ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ:15.01.2020 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.
– ಕನ್ನಕಳುವು : 01
ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವುಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕ್ಯಾಸಂಬಳ್ಳಿ ಗ್ರಾಮದ ವೃತ್ತದ ಬಳಿ ಇರುವ ಈ ಕೇಸಿನ ಪಿರ್ಯಾದಿದಾರರಾದ ಪ್ರದೀಪ್, ಕ್ಯಾಸಂಬಳ್ಳಿ ರವರ ವಾಸದ ಮನೆಯಲ್ಲಿ ರಸ್ತೆಗೆ ಹೊಂದುಕೊಂಡು ಅಂಗಡಿಗೆಂದು ನಿರ್ಮಿಸಿಕೊಂಡಿದ್ದ ಒಂದು ರೂಮ್ ಅನ್ನು ಇಂಡಿಯಾ ನಂಬರ್ ಒನ್ ಎ.ಟಿ.ಎಂ ಕಂಪನಿಗೆ ಬಾಡಿಗೆಗೆ ನೀಡಿದ್ದು, ಸದರಿ ಕಂಪನಿಯವರು ಆ ರೂಮಿನಲ್ಲಿ ಇಂಡಿಯಾ ನಂಬರ್ ಒನ್ ಕಂಪನಿಯ ಎ.ಟಿ.ಎಂ ಮೆಷಿನ್ ಅನ್ನು ಇಟ್ಟಿದ್ದು, ದಿನಾಂಕ 14/15.01.2020 ರಂದು ಮದ್ಯ ರಾತ್ರಿ ಸುಮಾರು 2.45 ಗಂಟೆಯಲ್ಲಿ ಎ.ಟಿ.ಎಂ. ಮೆಷನ್ ಇರುವ ರೂಮಿನ ಕಡೆ ಏನೋ ಗಟ್ಟಿಯಾಗಿ ಹೊಡೆಯುತ್ತಿರುವ ಶಬ್ದ ಕೇಳಿ ಬಂದಿದ್ದು, ಮನೆಯಲ್ಲಿ ಮಲಗಿದ್ದ ಪಿರ್ಯದಿದಾರರು ಹೊರಗೆ ಬರಲು ತಮ್ಮ ಮನೆಯ ಗೇಟ್ ಬಳಿ ಬಂದಾಗ ಯಾರೋ 03-04 ಜನ ವ್ಯಕ್ತಿಗಳು ಎ.ಟಿ.ಎಂ ಮುಂಭಾಗ ನಿಂತಿದ್ದರೆಂದೂ, ಅವರ ಪಕ್ಕದಲ್ಲಿ ಒಂದು ಇನೋವ ಕಾರ್ ಸಹ ಇತ್ತೆಂದೂ. ಅವರ ಪೈಕಿ ಒಬ್ಬನ ಕೈಯಲ್ಲಿ ಯಾವುದೋ ಒಂದು ಆಯುದ ಇದ್ದು, ಅವರು ಪಿರ್ಯಾದಿದಾರರನ್ನು ನೋಡಿ ತರಾತುರಿಯಲ್ಲಿ ಇನೋವ ಕಾರ್ ಅತ್ತಿಕೊಂಡು ರಾಜಪೇಟೆ ರಸ್ತೆ ಕಡೆಗೆ ಜೋರಾಗಿ ಹೊರಟು ಹೋದರೆಂದೂ ನಂತರ ಪಿರ್ಯಾದಿದಾರರು ಎ.ಟಿ.ಎಂ ಬಳಿ ಹೋಗಿ ನೋಡಲಾಗಿ ಯಾರೋ ದುಷ್ಕರ್ಮಿಗಳು ಎ.ಟಿ.ಎಂ ಮೆಷಿನ್ ಅನ್ನು ಗ್ಯಾಸ್ ಕಟರ್ ನಿಂದ ಕಟ್ ಮಾಡಿ, ಎ.ಟಿ.ಎಂ ಮೆಷಿನ್ ನ ಸೇಪ್ಟಿ ಡೋರ್ ತೆಗೆದು, ಅದರಲ್ಲಿರುವ ಹಣವನ್ನು ಕಳುವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತೆಂದೂ ದೂರು ನೀಡಿರುತ್ತಾರೆ. ಇಂಡಿಯಾ ನಂಬರ್ ಒನ್ ಕಂಪನಿಯ ಎ.ಟಿ.ಎಂ ಅಧಿಕಾರಿಗಳು ಬಂದು ಪರಿಶೀಲಿಸಿದ ನಂತರ ಅದರಲ್ಲಿ ಎಷ್ಟು ಹಣ ಇತ್ತೆಂದು ತಿಳಿಯಬೇಕಾಗಿರುತ್ತದೆ.
– ಸಾಧಾರಣ ಕಳ್ಳತನ : 01
ಬೇತಮಂಗಲ ಪೊಲೀಸ್ ಠಾಣೆಯಲ್ಲಿ ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ-06-01-2020 ರಂದು ಸಂಜೆ ೫.೦೦ ಗಂಟೆಗೆ ಈ ಕೇಸಿನ ದೂರುದಾರರಾದ ರಾಮಚಂದ್ರ, ಐಸಂದ ಮಿಟ್ಟೂರು ಗ್ರಾಮ ರವರು ದಿನಾಂಕ-06-01-2020 ರಂದು ತನ್ನ ದ್ವಿಚಕ್ರ ವಾಹನ TVS XL HEAVY DUTY NO KA-08-X-9403ನ್ನು ಬೇತಮಂಗಲದ ಉಮಾಶಂಕರ್ ಮೆಡಿಕಲ್ ಸ್ಟೋರ್ ಮುಂದೆ ನಿಲ್ಲಿಸಿ ನಂತರ ತನ್ನ ಮೊಬೈಲ್ ರಿಪೇರಿ ಮಾಡಿಸಿ, ಮನೆಗೆ ತರಕಾರಿ ತೆಗೆದುಕೊಂಡು ನಂತರ ಗ್ರಾಮಕ್ಕೆ ವಾಪಸ್ಸು ಹೋಗಲು ಸಂಜೆ 6.45 ಗಂಟೆಯಲ್ಲಿ ತಾನೂ ದ್ವಿಚಕ್ರವನ್ನು ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಲಾಗಿ ದ್ವಿಚಕ್ರ ವಾಹನ ಕಾಣಿಸದೆ ಇದ್ದು ಅಂದಿನಿಂದ ತನ್ನ ದ್ವಿಚಕ್ರ ವಾಹನವನ್ನು ಬೇತಮಂಗಲ ಸುತ್ತಮುತ್ತ, ಮುಳಬಾಗಿಲು, ಕೋಲಾರ ಕೆಜಿಎಪ್, ವಿ.ಕೋಟೆ ಕಡೆ ಹುಡುಕಲಾಗಿ ಪತ್ತೆಯಾಗದ ಕಾರಣ ತಡವಾಗಿ ದೂರು ನೀಡುತ್ತಿದ್ದು ಸುಮಾರು 35.000 ರೂ ಬೆಲೆ ಬಾಳುವ ತನ್ನ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂದು ದೂರು ನೀಡಿರುತ್ತಾರೆ.