ದಿನದ ಅಪರಾಧಗಳ ಪಕ್ಷಿನೋಟ 16ನೇ ಆಗಸ್ಟ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ  15.08.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕೊಲೆ ಪ್ರಯತ್ನ :  01

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವೆಂಕಟರಾಮಪ್ಪ ಬಿನ್ ಪೆದ್ದಸುಬ್ಬಣ್ಣ, ಪಿ. ಗಡ್ಡೂರು ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರು ತಮ್ಮ ಸೋಮಶೇಖರ್‌, ಗ್ರಾಮಸ್ಥರಾದ ಎನ್. ಸುಬ್ರಮಣಿ, ಮುನಿವೆಂಕಟಪ್ಪ, ರಾಜೇಶ್ ರವರೊಂದಿಗೆ ದಿನಾಂಕ 14.08.2020 ರಂದು ಸಂಜೆ 07.00 ಗಂಟೆಗೆ ದೇವರ ಮರದ ಬಳಿ ಸ್ವಚ್ಚಗೊಳಿಸುತ್ತಿದ್ದಾಗ, ಪಿ. ಗಡ್ಡೂರು ಗ್ರಾಮದ ವಾಸಿಗಳಾದ ವೆಂಕಟರಾಮ,  ನಾರಾಯಣಪ್ಪ, ನಾಗರಾಜ್, ಮಂಜುನಾಥ ಹಾಗೂ ಶಂಕರಪ್ಪ ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ಕೈಗಳಲ್ಲಿ  ಕೋಲುಗಳನ್ನು ಹಿಡಿದುಕೊಂಡು ಬಂದು ದೂರುದಾರರೊಂದಿಗೆ ಜಗಳ ಮಾಡಿ, ಸದರಿ ಸ್ಥಳ ನಮ್ಮದ್ದು, ಪ್ರತಿ ವರ್ಷ ಹೇಳಿದರೂ, ನಿಮಗೆ ಅರಿವಿಲ್ಲದೇ ಬಂದು ಗಿಡ ನೆಟ್ಟಲು ಬರುತ್ತೀರ, ಪ್ರತಿಸಾಲ ಬಿಟ್ಟರೆ ಆಗುವುದಿಲ್ಲವೆಂದು, ನಿಮ್ಮನ್ನು ಕೊಲೆ ಮಾಡದೇ ಬಿಡುವುದಿಲ್ಲವೆಂದು ಬೈದು, ಕೈಗಳಿಂದ ಮತ್ತು ಕೋಲುಗಳಿಂದ ದೂರುದಾರರಿಗೆ ಮತ್ತು ಸೋಮಶೇಖರ್ ರವರಿಗೆ ಹೊಡೆದು ರಕ್ತಗಾಯಪಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ.

Leave a Reply

Your email address will not be published. Required fields are marked *