ದಿನದ ಅಪರಾಧಗಳ ಪಕ್ಷಿನೋಟ 16ನೇ ಜೂನ್ 2020

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿದಿನಾಂಕ 15.06.2020 ರಂದು  ದಾಖಲಾಗಿರುವಅಪರಾಧಪ್ರಕರಣಗಳವಿವರಗಳು.

– ದೊಂಬಿ : 01

ರಾಬರ್ಟ್‌‌ಸನ್‌‌ಪೇಟೆ ಪೊಲೀಸ್‌ ಠಾಣೆಯಲ್ಲಿ ದೊಂಬಿ ಪ್ರರಕಣ ದಾಖಲಾಗಿರುತ್ತದೆ. ದಿನಾಂಕ. 15.06.2020 ರಂದು ದೂರುದಾರರಾದ ಶ್ರೀ. ಅಜಯ್‌ ಬಿನ್‌ ಸಗಾಯರಾಜ್‌, ಅಂಬೇಡ್ಕರ್‌ ನಗರ ರಾಬರ್ಟ್‌‌ಸನ್‌‌ಪೇಟೆ ರವರು ನೀಡಿದ ದೂರಿನಲ್ಲಿ.  ದೂರುದಾರರಾದ ಅಜಯ್ ರವರಿಗೂ ಮತ್ತು ಆರೋಪಿಗಳಾದ ಅಪ್ಪು ಮತ್ತು ಇತರರಿಗೂ ದಿನಾಂಕ. 14.06.2020 ರಂದು ರಾತ್ರಿ 10.15 ಗಂಟೆಯಲ್ಲಿ ದೂರುದಾರರು ಆಂಗಡಿಗೆ ಹೋಗಿದ್ದಾಗ ಆರೋಪಿಗಳು ಅಜಯ್‌ರವರನ್ನು ತಡೆದು ಕೆಟ್ಟ ಮಾತುಗಳಿಂದ ಬೈದು ಗುಂಪು ಕಟ್ಟಿಕೊಂಡು ಜಗಳ ಮಾಡಿ  ಚಾಕುವಿನಿಂದ ಅಜಯ್ ರವರ ತಲೆಯ ಮುಂಭಾಗ ಮತ್ತು ಬೆನ್ನಿನ ಮೇಲೆ ಹೊಡೆದು ರಕ್ತ ಗಾಯ ಪಡಿಸಿ ಸಾಯಿಸುವುದಾಗಿ ಪ್ರಾಣ ಬೆದರಿಕೆ ಹಾಕಿರುತ್ತಾರೆಂದೂ ದೂರು.

 

– ಹಲ್ಲೆ: 01

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಅರವಿಂದ್ ಕುಮಾರ್‌ ಬಿನ್ ಕಣ್ಣನ್ @ ಮುರುಗೇಶ್‌, ಮಾರಿಕುಪ್ಪಂ ಕೆ.ಜಿ.ಎಫ್ ರವರು ಪ್ರಾಂಕ್ ಅಂಡ್ ಕೋ ಬಳಿ ಇರುವ ಸುಭಾಶ್ ಚಂದ್ರ ಬೋಸ್ ಸ್ಟಾಚ್ಯೂ ಬಳಿ ನಡೆದುಕೊಂಡು ಹೋಗುತ್ತಿದ್ದಾಗ, ಭಾಷಾ ಅಂಗಡಿ ಬಳಿ ಕುಳಿತು ಕೊಂಡಿದ್ದ ಆರೋಪಿಗಳಾದ ಪ್ರವೀಣ್‌, ಯಶ್ವಂತ್‌ ಮತ್ತು ಲಿಯಾನ್‌ ಭಾಸ್ಕರ್‌‌  ದೂರುದಾರರನ್ನು ಅಡ್ಡಗಟ್ಟಿ ಮನೆಯ ಮೇಲೆ ಹಾಕಿರುವ ಕೇಸನ್ನು ವಾಪಸ್ಸು ತೆಗೆದುಕೊಳ್ಳುವಂತೆ ಗಲಾಟೆ ಮಾಡಿ ಚಾಕುಗಳಿಂದ ಹೊಡೆದುಯ ರಕ್ತಗಾಯಪಡಿಸಿ, ಕೆಟ್ಟ ಮಾತುಗಳಿಂದ  ಬೈದು, ಪ್ರಾಣ ಬೆದರಿಕೆ ಹಾಕಿದ್ದು, ಅಲ್ಲಿಗೆ ಬಂದ ದೂರುದಾರರ ಅಣ್ಣ ಸೆಂದಿಲ್ ಕುಮಾರ್ ರವರಿಗೆ ಕಬ್ಬಿಣದ ಪೈಪು ಮತ್ತು ಚಾಕುಗಳಿಂದ ಹೊಡೆದು  ಗಾಯಪಡಿಸಿರುತ್ತಾರೆ.

– ವ್ಯಕ್ತಿಕಾಣೆಯಾಗಿರುವಪ್ರಕರಣಗಳು: 02

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಜ್ಯೋತಿ ಕೊಂ ನಾರಾಯಣಸ್ವಾಮಿ, ಟಿ ಗೊಲ್ಲಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು  ರವರ  ಮಗಳಾದ ಎನ್ ಕವಿತಾ, 19 ವರ್ಷ ರವರು ದಿನಾಂಕ-15-06-2020 ರಂದು ಬೆಳಿಗ್ಗೆ 7.30 ಗಂಟೆಯಲ್ಲಿ   ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಮನೆಗೆ ಬಾರದೆ ಕಾಣೆಯಾಗಿರುತ್ತಾರೆ.

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹುಡುಗಿ ನಾಪತ್ತೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ರಮೇಶ್‌ ರಾವ್‌ ಬಿನ್ ವೆಂಕೋಬರಾವ್‌, ಮರಾಠಹೊಸಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರ ಮಗಳಾದ ಮೇಘನಾಶ್ರೀ,  19 ವರ್ಷ ರವರು ದಿನಾಂಕ 15.06.2020 ರಂದು ಬೆಳಿಗ್ಗೆ 10.00 ಗಂಟೆಯಿಂದ ಮಧ್ಯಾಹ್ನ 12.30 ಗಂಟೆಯ ಮದ್ಯೆ ಮನೆಯಿಂದ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾರೆ.

 

Leave a Reply

Your email address will not be published. Required fields are marked *