ದಿನದ ಅಪರಾಧಗಳ ಪಕ್ಷಿನೋಟ 16ನೇ ಜುಲೈ 2019

ಕೆ.ಜಿ.ಎಫ್. ಪೊಲೀಸ್‌ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಿನಾಂಕ:15.07.2019 ರಂದು ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

– ಕನ್ನ ಕಳುವು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಕನ್ನ ಕಳುವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 29/06/2019 ರಂದು ಈ ಕೇಸಿನ ದೂರುದಾರರಾದ ಶ್ರೀಮತಿ ನಿರ್ಮಲಾ, ಬೆಂಗನೂರು, ಬಂಗಾರಪೇಟೆ ರವರಿಗೆ ಅನಾರೋಗ್ಯದ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ತನ್ನ ಗಂಡನೊಂದಿಗೆ ಬೆಂಗಳೂರಿಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಅಲ್ಲಿಯೇ ತನ್ನ ಮಗನ ಮನೆಯಲ್ಲಿ ಇದ್ದು ದಿನಾಂಕ 15.07.2019 ರಂದು ಮದ್ಯಾಹ್ನ ಸುಮಾರು 3.00 ಗಂಟೆಗೆ ಬಂದು ನೋಡಲಾಗಿ ಮನೆಯ ಬಾಗಿಲನ್ನು ಯಾರೋ ಕಳ್ಳರು ಯಾವುದೋ ಒಂದು ಆಯುಧದಿಂದ ಮೀಟಿ ಬೀಗವನ್ನು ಮುರಿದು ಮನೆಯೊಳಗೆ ಪ್ರವೇಶಿಸಿ ಮನೆಯ ಒಳಗಿದ್ದ ಮೂರು ಬೀರುಗಳನ್ನು ತೆಗೆದು ಅದರಲ್ಲಿದ್ದ ಬಂಗಾರದ ವಡವೆಗಳು, ಬೆಳ್ಳಿ ಸಾಮಾನುಗಳು ಮತ್ತು 1000/- ರೂ ನಗದು ಹಣವನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಒಟ್ಟು ಬೆಲೆ 70,000/- ರೂಗಳಾಗಿರುತ್ತದೆ.

– ಸಾಧಾರಣ ಕಳ್ಳತನ : 02

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 14/07/2019 ರಂದು ರಾತ್ರಿ ದೂರುದಾರರಾದ ಶ್ರೀ.ಎನ್.ಪ್ರತಾಪ್, ವಿಜಯ್‌ನಗರ, ಬಂಗಾರಪೇಟೆ ರವರು ತನ್ನ ರಾಯಲ್ ಎನ್-ಫೀಲ್ಡ್ ಕ್ಲಾಸಿಕ್ 350 ದ್ವಿಚಕ್ರ ವಾಹನವನ್ನು ಮನೆಯ ಮುಂಭಾಗ ನಿಲ್ಲಿಸಿದ್ದು, ದಿನಾಂಕ: 15/07/2019 ರ ಬೆಳಿಗ್ಗೆ ಸುಮಾರು 6.00 ಗಂಟೆ ಸಮಯದಲ್ಲಿ ಬಂದು ನೋಡಲಾಗಿ ರಾಯಲ್ ಎನ್-ಫೀಲ್ಡ್ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ವಾಹನ ಕಳುವು ಪ್ರಕರಣ ದಾಖಲಾಗಿರುತ್ತದೆ. ದಿನಾಂಕ: 14/07/2019 ರಂದು ಸಂಜೆ 4.30 ಗಂಟೆಗೆ ದೂರುದಾರರಾದ ಗಂಗಪ್ಪ, ಚಿನ್ನಂಡಹಳ್ಳಿ ಗ್ರಾಮ, ಮುಳಬಾಗಿಲು, ಕೋಲಾರ ರವರು ತನ್ನ ದ್ವಿಚಕ್ರ ವಾಹನ ಬಜಾಜ್ ಪಲ್ಸರ್ 150 ಸಿಸಿ ಸಂಖ್ಯೆ: ಕೆ.ಎ.53-ಇಜೆ-8890 ನ್ನು ಬಂಗಾರಪೇಟೆ ತಾಲ್ಲೂಕಿನ ತುಮಟಗೆರೆ ಗ್ರಾಮದ ತನ್ನ ಸಂಬಂಧಿಯಾದ ರಾಮಚಂದ್ರಪ್ಪ ಎಂಬುವವರ ಮನೆಯ ಮುಂದೆ ಲಾಕ್ ಮಾಡಿ ನಿಲ್ಲಿಸಿ, ದಿನಾಂಕ: 15/07/2019 ರ ಬೆಳಗಿನ ಜಾವ 5.30 ಗಂಟೆ ಸಮಯದಲ್ಲಿ ಹೊರಗೆ ಬಂದು ನೋಡಲಾಗಿ ತನ್ನ ಪಲ್ಸರ್ ದ್ವಿಚಕ್ರ ವಾಹನವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ.

–ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು : 01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗಿರುತ್ತದೆ. ಈ ಕೇಸಿನ ದೂರುದಾರರಾದ ಮೊಹ್ಮದ್ ಜಾವಿದ್‌, ಉರಿಗಾಂಪೇಟೆ ರಾಬರ್ಟ್‌‌ಸನ್‌ಪೇಟೆ ವಾಸಿ ರವರ ಮಗಳಾದ ಯಾಸ್ಮಿನ್ ತಾಜ್ ರವರನ್ನು ಈಗ್ಗೆ ಸುಮಾರು ಎಂಟು ವರ್ಷಗಳ ಹಿಂದೆ ಐನೋರ ಹೊಸಹಳ್ಳಿ ಗ್ರಾಮದ ವಾಸಿಯಾದ ಮುಬಾರಕ್‌ ಪಾಷ ರವರೊಂದಿಗೆ ಮದುವೆಯಾಗಿದ್ದು, ಈಗ್ಗೆ ಸುಮಾರು ಆರು ವರ್ಷಗಳಿಂದ ಮುಬಾರಕ್‌ ಪಾಷ ರವರು ಅವರ ತಂದೆ ಇಮಾಮ್‌ ಸಾಬ್‌, ತಾಯಿ ಖುರ್ಷಿದ್ ಬೇಗಂ, ತಂಗಿ ಸಲ್ಮಾ ರವರ ಮಾತುಗಳನ್ನು ಕೇಳಿಕೊಂಡು, ಯಾಸ್ಮಿನ್ ತಾಜ್ ರವರೊಂದಿಗೆ ಸಂಸಾರದ ವಿಚಾರದಲ್ಲಿ ಮನೆಗೆ ಏನನ್ನೂ ಸಹ ತಂದು ಹಾಕದೇ ಇದ್ದು, ಇದನ್ನು ಕೇಳಿದ್ದಕ್ಕೆ ಸಾಂಸಾರಿಕ ವಿಚಾರದಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು, ಈ ವಿಚಾರದಲ್ಲಿ ಹಲವಾರು ಬಾರಿ ಪಂಚಾಯ್ತಿಗಳನ್ನು ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ. ಆದರೂ ಸಹ ಆರೋಪಿಗಳೆಲ್ಲರೂ ಯಾಸ್ಮಿನ್ ತಾಜ್ ರವರೊಂದಿಗೆ ಗಲಾಟೆ ಮಾಡುವುದು, ಕೆಟ್ಟ ಮಾತುಗಳಿಂದ ಬೈಯುವುದು ಹಾಗೂ ಹಲ್ಲೆ ಮಾಡುತ್ತಿರುತ್ತಾರೆ. ದಿನಾಂಕ 14.07.2019 ರಂದು ರಾತ್ರಿ ಸುಮಾರು 10.00 ಗಂಟೆಯಲ್ಲಿ ಪುನಃ ಮುಬಾರಕ್‌ ಪಾಷ ರವರು ಯಾಸ್ಮಿನ್ ತಾಜ್ ರವರೊಂದಿಗೆ ಗಲಾಟೆ ಮಾಡಿ, ಕೈಗಳಿಂದ ಹೊಡೆದು, ನೀನು ನಿನ್ನ ತವರು ಮನೆಗೆ ಹೋಗದಿದ್ದರೆ ಸಾಯಿಸುತ್ತೇನೆಂದು ಪ್ರಾಣಬೆದರಿಕೆ ಹಾಕಿರುತ್ತಾರೆ.

–ಹಲ್ಲೆ : 01

ಬೇತಮಂಗಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಸಂಬಂಧಿಸಿದ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀ. ಮುರಳಿ ಬಿನ್ ಗುರಪ್ಪ, ಹುತ್ತೂರು ಗ್ರಾಮ, ಕೋಲಾರ ತಾಲ್ಲೂಕು ರವರು ಗುಟ್ಟಹಳ್ಳಿ ಸರ್ಕಲ್ ಬಳಿ ಇರುವ ಕೃಷ್ಣಮೂರ್ತಿ ರವರ ತೋಟದಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಿದ್ದು, ದಿನಾಂಕ:14.07.2019 ರಂದು ರಾತ್ರಿ 9-00 ಗಂಟೆಯಲ್ಲಿ ದೂರುದಾರರು ತೋಟಕ್ಕೆ ಹೋಗಿದ್ದಾಗ, ವೆಂಕಟಾಪುರ ಗ್ರಾಮದ ವಾಸಿಗಳಾದ ಕೃಷ್ಣಪ್ಪ ಮತ್ತು ಆಂಜು ರವರು ದೂರುದಾರರ ಬಳಿ ಬಂದು ಏಕೆ ಇಲ್ಲಗೆ ಬಂದಿದ್ದೀಯಾ ಎಂದು ವಿನಾ: ಕಾರಣ ಜಗಳ ತೆಗೆದು ಕೈಗಳಿಂದ ಮತ್ತು ಕೋಲುಗಳಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆ.

Leave a Reply

Your email address will not be published. Required fields are marked *