ದಿನದ ಅಪರಾಧಗಳ ಪಕ್ಷಿನೋಟ 16ನೇ ಡಿಸೆಂಬರ್‌ 2019

– ಕೊಲೆಪ್ರಯತ್ನ: 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮಂಜುನಾಥ ಬಿನ್ ವೆಂಕಟಮುನಿಯಪ್ಪ, ಕೀಲುಕೊಪ್ಪ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 15.12.2019 ರಂದು ಮದ್ಯಾಹ್ನ 2-30 ಗಂಟೆಗೆ  ವಸಂತ್‌ಕುಮಾರ್‌ ರವರು ಮಕ್ಕಳನ್ನು ಮನೆಯಿಂದ ಹೊರಗೆ ಹಾಕಿ ಮನೆಗೆ ಬಿಗವನ್ನು ಹಾಕಿದ್ದಿದ್ದನ್ನು ಕಂಡು ಕೇಳಿದ್ದಕ್ಕೆ, ವಸಂತ್‌ ಕುಮಾರ್‌ ಕೆಟ್ಟ ಮಾತುಗಳಿಂದ ಬೈದು, ಕೈಗಳಿಂದ  ಮತ್ತು ಕಬ್ಬಿಣದ ರಾಡಿನಿಂದ ಹೊಡೆದು ರಕ್ತಗಾಯ ಪಡಿಸಿ ಪ್ರಾಣ ಬರದರಿಕೆ ಹಾಕಿರುತ್ತಾನೆ.

 

– ರಸ್ತೆಅಪಘಾತಗಳು : 02

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ನರೇಂದ್ರ ಬಾಬು ಬಿನ್ ವೆಂಕಟರಾಮೇಗೌಡ, ಅಂಜನಾಪುರ, ಬೆಂಗಳೂರು ರವರ ತಂದೆ ವೆಂಕಟರಾಮೇಗೌಡ ಮತ್ತು ತಾಯಿ ಶ್ರೀಮತಿ ಮುನಿರತ್ನಮ್ಮ ರವರು ಆಕ್ಸಿಸ್ ದ್ವಿಚಕ್ರವಾಹನ ಸಂಖ್ಯೆ ಕೆಎ-೦5 ಜೆಜೆ- 7039 ರಲ್ಲಿ ಕ್ಯಾಸಂಬಳ್ಳಿ ಮಡಿವಾಳ ರಸ್ತೆ ಮದ್ಯ ನಿಂಬೆ ತೋಪಿನ ಬಳಿ ಹೋಗುತ್ತಿದ್ದಾಗ, ಕ್ಯಾಸಂಬಳ್ಳ ಕಡೆಯಿಂದ ಟೆಂಪೋ ಸಂಖ್ಯೆ:ಎ.ಪಿ-27ಯು-8488 ರ ಚಾಲಕನು ಟೆಂಪೋವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವೆಂಕಟರಾಮೇಗೌಡ ರವರು ಚಲಾಯಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಹಿಂಬದಿಯಿಂದ  ಡಿಕ್ಕಿ ಹೊಡೆದ ಪ್ರಯುಕ್ತ ವೆಂಕಟರಾಮೇಗೌಡ ಮತ್ತು ಮುನಿರತ್ನಮ್ಮ ರವರು  ವಾಹನ ಸಮೇತ ಕೆಳಕ್ಕೆ ಬಿದ್ದಾಗ, ವೆಂಕಟರಾಮೇಗೌಡ ರವರಿಗೆ ಎದೆಯ ಮೇಲ್ಬಾಗದಲ್ಲಿ ಟೆಂಪೋವಿನ ಚಕ್ರ ಹರಿದು ಭಾರಿ ರಕ್ತಗಾಯವಾಗಿ ಮೃತಪಟ್ಟಿದ್ದು, ಮುನಿರತ್ನಮ್ಮ ರವರಿಗೆ ತಲೆಯ ಮೇಲ್ಬಾಗದಲ್ಲಿ ಎಡ ಕಿವಿ ಮತ್ತು ಎಡ ಕಣ್ಣಿನ ಬಳಿ ರಕ್ತಗಾಯವಾಗಿರುತ್ತೆ.

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದರರಾದ ಶ್ರೀ. ಸೆಂಥಿಲ್‌ ಕುಮಾರ್‌ ಬಿನ್ ರಾಮು, ರಾಮೂರ್ತಿನಗರ, ಬೆಂಗಳೂರು ರವರು ದಿನಾಂಕ 15-12-2019 ರಂದು ಸಂಜೆ 5-30 ಗಂಟೆಯಲ್ಲಿ ಮಾರುತಿ ಸೆಲೋರಿಯಾ ಕಾರ್ ಸಂಖ್ಯೆ KA03-NA.0294 ರಲ್ಲಿ ಕೆ.ಜಿ.ಎಫ್-ಬಂಗಾರಪೇಟೆ ಮುಖ್ಯರಸ್ತೆ ಬೆಮಲ್ ಕಾರ್ಖಾನೆಯ ಸಾಲ್ವೇಜ್ ಪ್ರದೇಶದ ಸಮೀಪ ಬಂಗಾರಪೇಟೆ ಕಡೆಗೆ ಹೋಗುತ್ತಿದ್ದಾಗ, ಆರೋಪಿ ಅವಿನಾಶ್ ಮ್ಯಾಥ್ಯೂವ್ ಎಂಬುವನು ಟಿ.ವಿ.ಎಸ್. ವೀಗೊ ದ್ವಿಚಕ್ರ ವಾಹನ ಸಂಖ್ಯೆ KA08-Q.8821 ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ದೂರುದಾರರ ಕಾರಿಗೆ ಡಿಕ್ಕಿ ಪಡಿಸಿದ ಪರಿಣಾಮ, ಕಾರಿನ ಮುಂಭಾಗದ ಗ್ಲಾಸ್, ಬ್ಯಾನೆಟ್ , ಬಂಪರ್, ರೇಡಿಯೇಟರ್, ಸ್ಟೇರಿಂಗ್ ಆಯಿಲ್ ಪಂಪ್, ಹೆಡ್ ಲೈಟ್ ಮತ್ತು ಮುಂಭಾಗದ ಬಲಭಾಗದ ಡೋರ್ ಜಖಂಗೊಂಡಿರುತ್ತೆ.

 

– ಹಲ್ಲೆ : 01

ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಸುನಂದಮ್ಮ ಕೊಂ ಮುನಿಯಪ್ಪ, ಪುತ್ರಸೊನ್ನೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ದಿನಾಂಕ 15.12.2019 ರಂದು ಬೆಳಿಗ್ಗೆ 08.00 ಗಂಟೆಯಲ್ಲಿ ತಿಮ್ಮೆಗೌಡ ರವರ ಮನೆಯ ಹಿಂದಿನ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ, ಕೃಷ್ಣಮ್ಮ ರವರು ದೂರುದಾರರಿಗೆ ಒಡವೆ ವಿಚಾರದಲ್ಲಿ ಬೈಯ್ಯುತ್ತಿದ್ದು, ದೂರುದಾರರು ತಾನು ವಡವೆಗಳನ್ನು ತೆಗೆದುಕೊಂಡು ಹೋಗಿಲ್ಲವೆಂದು ಹೇಳುತ್ತಿದ್ದಂತೆ ಗಜೇಂದ್ರ, ಗಂಗ ಮತ್ತು ರಾಮಪ್ಪ ರವರು ಕೈಗಳಿಂದ ಮತ್ತು ಕಲ್ಲಿನಿಂದ ದೂರುದಾರರಿಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆ.

 

– ಅಸ್ವಾಭಾವಿಕಮರಣಪ್ರಕರಣ : 01

ರಾಬರ್ಟ್‌‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ ಮಲರ್ ವೇಣಿ, ಸ್ವಾಮಿನಾಥಪುರಂ, ಕೆ.ಜಿ.ಎಫ್ ರವರ ಗಂಡನಾದ ಮದನ್ ಕುಮಾರ್, 36 ವರ್ಷ ರವರಿಗೆ ಸುಮಾರು 15 ವರ್ಷಗಳಿಂದ ಮೂರ್ಛೆ ಖಾಯಿಲೆಯಿದ್ದು, ಚಿಕಿತ್ಸೆ ಕೊಡಿಸಿದ್ದರೂ ಗುಣಮುಖವಾಗದೇ ಇದ್ದುದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 15.12.2019 ರಂದು ಬೆಳಿಗ್ಗೆ 6.00 ಗಂಟೆಯಲ್ಲಿ ಅಡುಗೆ ಕೋಣೆಯಲ್ಲಿ ಮೇಲ್ಚಾವಣಿಗೆ ಅಳವಡಿಸಿರುವ ಒಂದು ಕಬ್ಬಿಣದ ಪೈಪ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *