ದಿನದ ಅಪರಾಧಗಳ ಪಕ್ಷಿನೋಟ 16 ನೇ ಆಗಸ್ಟ್‌ 2019

-ಕನ್ನ ಕಳುವು : 01

ಉರಿಗಾಂ ಪೊಲೀಸ್ ಠಾಣೆಯಲ್ಲಿ ಮನೆ ಕಳವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 15.08.2019 ರಂದು ದೂರುದಾರರಾದ ಶ್ರೀ. ಪದ್ಮಾವತಿ ಕೋಂ ಮಣಿ ಉರಿಗಾಂ ರವರು ನೀಡಿದ ದೂರಿನಲ್ಲಿ ದಿನಾಂಕ:14.08.2019 ರಂದು ಮದ್ಯಾಹ್ನ 2.00 ಗಂಟೆಗೆ ಉರಿಗಾಂ ಎನ್.ಡಿ ವಾಚ್ ಮನ್ ಲೈನ್ ನಲ್ಲಿರುವ ತಮ್ಮ ವಾಸದ ಮನೆಗೆ ಬೀಗ ಹಾಕಿ ಕೊಂಡು ಬೆಂಗಳೂರಿಗೆ ಹೋಗಿ ಬರವಷ್ಟರಲ್ಲಿ ಮನೆಯ ಬೀಗವನ್ನು ಯಾರೋ ಕಳ್ಳರು ಮುರಿದು ಒಳಗೆ ಪ್ರವೇಶಿಸಿ ಬೀರುವಿನಲ್ಲಿದ್ದ ಒಟ್ಟು ರೂ 22000/-ಗಳ ಬೆಲೆ ಬಾಳುವ ಚಿನ್ನದ ವಡವೆ ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರ.

– ರಸ್ತೆ ಅಪಘಾತಗಳು : 01

ಬೆಮೆಲ್‌ ನಗರ ಪೊಲೀಸ್‌ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 15.08.2019 ರಂದು ದೂರುದಾರರಾದ ಶ್ರೀ ರಮೇಶ್‌ ಬಾಬು ಬಿನ್ ನಾರಾಯಣಪ್ಪ ಮಂಜುನಾಥ ನಗರ ಉರಿಗಾಂ ಪೇಟೆ ರವರು ನೀಡಿದ ದೂರಿನಲ್ಲಿ ದಿನಾಂಕ 14-08-2019 ರಂದು ದಾಸರಹೊಸಹಳ್ಳಿ ಗ್ರಾಮಕ್ಕೆ ಗಾರೆ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದಾಗ ರಾತ್ರಿ ಸುಮಾರು 7-30 ಗಂಟೆಯಲ್ಲಿ ದ್ವಿಚಕ್ರ ವಾಹನದಲ್ಲಿ ಬಂಗಾರಪೇಟೆ-ಬೇತಮಂಗಲ ಮುಖ್ಯ ರಸ್ತೆಯ ಜನತಾ ಕಾಲೋನಿಯ ಬಳಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ, ದೂರುದಾರರ ಮುಂದೆ ಚಲಪತಿ ಎಂಬುವರು ಆತನ ಬಜಾಜ್ ಡಿಸ್ಕವರ್ ದ್ವಿಚಕ್ರ ವಾಹನ ಸಂಖ್ಯೆ ಕೆ.ಎ.53-ಎಕ್ಸ್ .4665 ವಾಹನದಲ್ಲಿ ರಸ್ತೆಯಲ್ಲಿ ಕೃಷ್ಣಾವರಂ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದು, ಕೃಷ್ಣಾವರಂ ಕಡೆಯಿಂದ ಆಲದ ಮರದ ಕಡೆಗೆ ಹೋಗಲು ಆರೋಪಿ-ಸುರೇಶ್ ಎಂಬುವರು ಆತನ ಹೊಂಡಾ ಸಿಟಿ ಕಾರ್ ಸಂಖ್ಯೆ ಕೆಎ-01-ಎಂ.ಎಲ್.3911 ಅನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಚಲಪತಿ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪ್ರಯುಕ್ತ ಚಲಪತಿ ಗಾಡಿಯ ಸಮೇತ ಬಿದ್ದಾಗ ಬಲಕಾಲಿನ ಹಿಮ್ಮಡಿಗೆ, ರಕ್ತಗಾಯಗಳಾಗಿರುತ್ತದೆ.

– ಜೂಜಾಟ ಕಾಯ್ದೆ : 01

ಬೇತಮಂಗಲ ಪೊಲೀಸ್‌ ಠಾಣೆಯಲ್ಲಿ ಜೂಜಾಟ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ-15-08-2019 ರಂದು ಶ್ರೀ. ಮಧುಸೂದನ್ ಬೇತಮಂಗಲ ಪೊಲೀಸ್‌ ಠಾಣೆ ರವರಿಗೆ ಗುಪ್ತ ಮಾಹಿತಿ ಸಂಗ್ರಹಿಸಲು ಕರ್ತವ್ಯಕ್ಕೆ ನೇಮಿಸಿದ್ದು ಸದರಿಯವರು ಗೊಲ್ಲಹಳ್ಳಿ ಗ್ರಾಮದಲ್ಲಿ ಗಸ್ತು ಮಾಡುತ್ತಿದ್ದಾಗ ಅವರಿಗೆ ಭಾತ್ಮೀದಾರರಿಂದ ಬಂದ ಖಚಿತ ಮಾಹಿತಿ ಮೇರೆಗೆ ಜಯಮಂಗಲ ರಸ್ತೆಯಲ್ಲಿರುವ ಮದ್ದಿನಾಯಕನಹಳ್ಳಿ ಕೆರೆಯ ಅಂಗಳದ ಗಿಡಗಳಲ್ಲಿ ಯಾರೋ ಇಸ್ವಿಟ್ ಎಲೆಗಳಿಂದ ಅಂದರ್ ಬಾಹರ್ ಅದೃಷ್ಟದ ಜೂಜಾಟ ಆಡುತ್ತಿರುತ್ತಾರೆಂತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ನೋಡಿದಾಗ ಆರೋಪಿಗಳಾದ ನಾರಾಯಣಸ್ವಾಮಿ , ಶ್ರೀನಿವಾಸ, ಕೇಶವ, ಬಾಬು, ಯಲ್ಲಪ್ಪ, ಕೃಷ್ಣಪ್ಪ, ಸುಬ್ರಮಣಿ ರವರಿಗಳು ಅಂದರ್ ಬಾಹರ್ ಜೂಜಾಟಕ್ಕ ಇಟ್ಟಿದ್ದ 6.880/- ಗಳನ್ನು ಅಮಾನತ್ತು ಪಡಿಸಿರುತ್ತಾರೆ. ಎಲ್ಲರೂ ಗೊಲ್ಲಹಳ್ಳಿ ಗ್ರಾಮ ರವರಾಗಿರುತ್ತಾರೆ ಆರೋಪಿಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಜುರುಗಿಸಿರುತ್ತಾರೆ.

ಅಪರಾಧ ಪೊಲೀಸ್‌ ಠಾಣೆಯಲ್ಲಿ ಜೂಜಾಟ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ-15-08-2019 ರಂದು ದೂರುದಾರರಾದ ಶ್ರೀ ಆರ್.ವಿಜಯ್ ಪಿ.ಎಸ್.ಐ, ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ ಕೆ.ಜಿ.ಎಫ್ ದಿನಾಂಕ.15.08.2019 ರಂದು ಬೆಳಿಗ್ಗೆ ಸುಮಾರು 11.00 ಗಂಟೆಯಲ್ಲಿ ಸಿಬ್ಬಂದಿಯವರಾದ ಸಿ.ಪಿ.ಸಿ 141,95,222 ರವರೊಂದಿಗೆ ಬೆಮೆಲ್ ನಗರದಲ್ಲಿ ಗಸ್ತು ಮಾಡುತ್ತಿದ್ದಾಗ ಬಂದ ಮಾಹಿತಿ ಮೇರೆಗೆ ಡಿ.ಕೆ ಪ್ಲಾಂಟೇಶನ್ ನಲ್ಲಿರುವ ಹನುಂತರಾಯಪ್ಪ ರವರ ತೋಟದ ಮನೆಯ ಬಳಿಗೆ ಹೋಗಿ ನೋಡಲಾಗಿ ಸದರಿ ಮನೆಯ ಮೊದಲನೆಯ ಮಹಡಿಯಲ್ಲಿ ಹೋಗಿ ನೋಡಿದಾಗ ಶಂಕರ್‌ ರೆಡ್ಡಿ, ಅಶ್ವತ್‌, ಸುಬ್ರಮಣಿ, ಜಯಪ್ಪ, ನೇಶ್‌ಕುಮಾರ್‌, ರಾಮಕೃಷ್ಣ, ಸುರೇಶ್‌ ಭಾಬು, ರಘು. ಜಗನಾಥ್‌, ಅಮರೇಶ್‌, ಪುಣ್ಯಮೂರ್ತಿ ಗೋಪಿ ರಾಧಕೃಷ್ಣ, ನಾರಾಯಣಪ್ಪ ರವರನ್ನು ದಸ್ತಗಿರಿ ಮಾಡಿ ಅವರ ಬಳಿ ಇದ್ದ ರೂ 58.850/- ಗಳನ್ನು ಅಮಾನತ್ತು ಪಡಿಸಿಕೊಂಡು ಕಾನೂನು ಕ್ರಮ ಜರುಗಿಸಿರುತ್ತಾರೆ.
– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 15.08.2019 ರಂದು ದೂರುದಾರರಾದ ಶ್ರೀಮತಿ ನೀಲಮ್ಮ ಕೋಂ ಬಾಲಕೃಷ್ಣ ಐತಂಡಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ 20 ದಿನಗಳ ಹಿಂದೆ ದೂರುದಾರರ ಗಂಡನಾದ ಬಾಲಕೃಷ್ಣ, 35 ವರ್ಷ ರವರು ಕಾರ್ಪೆಂಟರ್ ಕೆಲಸಕ್ಕೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೊರಗೆ ಹೋದವರು ಪುನಃ ವಾಪಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ :03

ಕಾಮಸಮುದ್ರಂ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ವರದಿಯಾಗಿರುತ್ತದೆ. ದಿನಾಂಕ: 15.08.2019 ರಂದು ದೂರುದಾರರಾದ ಶ್ರೀಮತಿ ಮುನಿಯಪ್ಪ ರವರು ನೀಡಿದ ದೂರಿನಲ್ಲಿ ದೂರುದಾರರ ತಮ್ಮನಾದ ವೆಂಕಟೇಶಪ್ಪ ಬಿನ್ ಲೇಟ್ ಮುನಿಯಪ್ಪ, ವಯಸ್ಸು 45 ವರ್ಷ ರವರು ಬೋರ್ ವೆಲ್ ನ ಪೈಪುಗಳು ಎತ್ತುವ ಕೂಲಿ ಕೆಲಸ ಮಾಡಿಕೊಂಡಿದ್ದು ಇವರಿಗೆ ಮಕ್ಕಳಾಗದ ಕಾರಣ ಬೇಸಗೊಂಡು ದಿನಾಂಕ 14.08.2019 ರಂದು ಮನೆಯ ಚಿಲಕ ಹಾಕಿಕೊಂಡು ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ.

ಉರಿಗಾಂ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ವರದಿಯಾಗಿರುತ್ತದೆ. ದಿನಾಂಕ: 15.08.2019 ರಂದು ದೂರುದಾರರಾದ ಶ್ರೀಮತಿ ಜಗದೀಶ್ವರಿ ವಾಚ್‌ಮನ್‌ ಲೈನ್‌ ಉರಿಗಾಂ ರವರು ನೀಡಿದ ದೂರಿನಲ್ಲಿ ದೂರುದಾರರ ಗಂಡ ಮೂರ್ತಿ 44 ವರ್ಷ ರವರಿಗೆ ಹೃದಯ ಸಂಬಂದಿ ಖಾಯಿಲೆಯಿಂದ ನರಳುತ್ತಿದ್ದು ಇದರ ಸಂಬಂದ ಬೇಸರಗೊಂಡು ದಿನಾಂಕ:05.08.2019 ರಂದು ಬೆಳಿಗ್ಗೆ ಎನ್.ಡಿ ವಾಚ್ ಮನ್ ಲೈನಿನ ತಮ್ಮ ಮನೆಯಲ್ಲಿ ಯಾವುದೋ ವಿಷಸೇವನೆ ಮಾಡಿ ಅಸ್ವಸ್ಥನಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು ಗುಣಮುಖನಾಗದೇ ದಿನಾಂಕ:15.08.2019 ರಂದು ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ.

ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಅಸ್ವಾಬಾವಿಕ ಮರಣದ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 16-08-2019 ರಂದು ಬೆಳಗ್ಗೆ 11-30 ಗಂಟೆಯಲ್ಲಿ ದೂರುದಾರರಾದ ಶ್ರೀ. ಸುಕೂರ್‌ ಬಿನ್‌ ಬಾಬು ಸೇಠ್ ದೇಶಿಹಳ್ಳಿ ಗ್ರಾಮ ರವರು ನೀಡಿದ ದೂರಿನಲ್ಲಿ ಬಾಬು ಸೇಠ್‌ ರವರು ಅಯ್ಯಪ್ಪಸ್ವಾಮಿ ದೇವಾಲಯದ ಹಿಂಭಾಗದಲ್ಲಿರುವ ಕೆರೆಗೆ ಭಹಿರ್ದೆಸೆಗೆ ಹೋಗಿ ಬರುವುದಾಗಿ ದೂರುದಾರರಿಗೆ ಹೇಳಿ ಹೋದವರು ಸುಮಾರು ಹೊತ್ತಾದರೂ ವಾಪಸ್ಸು ಬಾರದೇ ಇದ್ದು ದೂರುದಾರರು ಸ್ಥಳಕ್ಕೆ ಹೋಗಿ ನೋಡಲಾಗಿ ಕೆರೆಯ ಕಟ್ಟೆಯ ಬಳಿ ಕುಸಿದು ಬಿದ್ದಿದ್ದು ದೂರುದಾರರು ಎಬ್ಬಿಸಿದರೂ ಮಾತನಾಡದೇ ಇದ್ದು ಬಾಬು ಸೇಠ್‌ ದೇಶಿಹಳ್ಳಿ ಗ್ರಾಮ ರವರನ್ನು ಬಂಗಾರಪೆಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *