ದಿನದ ಅಪರಾಧಗಳ ಪಕ್ಷಿನೋಟ 16ನೇ ಸೆಪ್ಟೆಂಬರ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 15.09.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 

– ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಾಮು ಬಿನ್ ಪೆರುಮಳಪ್ಪ, ಕಂಗಾಂಡ್ಲಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಅಕ್ಕ ಜ್ಯೋತೆಮ್ಮ ರವರ ಮಗನಾದ ನಾಗೇಶ್ @ ಮುರುಳಿ 22 ವರ್ಷ ರವರು ದಿನಾಂಕ:14.09.2020 ರಂದು ಬೆಳಿಗ್ಗೆ 9.45 ಗಂಟೆಯಲ್ಲಿ ದ್ವಿಚಕ್ರ ವಾಹನ ಸಂಖ್ಯೆ KA-16-EE-9012 TVS SUPER XL  ರಲ್ಲಿ ಕಂಗಾಂಡ್ಲಹಳ್ಳಿ ಗೇಟ್ ಸಮೀಪ  ಹೋಗುತ್ತಿದ್ದಾಗ, ಕ್ಯಾಸಂಬಳ್ಳಿ ಕಡೆಯಿಂದ ಕಾರು ಸಂಖ್ಯೆ KA-51-ME-9314 ರ ಚಾಲಕ ಕಾರನ್ನು ಅತಿವೇಗ ಮತ್ತು ಅಜಾಗೂರೂಕತೆಯಿಂದ ಚಲಾಯಿಸಿಕೊಂಡು ಬಂದು ನಾಗೇಶ್ @ ಮುರುಳಿ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಪಡಿಸಿದ ಪ್ರಯುಕ್ತ ನಾಗೇಶ ರವರಿಗೆ ರಕ್ತಗಾಯಗಳಾಗಿರುತ್ತದೆ.

 

– ಹಲ್ಲೆ : 02

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಜಾಫರ್‌ ಷರೀಫ್ ಬಿನ್ ಶಾನ್ ಬಾಷಾ, ಫಿಶ್‌ ಲೈನ್, ಉರಿಗಾಂ ಪೇಟೆ, ಕೆ.ಜಿ.ಎಫ್ ರವರು ದಿನಾಂಕ:-08.09.2020 ರಂದು ಸಂಜೆ 6:30 ಗಂಟೆಯಲ್ಲಿ ಆಶೋಕನಗರದ ರೆಡ್ಡಿ ಪೀಲ್ದ್ ಬಳಿ ಬರುತ್ತಿದ್ದಾಗ ಅಪ್ಜಲ್ ಮತ್ತು ಅಕ್ಬರ್   ರವರು  ಆಟೋ ನಿಲ್ಲಿಸಲು ಹೇಳಿದ್ದು, ದೂರುದಾರರು ಆಟೋ ನಿಲ್ಲಿಸಿ ಇಳಿದಾಗ “ಪೋನ್ ಮಾಡಿದರೆ ತೆಗೆಯಲ್ಲಾ ಏಕೇ” ಎಂದು ಹೇಳಿ ಕೆಟ್ಟಮಾತುಗಳಿಂದ ಬೈದು, ಕಬ್ಬಿಣದ ರಾಡ್ ನಿಂದ ಹೊಡೆದು ನೋವುಂಟುಪಡಿಸಿ, ಪ್ರಾಣ ಬೆದರಿಕೆ ಹಾಕಿರುತ್ತಾರೆ.

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಆಂಜಪ್ಪ ಬಿನ್ ನರಸಿಂಹಪ್ಪ, ಗರುಡಕೆಂಪನಹಳ್ಳಿ ಗ್ರಾಮ, ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ, ದಿನಾಂಕ 14.09.2020 ರಂದು ಸಂಜೆ 7.00 ಗಂಟೆಯಲ್ಲಿ ಗರುಡಕೆಂಪನಹಳ್ಳಿ ಗ್ರಾಮದ ರಚ್ಚೆ ಕಟ್ಟೆಯ ಬಳಿ ನಾಗರಾಜ್ ರವರು  ಮುರುಗೇಶ್ ರವರೊಂದಿಗೆ ಗಲಾಟೆ ಮಾಡುತ್ತಿದ್ದಾಗ, ದೂರುದಾರರು ಅದನ್ನು ವಿಚಾರಿಸುತ್ತಿದ್ದಾಗ ನಾಗರಾಜ್‌ ದೂರುದಾರರಿಗೆ ಕೆಟ್ಟಮಾತುಗಳಿಂದ ಬೈದು, ಚಾಕುವಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

 

– ಇತರೆ :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.  ದಿನಾಂಕ 13.09.2020 ರಂದು ಮದ್ಯಾಹ್ನ 3.00 ಗಂಟೆಯಲ್ಲಿ ಕಾಮಂಡಹಳ್ಳಿ ಗ್ರಾಮದಲ್ಲಿ ಸೊಣ್ಣಪ್ಪ ಎಂಬುವರು ಮನೆಯ  ಹಿಂಭಾಗದಲ್ಲಿ ಯಾವುದೇ ಪರವಾನಿಗಿ ಇಲ್ಲದೆ ಮಧ್ಯಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದು, ಆರೋಪಿಯನ್ನು ಮತ್ತು ಸ್ಥಳದಲ್ಲಿದ್ದ 1) Haywards Cheers Whisky 90 ml ನ 9 ಮದ್ಯದ ಪಾಕೇಟ್ ಗಳು, ಎಂಟು ಪ್ಲಾಸ್ಟಿಕ್ ಲೋಟಗಳು, ಹತ್ತು ಖಾಲಿ ವಾಟರ್ ಪ್ಯಾಕೆಟ್ ಗಳು ಮತ್ತು ಬಿಸ್ಲೆರಿ ವಾಟರ್ ಬಾಟೆಲ್ ಗಳನ್ನು  ಶ್ರೀ. ರಾಮಕೃಷ್ಣಾರೆಡ್ಡಿ, ಹೆಚ್.ಸಿ 122 ರವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುತ್ತಾರೆ.

– ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಮನಷ್ಯ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ ಬಿನ್ ಗೋಪಾಲಪ್ಪ, ನೆರ್‍ನಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ತಂದೆ  ಗೋಪಾಲಪ್ಪ, 63 ವರ್ಷ ರವರು ದಿನಾಂಕ 25-05-2020 ರಂದು  ಬೆಳಿಗ್ಗೆ  9.00 ಗಂಟೆಯಲ್ಲಿ ಸಕ್ಕರೆ ಖಾಯಿಲೆಗೆ  ನಾಟಿ  ಔಷದಿ ಚಿಕಿತ್ಸೆಯನ್ನು  ಪಡೆದುಕೊಳ್ಳಲು  ದೇವನಹಳ್ಳಿಗೆ ಹೋಗಿ  ಬರುವುದಾಗಿ ಹೋದವರು ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ :  01

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರದ ಶ್ರೀ. ಜಾನ್ ಬಿನ್ ಆರೋಕ್ಯಸ್ವಾಮಿ, ಮಂಜುನಾಥನಗರ, ಉರಿಗಾಂಪೇಟೆ, ಕೆ.ಜಿ.ಎಫ್ ರವರ ಮಗಳು ಮಾರಿಯಾ ಜಾಸ್ಮೀನ್, 32 ವರ್ಷ ರವರು ಆಕೆಯ 05 ವರ್ಷದ ಮಗ ಗಂಡನ ಜೊತೆಯಲ್ಲಿ ಬೆಂಗಳೂರಿನಲ್ಲಿ ಇದ್ದು, 10 ತಿಂಗಳಾದರೂ ಬೆಂಗಳೂರಿಗೆ ಕರೆದುಕೊಂಡು ಹೋಗಲಿಲ್ಲವೆಂದು ಬೇಜಾರಿನಿಂದಲೂ ಅಥವಾ ಬೇರೆ ಇನ್ನೇವುದೂ ವಿಚಾರದಲ್ಲಿ ಮನಸ್ಸಿಗೆ ಬೇಜಾರುಮಾಡಿಕೊಂಡು ಮಾರಿಯಾ ಜಾಸ್ಮೀನ್ ರವರು ಮನೆಯ ಬೆಡ್ ರೂಂ ನ ಸಿಲೀಂಗ್ ಪ್ಯಾನ್ ಗೆ ಒಂದು ಸೀರೆಯಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ.

Leave a Reply

Your email address will not be published. Required fields are marked *