ದಿನದ ಅಪರಾಧಗಳ ಪಕ್ಷಿನೋಟ 16ನೇ ಅಕ್ಟೋಬರ್‌ 2019

– ರಸ್ತೆ ಅಪಘಾತಗಳು : 02

ಮಾರಿಕುಪ್ಪಂ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಗಂಗಪ್ಪ ಬಿನ್ ಕೆಂಚಪ್ಪ, ಅಪ್ಪೇನಹಳ್ಳಿ ಗ್ರಾಮ, ಬಂಗಾರಪೇಟೆ ತಾಲ್ಲೂಕು ರವರು ತಾಯಿ ತಿಮ್ಮಕ್ಕ 78 ವರ್ಷ, ಮಗ ಮಂಜುನಾಥ ರವರೊಂದಿಗೆ ದಿನಾಂಕ 15.10.2019 ರಂದು  ಶ್ರೀಲಕ್ಷ್ಮೀ ಬಸ್ ನಲ್ಲಿ  ಚಾಲಕನ ಹಿಂಭಾಗದಲ್ಲಿರುವ ಸೀಟಿನಲ್ಲಿ ತಿಮ್ಮಕ್ಕ ರವರು ಕಿಟಕಿಯ ಕಡೆಗೆ ಪಿರ್ಯಾದಿಯು ತಿಮ್ಮಕ್ಕ ರವರ ಪಕ್ಕದಲ್ಲಿ ಕುಳಿತುಕೊಂಡು  ಕೆ.ಜಿ.ಎಫ್ ನಿಂದ ಅಪ್ಪೇನಹಳ್ಳಿ ಗ್ರಾಮಕ್ಕೆ ಹೋಗುತ್ತಿರುವಾಗ, ಮದ್ಯಾಹ್ನ 2:45 ಗಂಟೆಯಲ್ಲಿ ಮಾರಿಕುಪ್ಪಂ ನ ಮೈಸೂರು ಮೈನ್ಸ್ ಶಾಲೆಯ ಬಳಿ ಬಸ್ಸನ್ನು ಚಾಲಕನು ಏಕಾಏಕೀ ಬಲಕ್ಕೆ ತಿರುಗಿಸಿ ಬ್ರೈಕ್ ಅನ್ನು ಹಾಕಿದ್ದರಿಂದ ಬಸ್ಸಿನ ಮುಂಭಾಗದ ಬಲ ಚಕ್ರದ ಟಯರ್ ಸಿಡಿದ್ದದರಿಂದ ದೂರುದಾರರ ತಾಯಿ ಕುಳಿತಿದ್ದ ಸೀಟಿನ ಮುಂಭಾಗದ ಮಡ್ಗಾರ್ಡ್ ಕಳಚಿ ಬಂದು ತಿಮ್ಮಕ್ಕ ರವರು ಸಂದಿಯೊಳಗಿಂದ ಬಲಚಕ್ರದ ಕೆಳಗೆ ಬಿದ್ದು, ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ದೂರುದಾರರಿಗೂ ಗಾಯಗಳಾಗಿರುತ್ತದೆ.

ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ರಸ್ತೆ ಅಪಘಾತ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಲಕ್ಷ್ಮಮ್ಮ, ಪೀಲವಾರ ಗ್ರಾಮ, ಕೆ.ಜಿ.ಎಫ್ ತಾಲ್ಲೂಕು ರವರ ಗಂಡ ಅಶೋಕ್ ಕುಮಾರ್ ರವರು ದಿನಾಂಕ 08.10.2019 ರಂದು ಸಂಜೆ 5.00 ಗಂಟೆಯಲ್ಲಿ ಪೀಲವಾರ ಗ್ರಾಮದಿಂದ ರಾಜಪೇಟೆ ರಸ್ತೆಗೆ ಹೋಗಲು ಡಿಸ್ಕವರಿ ದ್ವಿ ಚಕ್ರ ವಾಹನ ಸಂಖ್ಯೆ KA-08 R-0046 ಅನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂಭಾಗದ  ಚಲಾಯಿಸಿಕೊಂಡು ಹೋಗುತ್ತಿರುವಾಗ, ರಾಜಪೇಟೆ ರಸ್ತೆಯ ಕಡೆಯಿಂದ ಟಿ.ವಿ.ಎಸ್ ಎಕ್ಸ್.ಎಲ್ ದ್ವಿಚಕ್ರ ವಾಹನ ಸಂಖ್ಯೆ AP-03, G-841 ವಾಹನದ ಸವಾರ ದ್ವಿಚಕ್ರ ವಾಹನವನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅಶೋಕ್‌ ಕುಮಾರ್‌ ರವರ ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿದ ಪ್ರಯುಕ್ತ ಅಶೋಕ್ ಕುಮಾರ್ ರವರು ದ್ವಿಚಕ್ರ ವಾಹನ ಸಮೇತ ಕೆಳಗೆ ಬಿದ್ದು ತೀವ್ರತರಹದ ರಕ್ತ ಗಾಯಗಳಾಗಿರುತ್ತದೆ.

Leave a Reply

Your email address will not be published. Required fields are marked *