ದಿನದ ಅಪರಾಧಗಳ ಪಕ್ಷಿನೋಟ 16ನೇ ಏಪ್ರಿಲ್‌ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 15.04.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

– ರಸ್ತೆ ಅಪಘಾತಗಳು : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಶೋಭಾ ಕೊಂ ಸುರೇಶ್‌, ಭಟ್ರಹಳ್ಳಿ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಗಂಡ ಸುರೇಶ್ ರವರು ದಿನಾಂಕ:14.04.2020 ರಂದು ಸಂಜೆ 6.00 ಗಂಟೆಯಲ್ಲಿ ಬೇತಮಂಗಲ ಕ್ಯಾಸಂಬಳ್ಳಿ ರಸ್ತೆಯ ವಿಜಯಾ ಬಾರ್ ಮುಂಬಾಗದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ, ಕ್ಯಾಸಂಬಳ್ಳಿ ಕಡೆಯಿಂದ KA-51-T-4970 ಟ್ರ್ಯಾಕ್ಟರನ್ನು ಕೋಲಾರ ತಾಲ್ಲೂಕು ಶಿಲ್ಲಂಗೆರೆ ಗ್ರಾಮದ ವಾಸಿ. ಪವನ್‌ ರವರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸುರೇಶ್ ರವರಿಗೆ ಡಿಕ್ಕಿ ಪಡಿಸಿದ ಪ್ರಯುಕ್ತ ಸುರೇಶ್‌ ರವರಿಗೆ ಗಾಯಗಳಾಗಿರುತ್ತವೆ.

 

– ಹಲ್ಲೆ : 01

ಬೆಮಲ್ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ  ದೂರುದಾರರಾದ ಶ್ರೀ ಮುನಿಯಪ್ಪ ಬಿನ್ ಲೇಟ್ ನಂಜಪ್ಪ @ ದೊಡ್ಡಣ್ಣ, ದೊಡ್ಡೂರು ಗ್ರಾಮ ಬಂಗಾರಪೇಟೆ ರವರು ದಿನಾಂಕ: 14-04-2020 ರಂದು ರಾತ್ರಿ ಸುಮಾರು 8-30 ಗಂಟೆಯಲ್ಲಿ ದೊಡ್ಡೂರು ಗ್ರಾಮದಲ್ಲಿರುವ ಅಂಗಡಿಗೆ ಹೋಗಿ ಅವರ ಮನೆಯ ಬಳಿ ಬಂದಾಗ, ಅದೇ ಗ್ರಾಮದ ಆರೋಪಿ ಬೈಚಪ್ಪ  ದೂರುದಾರರ ಮನೆಯ ಬಳಿ ಇದ್ದಾಗ, ದೂರುದಾರರು ಆರೋಪಿಯನ್ನು “ನೀನು ಇಷ್ಟು ಹೊತ್ತಿನಲ್ಲಿ ನಮ್ಮ ಮನೆಯ ಬಳಿ ಇರುವುದನ್ನು ಯಾರಾದರೂ ನೋಡಿದರೆ ಬೇರೆ ರೀತಿಯಲ್ಲಿ ತಿಳಿದುಕೊಳ್ಳುತ್ತಾರೆ ಇಲ್ಲಿಂದ ಹೊರಟು ಹೋಗು” ಎಂದು ಹೇಳಿದ್ದಕ್ಕೆ ಆರೋಪಿ ಬೈಚಪ್ಪ ಇದನ್ನು ಕೇಳುವುದಕ್ಕೆ ನೀನ್ಯಾರು ಎಂದು ಕೆಟ್ಟ ಮಾತಗಳಿಂದ ಬೈದು ಕೈಗಳಿಂದ ಕೆನ್ನೆಯ ಮೇಲೆ ಹೊಡೆದು, ಅಲ್ಲಿಯೇ ಇದ್ದ ಒಂದು ಮರದ ರಿಪೀಸ್ ನಿಂದ ದೂರುದಾರರ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯಪಡಿಸಿರುತ್ತಾನೆ.

Leave a Reply

Your email address will not be published. Required fields are marked *