ದಿನದ ಅಪರಾಧಗಳ ಪಕ್ಷಿನೋಟ 16 ನೇ ಮೇ 2019

 

–ಅಸ್ವಾಭಾವಿಕ ಮರಣ ಪ್ರಕರಣ :  01

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ನಾಗರಾಜ್, ಮಲ್ಲೇನ್‌ಗುರ್ಕಿ, ಬಂಗಾರಪೇಟೆ ತಾಲ್ಲೂಕು ರವರ ತಂದೆ ಮುನಿವೆಂಕಟಪ್ಪ, ವಯಸ್ಸು ಸುಮಾರು 80 ವರ್ಷ ರವರಿಗೆ ಆಗಾಗ ಹೊಟ್ಟೆ ನೋವು ಬರುತ್ತಿದ್ದು,  ಖಾಸಗಿ ವೈದ್ಯರು ಮತ್ತು ನಾಟಿ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಂಡಿದ್ದರೂ ಸಹ ಗುಣವಾಗದೆ ಇದ್ದುದ್ದರಿಂದ ದಿನಾಂಕ.15-05-2019 ರಂದು ಬೆಳಿಗ್ಗೆ ಸುಮಾರು 11-00 ಗಂಟೆಯಲ್ಲಿ ಗಾದೆಪ್ಪ ರವರ ಜಮೀನಿನಲ್ಲಿರುವ ಹೊಂಗೆ ಮರದ ಕೆಳಗೆ ಯಾವುದೋ ಔಷದಿಯನ್ನು ಸೇವನೆ ಮಾಡಿ ನರಳಾಡುತ್ತಿದ್ದು, ಮುನಿವೆಂಕಟಪ್ಪ ರವರ ತಮ್ಮನ ಮಗನಾದ ನಾರಾಯಣಸ್ವಾಮಿ ರವರು ನೋಡಿ ಮುನಿವೆಂಕಟಪ್ಪ ರವರನ್ನು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಬೆಳಿಗ್ಗೆ 11-30 ಗಂಟೆಯಲ್ಲಿ ಪರೀಕ್ಷಿಸಿ ಮುನಿವೆಂಕಟಪ್ಪ ರವರು ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *