ದಿನದ ಅಪರಾಧಗಳ ಪಕ್ಷಿನೋಟ 16 ನೇ ಸೆಪ್ಟೆಂಬರ್‌ 2019

– ಸುಲಿಗೆ : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:15.09.2019 ರಂದು ದೂರುದಾರರಾದ ಶ್ರೀಮತಿ ಲೀನಾಪ್ರಬಾಕರ್‌ ಕೋಂ ಪ್ರಬಾಕರನ್‌ ಉರಿಗಾಂ ರವರು ನೀಡಿದ ದೂರಿನಲ್ಲಿ ಶ್ರೀಮತಿ ಲೀನಾ ಪ್ರಭಾಕರನ್ ರವರು ಉರಿಗಾಂ ತಂಗತಾಯಿ ಚರ್ಚ್ ನಲ್ಲಿ ದೇವರ ದರ್ಶನ ಪಡೆದು ಪ್ರಸಾದ ಹಂಚುತ್ತಿರುವ ಜಾಗಕ್ಕೆ ಹೋಗಿ ಜನಜಂಗುಲಿಯಲ್ಲಿ ಪ್ರಸಾದವನ್ನು ತೆಗೆದುಕೊಳ್ಳುತ್ತಿರುವಾಗ ಯಾರೋ ಕಳ್ಳರು ದೂರುದಾರರ ಕತ್ತಿನಲ್ಲಿದ್ದ ಸುಮಾರು 29 ಗ್ರಾಂ ತೂಕದ ಮಾಂಗಲ್ಯ  ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ಹೆಂಗಸು ಕಾಣೆಯಾಗಿರುವ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 15.09.2019 ರಂದು ದೂರುದಾರರಾದ ಶ್ರೀ. ಕುಚೇಲಾ ಬಿನ್ ಮುನಿಯಪ್ಪ ಕರಪನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರ ಮಗಳಾದ ಶ್ರೀಮತಿ. ಸುವರ್ಣ, ವಯಸ್ಸು 21 ವರ್ಷ ರವರಿಗೆ ಈಗ್ಗೆ ಸುಮಾರು 02 ವರ್ಷಗಳ ಹಿಂದೆ ಆಂದ್ರಪ್ರದೇಶದ ಕುಪ್ಪಂ ತಾಲ್ಲೂಕು ಗುಡಪಲ್ಲಿ ಮಂಡಲಂ, ಸಂಗನಪಲ್ಲಿ ವಾಸಿ ದರ್ಗರಾಜು ಎಂಬುವರಿಗೆ ಮದುವೆಯಾಗಿದ್ದು, ಮದುವೆಯಾದ 03 ತಿಂಗಳ ಬಳಿಕ ಗಂಡನ ಮನೆಯನ್ನು ಬಿಟ್ಟು ತವರು ಮನೆಯಾದ ದೊಡ್ಡೂರು ಕರಪನಹಳ್ಳಿಯ ತವರು ಮನೆಯಲ್ಲಿ ವಾಸವಾಗಿದ್ದು, ದಿನಾಂಕ.18-08-2019 ರಂದು ಬೆಳಿಗ್ಗೆ ಸುಮಾರು 10-00 ಗಂಟೆಯಲ್ಲಿ ಶ್ರೀಮತಿ. ಸುವರ್ಣ ರವರು ಬೆಮಲ್ ನಗರದ ಆಲದಮರದ ಬಳಿ ರೆಡಿಮೇಡ್ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿ,  ಮನೆಯಿಂದ ಹೋದವಳು,  ಮನೆಗೆ ವಾಪಸ್ ಬರದೆ ಕಾಣೆಯಾಗಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ:15.09.2019 ರಂದು ದೂರುದಾರರಾದ ಶ್ರೀ. ಕೃಷ್ಣಾರೆಡ್ಡಿ ಬಿನ್‌ ರಘುರಾಮರೆಡ್ಡಿ ನಾಯನಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ದೂರುದಾರರ ತಾಯಿಯಾದ ಶ್ರೀಮತಿ ಸುಮಿತ್ರಮ್ಮ ವಯಸ್ಸು 40 ವರ್ಷ.ರವರು ತನ್ನ ಗಂಡ ರಘುರಾಮರೆಡ್ಡಿ ರವರೊಂದಿಗೆ ತೊಟದ ಬಳಿಗೆ ಹೋಗಿದ್ದು ತೋಟದಲ್ಲಿ ಬೀನ್ಸ್ ಕೀಳುತ್ತಿದ್ದಾಗ ಅವರ ಬಲಕಾಲಿಗೆ ಯಾವುದೋ ಹಾವು ಕಚ್ಚಿದ್ದು ಚಿಕಿತ್ಸೆಗಾಗಿ ದ್ವಿಚಕ್ರವಾಹನದಲ್ಲಿ ಆಂದ್ರಪ್ರದೇಶದ, ಪಲಮನೇರು ಬಳಿ ಇರುವ ಗುಟ್ಲೂರು ನಲ್ಲಿ ಇರುವ ಜೆ.ಎಂ.ಜೆ. ಹೆಲ್ತ್ ಕೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಕೊಡಿಸಿದ್ದು ನಂತರ ವೈದ್ಯರು ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯದಲ್ಲಿಸುಮಿತ್ರಮ್ಮ ರವರು ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *