು ಬೆಳಿಗ್ಗೆ 8.30 ಗಂಟೆ ಸಮಯದಲ್ಲಿ ಬಂಗಾರಪೇಟೆ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿದ್ದಾಗ  ಪ್ರಕಾಶ್ ರವರು ಅಲ್ಲಿಂದ ಕಾಣೆಯಾಗಿರುತ್ತಾರೆ. ಸಂಬಂಧಿಕರ ಮತ್ತು ಸ್ನೇಹಿತರ ಮನೆಗಳಲ್ಲಿ ಹುಡುಕಾಡಿಕೊಂಡಿದ್ದರಿಂದ ತಡವಾಗಿ ದೂರಿ ನೀಡಿರುತ್ತಾರೆ.

Leave a Reply

Your email address will not be published. Required fields are marked *