ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ 15.03.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಕೊಲೆ : 01
ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಯಶ್ವಂತ್ ರಾಜ್ ಬಿನ್ ಚಿನ್ನರಾಜ್, ಎಸ್.ಟಿ ಬ್ಲಾಕ್, ಚಾಂಪಿಯನ್ರೀಫ್ಸ್, ಕೆ.ಜಿ.ಎಫ್ ರವರ ತಮ್ಮ ಪ್ರಭುರಾಜ್, 45 ವರ್ಷ ಎಂಬುವರು ಕೆ.ಜಿ.ಎಫ್ ಚಾಮರಾಜಪೇಟೆಯ ವಾಸಿ ರವರನ್ನು ದಿನಾಂಕ:14.03.2021 ರಂದು ರಾತ್ರಿ ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶವಿಟ್ಟುಕೊಂಡು ಯಾವುದೋ ಆಯುಧದಿಂದ ಕತ್ತು ಕೊಯ್ದು ಕೊಲೆ ಮಾಡಿ ಸಾಕ್ಷ್ಯಾಧಾರಗಳನ್ನು ನಾಶಪಡಿಸಿರುತ್ತಾರೆ.
– ದೊಂಬಿ : 02
ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ 02 ದೊಂಬಿ ಪ್ರಕರಣಗಳು ದಾಖಲಾಗಿರುತ್ತದೆ.
ದೂರುದಾರರಾದ ಶ್ರೀ. ಮೀರ್ ಫೈಯಾಜ್ ಅಹ್ಮದ್ ಬಿನ್ ಮೀರ್ ಅಬ್ಬಾಸ್, ಸಿ ರಹೀಂ ನಗರ, ಬಂಗಾರಪೇಟೆ ರವರು ದಿನಾಂಕ 15.03.2021 ರಂದು ರಾತ್ರಿ 7-30 ಗಂಟೆಯಲ್ಲಿ ಕಾವರನಹಳ್ಳಿ ಗ್ರಾಮದ ಸತ್ತಿ ರವರು ಬೋರ್ ವೆಲ್ ಮಿಷನ್ ಬೇಕೆಂದು ಅಂಗಡಿಯ ಬಳಿ ಹೋದಾಗ, ಮೀರ್ ಬಾಕರ್, ಮೀರ್ ಜುಬೀರ್ ಅಹ್ಮದ್, ಅಫ್ರಿನ್, ನೂರ್ ಜಾನ್ ಮತ್ತು ಅಮ್ರೀನ್ ರವರು ದೂರುದಾರರಿಗೆ ಏಕೆ ನಮ್ಮ ಅಂಗಡಿಯ ಬಳಿ ಬಂದಿರುತ್ತೀರಿ ಎಂದು ಜಗಳ ಮಾಡಿ ಕಲ್ಲು ಮತ್ತು ರಾಡ್ನಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾರೆ.
ದೂರುದಾರರಾದ ಶ್ರೀ. ಮೀರ್ ಜುಬೀರ್ ಅಹ್ಮದ್ ಬಿನ್ ಮೀರ್ ಬಾಕರ್ ಅಹ್ಮದ್, ಸಿ ರಹೀಂ ನಗರ, ಬಂಗಾರಪೇಟೆ ರವರ ತಂದೆಯಾದ ಮೀರ್ ಬಾಕರ್ ಅಹಮದ್ @ ಶಾಹೀನ್ ರವರು ದಿನಾಂಕ 15.03.2021 ರಂದು ಸಂಜೆ 7-15 ಗಂಟೆಯಲ್ಲಿ ದೂರುದಾರರ ಅಂಗಡಿಯಲ್ಲಿರುವಾಗ ಮೀರ್ ಫೈಯಾಜ್ ಅಹ್ಮದ್, ಮೀರ್ ಮಸೂದ್ ಅಹ್ಮದ್, ಮೀರ್ ಮುಸ್ಜಿದ್ ಅಹ್ಮದ್, ಮೀರ್ ಮುಹೀದ್ ಮತ್ತು ಮೀರ್ ಮುಕ್ತರ್ ರವರು ತಂದೆಯೊಂದಿಗೆ ಗಲಾಟೆ ಮಾಡಿ ಕೈಗಳಿಂದ, ಕಲ್ಲಿನಿಂದ ಹೊಡೆದು ರಕ್ತ ಪಡಿಸಿದ್ದು, ದೂರುದಾರರು ಜಗಳ ಬಿಡಿಸಲು ಹೋದಾಗ ರಾಡ್ ಗಳಿಂದ ಹೊಡೆದು ರಕ್ತಗಾಯಪಡಿಸಿದ್ದು, ದೂರುದಾರರ ತಂಗಿ ಸಹೀದಾ ಮತ್ತು ಫಿರೋಜ್ ಫಾತೀಮಾ ರವರಿಗೆ ಕೆಟ್ಟ ಮಾತುಗಳಿಂದ ಬೈದಿರುತ್ತಾರೆ.
– ಅಬಕಾರಿ ಕಾಯ್ದೆ : 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 15.03.2021 ರಂದು ಮದ್ಯಾಹ್ನ 3:30 ಗಂಟೆಯಯಲ್ಲಿ ಬಿಲ್ಲೇರಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ರಸ್ತೆಯ ಬದಿಯಲ್ಲಿ ಸಾರ್ವಜನಿಕರು ಸಂಚರಿಸುವ ಸ್ಥಳದಲ್ಲಿ ನಾಗರಾಜ್ಗೌಡ ಬಿನ್ ಕಿಟ್ಟಪ್ಪ, ಬಿಲ್ಲೇರಹಳ್ಳಿ ಗ್ರಾಮ ರವರು ಕುಳಿತುಕೊಂಡು ಮಧ್ಯಪಾನ ಮಾಡುತ್ತಿದ್ದವರನ್ನು ಮತ್ತು ಸ್ಥಳದಲ್ಲಿದ್ದ 90 ML ನ ORIGINAL CHOICE ನ 01 TETRA ಪಾಕೆಟ್, ಪ್ಲಾಸ್ಟಿಕ್ ಗ್ಲಾಸ್, ಅರ್ದಲೀಟರ್ ನ ವಾಟರ್ ಬಾಟೆಲ್ ಗಳನ್ನು ಪಿ.ಎಸ್.ಐ ಶ್ರೀ. ನವೀನ್ ಮತ್ತು ಸಿಬ್ಬಂದಿಯವರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.