ದಿನದ ಅಪರಾಧಗಳ ಪಕ್ಷಿನೋಟ 16 ನೇ ಜುಲೈ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 15.07.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಅಕ್ರಮ ಮದ್ಯ ಮಾರಾಟ : 01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 16.07.2020 ರಂದು ಸಂಜೆ 04.30 ಗಂಟೆಯಲ್ಲಿ ಬೆನ್ನವಾರ ಗ್ರಾಮದ ಶ್ರೀಮತಿ ಮುನಿಯಮ್ಮ ರವರು ಅವರ ಅಂಗಡಿ ಬಳಿ ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಲು ಅವಕಾಶಮಾಡಿಕೊಟ್ಟಿದ್ದು, ಪ್ರೊ.ಪಿ.ಎಸ್.ಐ. ಶ್ರೀಮತಿ. ರಾಜೇಶ್ವರಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಸ್ಥಳದಲ್ಲಿದ್ದ (1) 02 ಪ್ಲಾಸ್ಟಿಕ್ ಲೋಟ, (2) 90 ML 02 HAYWARDS, 3) ಖಾಲಿಯಾಗಿರುವ 90 ML 01 HAYWARDS (4) 05 ವಾಟರ್ ಪಾಕೇಟ್ ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಾಗಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಕೆಂಪೇಗೌಡ ಬಿನ್ ಗೋವಿಂದಪ್ಪ, ಕಾಮಾಂಡಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗನಾದ ಕೆ.ಅಂಬರೀಶ್, 35 ರವರು ದೂರುದಾರರ ಅಣ್ಣ ಜಿ.ಸುಬ್ರಮಣ್ಯಂ ರವರ ಜೊತೆಯಲ್ಲಿ ದಿನಾಂಕ 15.07.2020 ರಂದು ಬೆಳಿಗ್ಗೆ 9.30 ಗಂಟೆಯಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಗೆ ಬಂದು, ನಂತರ ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ದೂರುದಾರರನ್ನು ನೋಡಲು ಹೋದವರು ಕಾಣೆಯಾಗಿರುತ್ತಾರೆ.

Leave a Reply

Your email address will not be published. Required fields are marked *