ದಿನದ ಅಪರಾಧಗಳ ಪಕ್ಷಿನೋಟ 16ನೇ ಮೇ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 15.05.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ಇತರೆ : 01

ದಿನಾಂಕ 15.05.2020  ರಂದು ಬೆಳಿಗ್ಗೆ  7.00  ಗಂಟೆಯಲ್ಲಿ  ಈ ಕೇಸಿನ ದೂರುದಾರರಾದ ಮೊಹ್ಮದ್ ರಫಿ, ರಾಜ್‌ಪೇಟೆ ರಸ್ತೆ, ಕ್ಯಾಸಂಬಳ ಹೋಬಳಿ ರವರ ತಂದೆ  ಅನ್ವರ್  ಬಾಷ, ೫೦ ವರ್ಷ ರವರು ತಮ್ಮ ಮನೆಯ ಮುಂದೆ ವಯಸ್ಸಾದ ಹೆಂಗಸು ಮೃತಪಟ್ಟಿದ್ದನ್ನು ಕಂಡು ಭಯಪಟ್ಟು, ಇವರು ಸುಮಾರು 1 ½   ತಿಂಗಳಿಂದ  ಯಾರನ್ನಾದರೂ ನೋಡಿದರೆ ಭಯ  ಪಡುತ್ತಿದ್ದರು.  ಮನೆಯ ಮುಂದೆ ಆದ ಸಾವನ್ನು  ನೋಡಿ ಭಯ ಭೀತರಾಗಿ ಮನೆಯಲ್ಲಿ ಈರುಳ್ಳಿ ಕೊಯ್ಯುತ್ತಿದ್ದ ಚಾಕುವನ್ನು ತೆಗೆದುಕೊಂಡು ತಂದೆ ಅನ್ವರ್  ಬಾಷ  ರವರು ಕತ್ತನ್ನು ಕೋಯ್ದುಕೊಂಡು   ಆತ್ಮಹತ್ಯೆಗೆ  ಪ್ರಯತ್ನಿಸಿದ್ದು,  ತಕ್ಷಣ ತಮ್ಮ ಗ್ರಾಮದ  ರಾಮಕೃಷ್ಣಪ್ಪ   ಎಂಬುವವರ  ಕಾರಿನಲ್ಲಿ  ಚಿಕಿತ್ಸೆಯ  ಬಗ್ಗೆ ತಂದೆ ಅನ್ವರ್  ಬಾಷ ರವರನ್ನು  ಕುಪ್ಪಂ   ಶ್ರೀ  ಪ್ರಿಯಾ ನರ್ಸಿಂಗ್   ಹೋಂ  ನಲ್ಲಿ ಚಿಕಿತ್ಸೆಗೆ  ದಾಖಲಿಸಿದ್ದು,   ಪಿರ್ಯಾದಿದಾರರ  ತಂದೆ  ಅನ್ವರ್  ಬಾಷ ರವರು  ಪ್ರಸ್ತುತ  ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ  ಇರುತ್ತಾರೆಂದೂ ದೂರು ನೀಡಿರುತ್ತಾರೆ.

– ಅಸ್ವಾಭಾವಿಕ ಮರಣ ಪ್ರಕರಣ : 01

    ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪಾರ್ವತಮ್ಮ, ವಾಟರ್‌ ವರ್ಕ್ ಕ್ವಾಟ್ರಸ್‌, ರಾಭರ್ಟ್‌‌ಸನ್‌ಪೇಟೆ, ಕೆ.ಜಿ.ಎಫ್ ರವರ ಗಂಡನಾದ ಜಿ.ಮಂಜುನಾಥ, 57 ವರ್ಷ, ಕರ್ನಾಟಕ ನೀರು ಸರಬರಾಜು ಮಂಡಳಿಯಲ್ಲಿ ಸಹಾಯಕನಾಗಿ(ಹೆಲ್ಪರ್) ಕೆಲಸ ಮಾಡಿಕೊಂಡಿದ್ದು, ಹಾಲಿ ಕೇಂದ್ರ ಕಛೇರಿ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದು ಪ್ರತಿ ದಿನ ಹೋಗಿ ಬರುತ್ತಿದ್ದು ಈಗ್ಗೆ 3 ತಿಂಗಳ ಹಿಂದೆ ಪಿರ್ಯಾದಿ ಗಂಡನಿಗೆ ಎದೆ ನೋವು ಕಾಣಿಸಿಕೊಂಡು ಕೆ.ಜಿ.ಎಫ್ ನಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿರುತ್ತಾರೆ. ದಿನಾಂಕ. 15.05.2020 ರಂದು ಬೆಳಿಗ್ಗೆ 6.00 ಗಂಟೆಗೆ ಅತಿಯಾಗಿ ಎದೆ ನೋವು ಬಂದಿದ್ದು ಕೂಡಲೇ ಕೆ.ಜಿ.ಎಫ್ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಪಡಿಸಿಕೊಂಡು ಪಿರ್ಯಾದಿ ಗಂಡನನ್ನು ಮನೆಗೆ ಕರೆದುಕೊಂಡು ಹೋಗಿ ಅದಾದ ಬಳಿಕ ಸ್ವಲ್ಪ ಸಮಯದ ನಂತರ ಪಿರ್ಯಾದಿ ಗಂಡನಿಗೆ ಪುನಃ ಎದೆ ನೋವು ಕಾಣಿಸಿಕೊಂಡು ಉಸಿರಾಡಲು ತೊಂದರೆಯಾಗಿದ್ದರಿಂದ ಪಿರ್ಯಾದಿ ಮಾತನಾಡಿಸಿದರು ಮಾತನಾಡದೆ ಇದ್ದಿದ್ದರಿಂದ ಗಾಬರಿಗೊಂಡು ಕೂಡಲೇ ಕೆ.ಜಿ.ಎಫ್ ಜನರಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದು ವ್ಶೆದ್ಯರ ಬಳಿ ತೋರಿಸಿದ್ದು ಮಧ್ಯಾಹ್ನ 12.45 ಗಂಟೆಗೆ ವೈದ್ಯರು ಪರೀಕ್ಷಿಸಿ ಮಂಜುನಾಥ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *