ದಿನದ ಅಪರಾಧಗಳ ಪಕ್ಷಿನೋಟ 16 ನೇ ಏಪ್ರಿಲ್‌ 2019

– ಅಸ್ವಾಭಾವಿಕ ಮರಣ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ  ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 15.04.2019 ರಂದು ದೂರುದಾರರಾದ ಶ್ರೀಮತಿ ಸುಶೀಲಮ್ಮ ಗೋಪೇನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರ ಮಗಳಾದ ಜಯಶ್ರೀರವರನ್ನು ಈಗ್ಗೆ 6 ತಿಂಗಳ ಹಿಂದೆ ಜಂಗಮಾನಹಳ್ಳಿ ಗ್ರಾಮದ ವಾಸಿ ಮಂಜುನಾಥ ಎಂಬುವರಿಗೆ ರಿಜಿಸ್ಟರ್ ಮದುವೆ ಮಾಡಿಕೊಟ್ಟಿದ್ದು ಇಬ್ಬರೂ ಸಹ ಗಂಡ ಹೆಂಡತಿ ಅನ್ಯೂನ್ಯವಾಗಿ ಸಂಸಾರ ಮಾಡಿ ಜೀವನ ಮಾಡಿಕೊಂಡಿದ್ದರು. ದಿನಾಂಕ-12-04-2019 ರಂದು ಜಯಶ್ರೀ ರವರಿಗೆ ಹೊಟ್ಟೆ ನೋವು ಬಂದಿದ್ದು ಹೊಟ್ಟೆ ನೋವಿಗೆ ತಾಳಲಾರದೆ ಜೀವನದಲ್ಲಿ ಜಿಗುಪ್ಸೆ ಗೊಂಡು ದಿನಾಂಕ-15-04-2019 ರಂದು ಬೆಳಿಗ್ಗೆ 8.00 ಗಂಟೆಯಲ್ಲಿ  ಜಯಶ್ರೀ ರವರು  ಮನೆಯಲ್ಲಿ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾರೆ.

– ಸಾಧಾರಣ ಕಳ್ಳತನ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಣಿ ಬಿನ್ ಮುನಿಸ್ವಾಮಿ, ಚಾಮರಾಜನಗರ, ಆಂಡ್ರಸನ್‌ಪೇಟೆ, ಕೆ.ಜಿ.ಎಫ್ ರವರ 15000/- ರೂ ಬೆಲೆ ಬಾಳುವ ಹೋಂಡಾ ಆಕ್ಟೀವ್ ದ್ವಿಚಕ್ರವಾಹನ  ಸಂಖ್ಯೆ ಕೆಎ08ಕೆ8720 ನ್ನು ದಿನಾಂಕ 08.04.2019 ರಂದು ರಾತ್ರಿ ಮನೆಯ ಕಾಂಪೌಂಡ್  ಒಳಗೆ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

 –ಹಲ್ಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಮಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟರಾಮಪ್ಪ ಬಿನ್ ಚಿನ್ನಪ್ಪ, ದೊಡ್ಡಕಾರಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರಿಗೂ ಮತ್ತು ಆರೋಪಿ ನಾರಾಯಣಸ್ವಾಮಿ   ರವರಿಗೂ ಜಮೀನಿನ ವಿಚಾರದಲ್ಲಿ ತಕರಾರಿದ್ದು, ದಿನಾಂಕ 15-04-2019 ರಂದು ಬೆಳಿಗ್ಗೆ 7.30 ಗಂಟೆಯಲ್ಲಿ ದೂರುದಾರರು ತನ್ನ ಜಮೀನಿನ ಬಳಿ ಹೋಗಿದ್ದಾಗ, ನಾರಾಯಣಸ್ವಾಮಿ ರವರು ದೂರುದಾರರ ಮೇಲೆ ಜಗಳ ಕಾದು, ಕೈಗಳಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿ,  ಪ್ರಾಣ ಬೆದರಿಕೆ ಹಾಕಿರುತ್ತಾನೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :   01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೃಷ್ಣಮೂರ್ತಿ ಬಿನ್ ರಾಮಚಂದ್ರಶೆಟ್ಟಿ, ತೊಪ್ಪನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ಕು.ಅಶ್ವಿನಿ, 21 ವರ್ಷ ರವರು  ದಿನಾಂಕ 14.04.2019 ರಂದು ರಾತ್ರಿ  ಮನೆಯಲ್ಲಿ ಇಲ್ಲದೇ ಕಾಣೆಯಾಗಿರುತ್ತಾಳೆ.

Leave a Reply

Your email address will not be published. Required fields are marked *