ದಿನದ ಅಪರಾಧಗಳ ಪಕ್ಷಿನೋಟ 16ನೇ ಮಾರ್ಚ್ 2020

ಕೆ.ಜಿ.ಎಫ್ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ 15.03.2020 ರಂದು ದಾಖಲಾಗಿರುವ  ಅಪರಾಧ ಪ್ರಕರಣಗಳ ವಿವರಗಳು.

 

– ರಸ್ತೆ ಅಪಘಾತಗಳು : 02

ಚಾಂಪಿಯನ್‌ರೀಫ್ಸ್‌ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನರೇಂದ್ರ ಬಿನ್ ತಿಮ್ಮರಾಯಪ್ಪ, ಅಗ್ರಹಾರಂ ಗ್ರಾಮ, ಹೊಸೂರು ತಾಲ್ಲೂಕು, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು ರವರು ದಿನಾಂಕ 15-03-2020 ರಂದು ಟೆನೆಂಟ್ ಸರ್ಕಲ್ ಬಳಿ  ಆಟೋ ಚಾಲಕನ ಬಳಿ ವೆಂಗಸಂದ್ರ ಗ್ರಾಮ್ಕಕೆ ಹೋಗಲು ದಾರಿಕೆಳುತ್ತಿರುವಾಗ, ಕೆಜಿಎಫ್ ಎಸ್.ಪಿ ಆಪೀಸ್ ಕಡೆಯಿಂದ  ಮಾರುತಿ ವ್ಯಾನ್ ವಾಹನ ನಂ KA-05. MQ 8564 ರ ಚಾಲಕ ತನ್ನ ವಾಹನವನ್ನು  ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ದೂರುದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ದೂರುದಾರರಿಗೆ  ರಕ್ತಗಾಯಗಳಾಗಿರುತ್ತದೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ವಿನ್ಸೆಂಟ್‌ ಮದನ್‌ ಬಿನ್ ಅಮಲನಾಧನ್‌, ವಿಜಯನಗರ, ಬಂಗಾರಪೇಟೆ ರವರು ನೀಡಿದ ದೂರಿನಲ್ಲಿ, ದಿನಾಂಕ 15.03.2020 ರಂದು ಮದ್ಯಾಹ್ನ 3.15 ಗಂಟೆಯಲ್ಲಿ ದೂರುದಾರರು ಟ್ರಿಬರ್ ಕಾರ್ ಸಂಖ್ಯೆ ಕೆಎ-01-ಎಂಟಿ-8847 ರಲ್ಲಿ ಲಿಯೋ ಅರವಿಂದ್ ಕುಮಾರ್, ವೀಣಾ ಪೀಟರ್ & ರೇಖಾ ಹಾಗೂ ಚಿಕ್ಕ ಮಗು ಲಿಖಿತ ರವರನ್ನು ಕುಳ್ಳರಿಸಿಕೊಂಡು ಕೆಜಿಎಫ್ ನಿಂದ ಬಂಗಾರಪೇಟೆ ಕಡೆಗೆ ಬರಲು ಕಾರ್ ನ್ನು  ದೂರುದಾರರು ಚಲಾಯಿಸಿಕೊಂಡು ನೇರಳೆಕೆಟೆ ಗೇಟ್ ಸಮೀಪ ಬರುತ್ತಿದ್ದಾಗ, ಸದರಿ ಕಾರ್ ನ ಹಿಂಬದಿಯಲ್ಲಿ ಕಾರ್ ಸಂಖ್ಯೆ ಕೆಎ-03-ಎಜಿ-8209 ನ್ನು ಅದರ ಚಾಲಕ ಅತಿವೇಗ & ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ದೂರುದಾರರ ಕಾರ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರ್ ಜಕ್ಕಂಗೊಳಿಸಿ, ಕಾರ್ ನಿಲ್ಲಿಸದೇ ಹೊರಟು ಹೋಗಿ, ಸ್ವಲ್ಪ ದೂರದಲ್ಲಿ ಪ್ಲಾಸ್ಟಿಕ್ ಪ್ಯಾಕ್ಟರಿ ಬಳಿ ಬಂಗಾರಪೇಟೆಯಿಂದ ಕೆಜಿಎಫ್ ಕಡೆಗೆ ಹೋಗುತ್ತಿದ್ದ ಕಾರ್ ಸಂಖ್ಯೆ ಕೆಎ-04-ಡಿ-7266 ಗೆ ಡಿಕ್ಕಿಪಡಿಸಿ ಕಾರ್ ನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರುತ್ತಾನೆ ಹಾಗೂ ಸೋರೇಗೌಡನಕೋಟೆ ಬಳಿ ಮತ್ತು ನೇರಳೆಕೆರೆ ಗೇಟ್ ಬಳಿ ದ್ವಿಚಕ್ರ ವಾಹನಗಳಿಗೆ ಡಿಕ್ಕಿಪಡಿಸಿ, ಅದರ ಸವಾರರಿಗೆ ಗಾಯಗಳನ್ನುಂಟುಮಾಡಿರುತ್ತಾನೆ.

 

– ಅಸ್ವಾಭಾವಿಕ ಮರಣ ಪ್ರಕರಣ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಲ್ಲೇಶ್ ಬಿನ್ ಬೀರಪ್ಪ,  ಚಿಗರಲೂರು ಗ್ರಾಮ ರವರ ತಂದೆ ಬೀರಪ್ಪ, 62 ವರ್ಷ, ರವರು ದಿನಾಂಕ 15.03.2020 ರಂದು ಬೆಳಿಗ್ಗೆ 6.30 ಗಂಟೆಯಲ್ಲಿ ಬೊಪ್ಪನಹಳ್ಳಿ ಗ್ರಾಮದ ಸರ್ವೆ ನಂ 8/ಪಿ-2 ರಲ್ಲಿ ರೇಷ್ಮೆ ಸೊಪ್ಪನ್ನು ಕೊಯ್ಯುತ್ತಿದ್ದಾಗ, ಆನೆಗಳ ಗುಂಪು ಬರುತ್ತಿದ್ದನ್ನು ನೋಡಿ  ಓಡಿ ಹೋಗಲು ಸಾದ್ಯವಾಗದೇ ಅಲ್ಲಿಯೇ ಅವಿತುಕೊಂಡಾಗ, ಆನೆ ಬೀರಪ್ಪ ರವರನ್ನು ಸೊಂಡಲಿನಿಂದ ಸುತ್ತಿ ಮೇಲಕ್ಕೆತ್ತಿ ಕಲ್ಲಿನ ಮೇಲೆ ಕುಕ್ಕಿದ್ದರಿಂದ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ದಿನಾಂಕ 15.03.2020 ರಂದು ಬೆಳಿಗ್ಗೆ 10.20 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ.

ರಾಬರ್ಟ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗಣೇಶ್‌ ಬಿನ್ ಪಾಪಣ್ಣ, ಕ್ಯಾಸಂಬಳ್ಳ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಮಗನಾದ ಲಿಖಿತ್, 3 ವರ್ಷ ರವರಿಗೆ ದಿನಾಂಕ.14.03.2020 ರಂದು ರಾತ್ರಿ ಜ್ವರ ಬಂದಿದ್ದು, ದಿನಾಂಕ.15.03.2020 ರಂದು ಜ್ವರ ಇದ್ದರಿಂದ ಮದ್ಯಾಹ್ನ 2-30 ಗಂಟೆಗೆ ಪಾರಾಂಡಹಳ್ಳಿಯಲ್ಲಿರುವ ಸುನೀಲ್ ವೈದ್ಯರ  ಬಳಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಚಿಕಿತ್ಸೆ ನೀಡಿ ಕಳುಹಿಸಿದ್ದು, ಜ್ವರ ನಿಲ್ಲದ ಕಾರಣ ಸಂಜೆ 6-30 ಗಂಟೆಗೆ ಪುನಃ ಸುನೀಲ್ ವೈದ್ಯರ ಮನೆ ಬಳಿ ಹೋಗಿ ನೋಡಲಾಗಿ, ವೈದ್ಯರು ಎಲ್ಲೋ ಹೋಗಿದ್ದು, ಪೋನ್ ಮಾಡಲಾಗಿ 10 ನಿಮಿಷದಲ್ಲಿ ಬರುತ್ತೇನೆಂದು ಹೇಳಿದ್ದು, ನಂತರ ದೂರುದಾರರು ಮತ್ತು ಆತನ ಹೆಂಡತಿ 7-30 ಗಂಟೆಗೆ ಕೆ.ಜಿ.ಎಫ್ ಸರ್ಕಾರಿ ಆಸ್ವತ್ರೆಗೆ ಹೋದಾಗ ವೈದ್ಯರು ಲಿಖಿತ್‌ ಮಗುವನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *