ದಿನದ ಅಪರಾಧಗಳ ಪಕ್ಷಿನೋಟ 15 ನೇ ನವೆಂಬರ್‌ 2018

ಕೆ.ಜಿ.ಎಫ್. ಪೊಲೀಸ್ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಿನಾಂಕ: 14.11.2018 ರಂದು   ದಾಖಲಾಗಿರುವ ಅಪರಾಧ ಪ್ರಕರಣಗಳ ವಿವರಗಳು.

 ವ್ಯಕ್ತಿ ಕಾಣೆಯಾಗಿರುವ ಪ್ರಕರಣಗಳು :  01

ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ದೂರುದಾರರಾದ ಶ್ರೀಮತಿ. ಪುಷ್ಪಾಂಜಲಿ ಕೊಂ ಶ್ರೀನಿವಾಸಲು, ಅಮೃತಹಳ್ಳಿ, ಬೆಂಗಳೂರು ರವರ ಗಂಡ ಶ್ರೀನಿವಾಸಲು,  35 ವರ್ಷ ರವರು ದಿನಾಂಕ 10.11.2018 ರಂದು ಬಂಗಾರಪೇಟೆಯ ವಿವೇಕಾನಂದ ನಗರದಲ್ಲಿದ್ದ ದೂರುದಾರರನ್ನು ಕರೆದುಕೊಂಡು ಹೋಗಲು ಮನೆಗೆ ಬಂದಿದ್ದು, ನಂತರ ದಿನಾಂಕ 12.11.2018 ರಂದು ಮದ್ಯಾಹ್ನ 1.30 ಗಂಟೆಯಲ್ಲಿ ಶ್ರೀನಿವಾಸಲು ರವರು ವಿವೇಕಾನಂದನಗರದಲ್ಲಿರುವ ಅವರ ಚಿಕ್ಕಪ್ಪ ಗೋವಿಂದರಾಜು ರವರ ಮನೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಪುನಃ ಮನೆಗೆ ವಾಪಸ್ಸು ಬರದೇ ಕಾಣೆಯಾಗಿರುತ್ತಾರೆ.

 

Leave a Reply

Your email address will not be published. Required fields are marked *