ದಿನದ ಅಪರಾಧಗಳ ಪಕ್ಷಿನೋಟ 16 ನೇ ಮಾರ್ಚ್‌ 2019

  –ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಣಿ ಬಿನ್ ವರದಪ್ಪ, ಹೊನಗಾನಹಳ್ಳಿ ಗ್ರಾಮ, ಮುಳಬಾಗಿಲು ತಾಲ್ಲೂಕು ರವರ ಅಣ್ಣನಾದ ಸೋಮಪ್ಪ, 24 ವರ್ಷ ಎಂಬುವರು ದಿನಾಂಕ 15-03-2019 ರಂದು ಬೆಳಿಗ್ಗೆ 10.00 ಗಂಟೆಯಲ್ಲಿ ಕ್ಯಾಸಂಬಳ್ಳಿ ಬಳಿ ಇರುವ ರಾಮಪುರ ಗ್ರಾಮದ ಬಳಿ ನೀರಿನ ಸಿಸ್ಟನ್ (ಸಿಮೆಂಟ್ ಡ್ರಮ್) ನ್ನು ಕ್ರೈನ್ ನಂ ಕೆ.ಎ-52-ಎಂ-619 ರಲ್ಲಿ ಮುಂಭಾಗದಲ್ಲಿ ಕಟ್ಟಿಕೊಂಡು ಅದನ್ನು ಅಲ್ಲಾಡದಂತೆ ಹಿಡಿದುಕೊಳ್ಳಲು  ಸೋಮಪ್ಪನನ್ನು ನೇಮಿಸಿ ವಾಹನವನ್ನು ಅದರ ಚಾಲಕ ಚಲಾಯಿಸಿಕೊಂಡು ಹೋಗುತ್ತಿರುವಾಗ, ವಾಹನವನ್ನು ಅತಿವೇಗ ಮತ್ತು ಅಜಾಗೂರುಕತೆಯಿಂದ ಚಲಾಯಿಸಿದ ಕಾರಣ ಸಿಮೆಂಟ್ ಡ್ರಮ್ ಜೋರಾಗಿ ಅಲುಗಾಡಿದ ಕಾರಣ ಸೋಮಪ್ಪ ಕೆಳಗೆ ಬಿದಿದ್ದು ಆತನ ಮೇಲೆ ಕ್ರೈನ್ ಚಾಲಕ ಕ್ರೈನ್ ವಾಹನವನ್ನು ಹರಿಸಿದ ಪ್ರಯುಕ್ತ ಸೋಮಪ್ಪ ರವರು ಮೃತಪಟ್ಟಿರುತ್ತಾರೆ.

ಮಾರಾಟ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:15.03.2019 ರಂದು ಸಂಜೆ 6.15 ಗಂಟೆಯಲ್ಲಿ ತಂಬಾರ್ಲಹಳ್ಳಿ ಗ್ರಾಮದ   ನಾರಾಯಣಸ್ವಾಮಿ ಬಿನ್ ಶ್ರೀರಾಮಪ್ಪ ಎಂಬುವರ  ಬೊಂಡಾ ಅಂಗಡಿ ಮುಂಭಾಗದಲ್ಲಿ ಮದ್ಯಪಾನ ಸೇವನೆ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ಪಿ.ಎಸ್.ಐ ಶ್ರೀ. ಸುನೀಲ್ ಕುಮಾರ್‌ ಮತ್ತು ಸಿಬ್ಬಂದಿಯವರು ದಾಳಿ ಮಾಡಲಾಗಿ ಮದ್ಯಪಾನ ಮಾಡುತ್ತಿದ್ದವರು ಓಡಿಹೋಗಿದ್ದು, ಸ್ಥಳದಲ್ಲಿ ಬಿಟ್ಟು ಹೋಗಿದ್ದ 1) 06 ORIGINAL CHAOICE POCKETS EASH 90 ML 2) 2 RAJA WHISKY POCKETS EASH 90 ML ಪಾಕೇಟ್ ಗಳನ್ನು ವಶಪಡಿಸಿಕೊಂಡು, ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡುವವರಿಗೆ ಸ್ಥಳಾವಕಾಶ ಮಾಡಿಕೊಟ್ಟಿದ್ದ ನಾರಾಯಣಸ್ವಾಮಿ ರವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತೆ.

ಅಸ್ವಾಭಾವಿಕ ಮರಣ ಪ್ರಕರಣ :  01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನಾರಾಯಣರೆಡ್ಡಿ ಬಿನ್ ರಾಮರೆಡ್ಡಿ, ತಲ್ಲಪಲ್ಲಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ  ಮಗನಾದ ಶ್ರೀನಿವಾಸರೆಡ್ಡಿ, 35 ವರ್ಷ ರವರು ಜಿರಾಯ್ತಿ ಮಾಡಲು ಬೋರ್ ವೆಲ್ ಗಳನ್ನು ಕೊರೆಸಿ ನೀರು ಸಿಗದೇ ಇದ್ದು ಮತ್ತು ಮದ್ಯ ಸೇವನೆ ಮಾಡುತ್ತಿದ್ದು ಮನೆ ಪೋಷಣೆ ಮಾಡಲು ಕಷ್ಟ ವಾಗಿದ್ದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ 14-03-2019 ರಂದು ರಾತ್ರಿ 11.00 ಗಂಟೆಯಿಂದ ದಿನಾಂಕ- 15-03-2019 ರಂದು ಬೆಳಿಗ್ಗೆ 8.00 ಗಂಟೆಯೊಳಗೆ ಅದೇ ಗ್ರಾಮದ ಎನ್. ರಾಮಯ್ಯ ರವರ ಜಮೀನಿನಲ್ಲಿರುವ ಹುಣಸೆ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾನೆ.

ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹುಡುಗಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಸುಬ್ಬರಾಜು ಬಿನ್ ಪಾಪಣ್ಣ, ಸ್ವರ್ಣನಗರ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್ ರವರ ಮಗಳಾದ ಬೃಂದಾ, 19 ವರ್ಷ ರವರು ದಿನಾಂಕ 02-03-2019 ರಂದು ಸಂಜೆ 6-00 ಗಂಟೆಗೆ ಸ್ನೇಹಿತೆಯ ಮನೆಗೆ ಹೋಗುವುದಾಗಿ ಹೇಳಿ ಹೋದವಳು ಮತ್ತೆ ಮನೆಗೆ ವಾಪಸ್ಸು ಬರದೆ ಕಾಣೆಯಾಗಿರುತ್ತಾಳೆ.

Leave a Reply

Your email address will not be published. Required fields are marked *