ದಿನದ ಅಪರಾಧಗಳ ಪಕ್ಷಿನೋಟ 16ನೇ ಫೆಬ್ರವರಿ 2021

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 15.02.2021 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಅಬಕಾರಿ ಕಾಯ್ದೆ : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 15.02.2021 ರಂದು ಮದ್ಯಾಹ್ನ 2.00 ಗಂಟೆಯಲ್ಲಿ ಕಾರಹಳ್ಳಿ ಗ್ರಾಮದ ವಾಸಿಯಾದ ಮುನಿವೆಂಕಟಪ್ಪ ಬಿನ್ ಚಿನ್ನವೀರಪ್ಪ ರವರು ಅವರ ಚಿಲ್ಲರೆ ಅಂಗಡಿಯ ಬಳಿ ಯಾವುದೇ ಅನುಮತಿಯಿಲ್ಲದೇ ಸಾರ್ವಜನಿಕರಿಗೆ ಮಧ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ದೂರುದಾರರಾದ ಶ್ರೀ. ಸುನೀಲ್‌ ಕುಮಾರ್‌, ಸಿ.ಪಿ.ಐ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಸ್ಥಳದಲ್ಲಿದ್ದ, 1) ಖಾಲಿಯಾಗಿರುವ Haywards Cheers Whisky 90 ml ನ 05 ಪಾಕೇಟ್ ಗಳು, 2) ಮೂರು ಪ್ಲಾಸ್ಟಿಕ್ ಲೋಟಗಳು, 3) ಎರಡು ಖಾಲಿಯಾಗಿರುವ ನೀರಿನ ಪಾಕೆಟ್ ಗಳು, 4) ಅರ್ದ ಭಾಗದಷ್ಟು ನೀರಿರುವ ಬಿಸ್ಲೆರಿ ವಾಟರ್ ಬಾಟೆಲ್ ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ.

ರಸ್ತೆ ಅಪಘಾತಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಲಕ್ಷ್ಮೀನಾರಾಯಣ ಬಿನ್ ವೆಂಕಟಸ್ವಾಮಿ, ಗೌತಮ್‌ನಗರ, ಬಂಗಾರಪೇಟೆ ರವರ  ಮಾವನಾದ ರಾಮಕೃಷ್ಣ, 60 ವರ್ಷ ರವರು ದಿನಾಂಕ 13.02.2021 ರಂದು ರಾತ್ರಿ 8.00 ಗಂಟೆಯಲ್ಲಿ ಬಂಗಾರಪೇಟೆಯ ಬಿಜಿಟಿ ಹೋಟೆಲ್ ಸಮೀಪ ನಡೆದುಕೊಂಡು ಬರುತ್ತಿದ್ದಾಗ, ಕೋಲಾರ ಕಡೆಯಿಂದ ದ್ವಿಚಕ್ರ ವಾಹನ ಆರ್1-5 ಸಂಖ್ಯೆ ಕೆಎ-07-ಇಡಿ-9891ನ್ನು ಅದರ ಸವಾರನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ರಾಮಕೃಷ್ಣ ರವರಿಗೆ ಡಿಕ್ಕಿ ಹೊಡೆದ ಪ್ರಯುಕ್ತ ರಾಮಕೃಷ್ಣ ರವರಿಗೆ ರಕ್ತಗಾಯವಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ :  02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಚಲಪತಿ ಬಿನ್ ಚಿಕ್ಕಮಲ್ಲಪ್ಪ, ಮೇಲಿನೂರು ಗ್ರಾಮ, ಮಾಲೂರು ತಾಲ್ಲೂಕು ರವರ ತಂಗಿ ಸುನಂದ, 32 ವರ್ಷ ರವರಿಗೆ ಮೈ ಹುಷಾರಿಲ್ಲದೇ ಮಾನಸಿಕವಾಗಿ ನೊಂದುಕೊಂಡಿದ್ದು, ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದರೂ ಸಹ ಗುಣಮುಖವಾಗಿರುವುದಿಲ್ಲ. ಇದರಿಂದ ಸುನಂದ ರವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 15.02.2021 ರಂದು ಬೆಳಿಗ್ಗೆ 6.30 ಗಂಟೆಯಿಂದ ಬೆಳಿಗ್ಗೆ 8.30 ಗಂಟೆ ಮಧ್ಯೆ ಶ್ರೀನಗರದಲ್ಲಿರುವ ಅವರ ವಾಸದ ಮನೆಯಲ್ಲಿನ ರೂಂ ನಲ್ಲಿ ವೇಲ್ ನಿಂದ ಪ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *